ಬೆಳಗಾವಿ: ಚಂದ್ರಯಾನ-3ರ (Chandrayaana-3) ವಿಕ್ರಮ ಲ್ಯಾಂಡರ್ ಚಂದಿರನನ್ನು ಸ್ಪರ್ಶ ಮಾಡುವ ಗಳಿಗೆಯನ್ನು ನೋಡಲು ವಿಶ್ವವೇ ಕೌತಕದಿಂದ ಕಾಯುತ್ತಿದೆ. ಚಂದ್ರಯಾನ-3 ಉಪಗ್ರಹ ಮತ್ತು ರಾಕೆಟ್ನ ತಯಾರಿಕೆಯಲ್ಲಿ ಅನೇಕ ವಿಜ್ಞಾನಿಗಳ ಪರಿಶ್ರಮವಿದೆ. ಈ ಪರಿಶ್ರಮದಲ್ಲಿ ರಾಜ್ಯದ ಕುಂದಾನಗರಿ ಬೆಳಗಾವಿ (Belagavi)ಯ ಓರ್ವ ಯುವ ವಿಜ್ಞಾಯ ಪಾಲು ಇದೆ. ಹೌದು ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿದ ರಾಕೆಟ್ನ ಬಿಡಿ ಭಾಗಗಳನ್ನು ತಯಾರಿಸಿದ್ದು, ಬೆಳಗಾವಿಯಲ್ಲಿರುವ ರಾಜ್ಯದ ಪ್ರತಿಷ್ಠಿತ ಕಂಪನಿಯ ಸ್ಥಾಪಕ.
ಹೌದು ಚಂದ್ರಯಾನ-3 ರಾಕೇಟ್ಗೆ ಕೆಲವು ಬಿಡಿ ಭಾಗಗಳನ್ನು ತಯಾರಿಸಿದ್ದು, ಬೆಳಗಾವಿಯ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್. ಸ್ವದೇಶಿ ಹಾಗೂ ವಿದೇಶಿ ಟೆಕ್ನಾಲಜಿಯನ್ನು ಬಳಸಿ ರಾಕೇಟ್ನ ಬಿಡಿ ಭಾಗಗಳನ್ನು ತಯಾರಿಸಾಲಾಗಿದೆ. ಈ ಹಿಂದೆ 2013 ರಲ್ಲಿ ನಡೆದ ಭಾರತದ ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳಯಾನ)ದ ರಾಕೇಟ್ನ ಬಿಡಿಭಾಗಗಳನ್ನೂ ಸಹ ಇದೇ ಕಂಪನಿ ತಯಾರಿಸಿತ್ತು. ಈ ಉಪಗ್ರಹ ಐತಿಹಾಸಿಕ ಪಯಣ ಬೆಳೆಸಿ ಮಂಗಳನ ಅಂಗಳದಲ್ಲಿ ಪ್ರವೇಶ ಮಾಡಿತ್ತು. ಅಂದು ಇಡೀ ಭಾರತವೇ ಹೆಮ್ಮೆ ಪಟ್ಟಿತ್ತು. ಈಗ ಮತ್ತೆ ಚಂದ್ರಯಾನ-3ರ ರಾಕೇಟ್ನ ಬಿಡಿಭಾಗಗಳನ್ನು ಇದೇ ಕಂಪನಿ ತಯಾರಿಸಿದೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿ ಸ್ಥಾಪಕ ದೀಪಕ ಧಡೂತಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಚಂದ್ರಯಾನ-3 ಮೊದಲ ಹಂತದಲ್ಲೇ ಯಶಸ್ವಿಯಾಗಿದ್ದು ಇಡೀ ಜಗತ್ತು ನಿಬ್ಬೆರಗಾಗಿ ಭಾರತದತ್ತ ನೋಡುತ್ತಿದೆ. ಚಂದ್ರಯಾನ 3 ಸಕ್ಸಸ್ ಆಗಲಿ ಭಾರತೀಯರು ವಿಶ್ವದ ಮುಂದೆ ಮತ್ತೊಮ್ಮೆ ಹೆಮ್ಮೆ ಪಡುವಂತಾಗಲಿ ಎನ್ನುವುದು ಪ್ರತಿ ಭಾರತೀಯನ ಆಶಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:42 am, Wed, 23 August 23