ಬೆಳಗಾವಿ, ಆ.23: ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ3ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಹೌದು, ಜುಲೈ 14 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಚಂದ್ರಯಾನ-3(Chandrayaan-3)ಯನ್ನು ಉಡಾವಣೆ ಮಾಡಿತ್ತು. ಇದೀಗ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಹೌದು, ಚಂದ್ರನ ಕಡೆಗೆ 34 ದಿನಗಳ ಸುದೀರ್ಘ ಪ್ರಯಾಣದ ನಂತರ ಇದೀಗ ಲ್ಯಾಂಡ್ ಆಗಿದ್ದು, ಇಡೀ ಭಾರತೀಯರು ಹೆಮ್ಮೆಪಡುವಂತೆ ಮಾಡಿದೆ. ಜೊತೆಗೆ ಇದರಲ್ಲಿ ಕರ್ನಾಟಕದ ಬೆಳಗಾವಿ ವಿಜ್ಞಾನಿ ನೀಡಿದ ಸೆನ್ಸಾರ್ ಕೂಡ ಅಳವಡಿಸಲಾಗಿದ್ದು, ಮತ್ತೊಂದು ಹೆಮ್ಮೆಯ ವಿಷಯವಾಗಿದೆ.
ಚಂದ್ರಯಾನ ಯಶಸ್ವಿ ಲ್ಯಾಂಡಿಗ್ನಲ್ಲಿ ಬೆಳಗಾವಿಯ ವಿಜ್ಞಾನಿ ನೀಡಿದ ಸೆನ್ಸಾರ್ ಕೂಡ ಪ್ರಮುಖ ಪಾತ್ರ ವಹಿಸಿದೆ. ಹೌದು, ಈ ಹಿಂದೆ ಅಮೇರಿಕಾದಲ್ಲಿದ್ದ ವಿಜ್ಞಾನಿ ದೀಪಕ್ ಧಡೂತಿ ಅವರು ಅಬ್ದುಲ್ ಕಲಾಂ ಅವರ ಪ್ರೇರಣೆಯಿಂದ ಭಾರತಕ್ಕೆ ಬಂದು, ಬೆಳಗಾವಿಯಲ್ಲಿ ತಮ್ಮದೇ ಆದ ಸರ್ವೋಕಂಟ್ರೊಲ್ಸ್ ಏರೋಸ್ಪೇಸ್ ಮತ್ತು ಟೆಕ್ನಾಲಜಿ ಪ್ರಾ.ಲಿ ಎಂಬ ಹೆಸರಿನ ಸ್ವಂತ ಕಂಪನಿಯನ್ನು ಸ್ಥಾಪಿಸಿ, ಎಂಡಿ ಕೂಡ ಆಗಿದ್ದಾರೆ.
ಕಳೆದ ಇಪ್ಪತ್ತು ವರ್ಷದಿಂದ ಬೆಳಗಾವಿಯಲ್ಲಿ ತಮ್ಮದೆ ಕಂಪನಿ ನಡೆಸುತ್ತಿರುವ ವಿಜ್ಞಾನಿ ದೀಪಕ್ ಧಡೂತಿಯವರು ಸ್ಥಾಪಿಸಿದ ಈ ಕಂಪನಿಯಲ್ಲಿ ಸೆನ್ಸಾರ್ಗಳನ್ನು ಸಿದ್ದಪಡಿಸುತ್ತಾರೆ. ಹೌದು, ಚಂದ್ರಯಾನ-3ಗೆ ಕ್ರಯೋಜನಿಕ್ ಸೆನ್ಸಾರ್ ಸ್ಪೇಸ್ ಹೆಸರಿನ ಸೆನ್ಸಾರ್ ಸಿದ್ದಪಡಿಸಿ ಎರಡು ವರ್ಷದ ಹಿಂದೆ ನೀಡಿದ್ದರು. ಇದನ್ನು ಸೊಲಾರ ಪ್ಯಾನಲ್ ಎನರ್ಜಿ ಸಲುವಾಗಿ ಮತ್ತು ವಿಕ್ರಮ್ನ ಮೊಮೆಂಟ್ ಕಂಟ್ರೋಲ್ಸೆನ್ನಲ್ಲಿ ಇದನ್ನು ಬಳಕೆ ಮಾಡುತ್ತಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ