ಗುತ್ತಿಗೆ ನೌಕರರ ವೇತನಕ್ಕೆ ಕತ್ತರಿ; ವಿಜಯನಗರ ಶ್ರೀಕೃಷ್ಣ ದೇವರಾಯ ವಿ.ವಿ. ವಿರುದ್ಧ ಆಕ್ರೋಶ

ಗುತ್ತಿಗೆ ಆಧಾರಿತ ನೌಕರರಿಗೆ ಬರವುದೇ ಅಲ್ಪಸ್ವಲ್ಪ ವೇತನ. ಅದರಲ್ಲೂ ವಿನಾ ಕಾರಣ ಕಡಿತ ಮಾಡುತ್ತಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿರುದ್ಧ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.

Important Highlight‌
ಗುತ್ತಿಗೆ ನೌಕರರ ವೇತನಕ್ಕೆ ಕತ್ತರಿ; ವಿಜಯನಗರ ಶ್ರೀಕೃಷ್ಣ ದೇವರಾಯ ವಿ.ವಿ. ವಿರುದ್ಧ ಆಕ್ರೋಶ
ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ
Follow us
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: Rakesh Nayak Manchi

Updated on:Jul 30, 2023 | 7:33 PM

ಬಳ್ಳಾರಿ, ಜುಲೈ 30: ಸದಾ ಸುದ್ದಿಯಲ್ಲಿರುವ ವಿಜಯನಗರ ಶ್ರೀಕೃಷ್ಣ ದೇವರಾಯ (Vijayanagara Sree Krishna Devaraya University) ಇದೀಗ ಮತ್ತೊಂದು ಗೋಲಮಾಲ್ ಮೂಲಕ ಸುದ್ದಿಯಾಗುತ್ತಿದೆ. ಈ ವಿಶ್ವವಿದ್ಯಾಲಯದಲ್ಲಿ ನಿತ್ಯ ನೂರಾರು ಜನರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಪಾವತಿಯಾಗುವ ಸಂಬಳದಲ್ಲಿ ಪ್ರತಿ ತಿಂಗಳು ಕಾರಣವಿಲ್ಲದೇ 2,800 ರಿಂದ 3 ಸಾವಿರ ರೂಪಾಯಿ ಕಡಿತ ಮಾಡಲಾಗುತ್ತಿದೆ.

ಈ ರೀತಿ ವೇತನದಲ್ಲಿ ಕಡಿತ ಮಾಡುತ್ತಿರುವುದು ಇದು ಮೊದಲೇನಲ್ಲ. ಕಳೆದ 28 ತಿಂಗಳಿಂದ ವೇತನಕ್ಕೆ ಕತ್ತರಿ ಬಿಳುತ್ತಿದೆ. ಧಾರವಾಡದ ‘ಇಂಡಸ್‌ ಸೆಕ್ಯುರಿಟಿ ಸರ್ವಿಸಸ್‌ ಮತ್ತು ಡಿಟೆಕ್ಟಿವ್‌ ಏಜೆನ್ಸಿ ವಿಶ್ವವಿದ್ಯಾಲಯದೊಂದಿಗೆ ಮಾಡಿಕೊಂಡ ಒಪ್ಪಂದದ ವೇತನದ ಪ್ರಕಾರ ಸಂಬಳ ಪಾವತಿ‌ಸಿಲ್ಲ. ಹೀಗಾಗಿ ಹೊರಗುತ್ತಿಗೆ ನೌಕರರು ನಮ್ಮ ಸಂಬಳದಲ್ಲಿ‌ ಕಡಿತ ಮಾಡಿದ ಹಣ ನಮಗೆ ಕೊಡಿ ಅಂತಾ ಬೀದಿಗೀಳಿದಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ನೀರಿನ‌ ಕೊರೆತೆ, ಭತ್ತ ನಾಟಿ ಬದಲು ಕೂರಿಗೆ ಬಿತ್ತನೆ ಮಾಡುವಂತೆ ರೈತರಿಗೆ ಸಲಹೆ ನೀಡಿದ ಕೃಷಿ ಇಲಾಖೆ

137 ಹೊರ ಗುತ್ತಿಗೆ ನೌಕರರ ಸಂಬಳದಲ್ಲಿ ಕಾರಣವಿಲ್ಲದೇ ಕಡಿತವಾಗುತ್ತಿರುವ ವಿಚಾರ ಸಿಂಡಿಕೇಟ್ ಸಭೆಯ ಗಮನಕ್ಕೂ ಈಗಾಗಲೇ ಬಂದಾಗಿದೆ. ಗುತ್ತಿಗೆ ನೌಕರರ ವೇತನ ಪಾವತಿಯಲ್ಲಿ ಅಕ್ರಮ ನಡೆದಿದೆ ಎಂಬ ‌ಆರೋಪಗಳ ವಿಚಾರಣೆಗೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸತ್ಯಶೋಧನಾ ಸಮಿತಿ ರಚಿಸಿ ವರದಿ‌ ಸಹ ನೀಡಿದೆ. ವರದಿ ಕೊಟ್ಟು 9 ತಿಂಗಳಾದರೂ ಯಾರ ಮೇಲೂ ಕ್ರಮ ಕೈಗೊಳ್ಳದೆ ವಿ.ವಿ. ಹಿರಿಯ ಅಧಿಕಾರಿಗಳು ತಟಸ್ಥವಾಗಿದ್ದಾರೆ. ಹೀಗಾಗಿ ಹೊರಗುತ್ತಿಗೆ ನೌಕರರ ಸಂಬಳದಿಂದ ಕಡಿತಗೊಳಿಸಿರುವ ಸುಮಾರು ಒಂದು ಕೋಟಿಗೂ ಅಧಿಕ ಹಣವನ್ನು ನಮಗೆ ಪಾವತಿ ಮಾಡಿ ಅಂತಾ ಹೊರಗುತ್ತಿಗೆ ನೌಕರರು ಇದೀಗ ಪಟ್ಟು ಹಿಡಿದಿದ್ದಾರೆ.

ಈ ಕುರಿತು ವಿಶ್ವವಿದ್ಯಾಲಯದ ಕುಲಪತಿ ಸಿದ್ದು ಪಿ ಅಲಗೂರ ಹಾಗೂ ಕುಲಸಚಿವ ಎಸ್​​ಸಿ ಪಾಟೀಲ್ ಅವರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ವಿಶ್ವವಿದ್ಯಾಲಯ ನೌಕರರ ವೇತನದ ಹಣವನ್ನ ಕುಲಪತಿಗಳು ಲಪಟಾಯಿಸಿದ್ದಾರೆ ಅನ್ನೋ ಆರೋಪ‌ ಸಹ ಇದೆ. ಹೀಗಾಗಿ ನಿವೃತ್ತಿ ಅಂಚಿನಲ್ಲಿರುವ ಕುಲಪತಿಗಳಿಂದ ನಮಗೆ ನಮ್ಮ ಸಂಬಳದ ಹಣವನ್ನ ಕೊಡಿಸಿ ಅಂತಾ ಹೊರಗುತ್ತಿಗೆ ನೌಕರರು ಬೀದಿಗೀಳಿದಿದ್ದಾರೆ. ಆದರೆ ಕುಲಪತಿಗಳು ತಪ್ಪು ಮಾಡಿದ್ದಾರೋ ಅಥವಾ ತಪ್ಪು ಮಾಡಿದವರ ರಕ್ಷಣೆ ಮಾಡುತ್ತಿದ್ದಾರೋ ಅನ್ನೋ ಅನುಮಾನ ಇದೀಗ ಮೂಡಿದೆ. ಹೀಗಾಗಿ ಹೊರಗುತ್ತಿಗೆ ನೌಕರರಿಗೆ ಸೇರಬೇಕಾದ ಹಣದ ಬಗ್ಗೆ ಜಿಲ್ಲಾ‌ ಪೊಲೀಸ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಕಡಿತಗೊಂಡ ಹಣ ಎನಾಯಿತು? ಯಾರು ಕತ್ತರಿ ಹಾಕಿ ಜೇಬಿಗೆ ಇಳಿಸಿಕೊಂಡಿದ್ದಾರೆ? ಅನ್ನೋದು ಪೊಲೀಸರು ತನಿಖೆಯಿಂದ ಬಯಲಿಗೆ ಬರಬೇಕಾಗಿದೆ

ರಾಜ್ಯದ ಮತ್ತಷ್ಟು ಸುದ್ದಿಗಳಣ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 pm, Sun, 30 July 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು