ಬಾಗಲಕೋಟೆ, ಆಗಸ್ಟ್ 16: ನಗರದ ಸೋನಾರ ಬಡಾವಣೆಯಲ್ಲಿ ಅನುಮತಿಯಿಲ್ಲದೆ ಪ್ರತಿಷ್ಠಾಪನೆ ಮಾಡಿರುವ ಶಿವಾಜಿ ಪುತ್ಥಳಿಯನ್ನು (Shivaji statue) ಜೆಸಿಬಿ ಮೂಲಕ ನಗರಸಭೆ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ಡಿಸಿ ಆದೇಶದ ಮೇರೆಗೆ ಪ್ರತಿಮೆ ಸ್ಥಳಾಂತರಿಸಲಾಗಿದ್ದು, ಟಾಟಾ ಏಸ್ ವಾಹನದಲ್ಲಿ ಶಿವಾಜಿ ಪ್ರತಿಮೆಯನ್ನು ನಗರಸಭೆ ಸಿಬ್ಬಂದಿ ಸಾಗಿಸಿದ್ದಾರೆ. ಈ ವೇಳೆ ವಿರೋಧಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 18ರ ಮಧ್ಯರಾತ್ರಿ 12ರವರೆಗೆ ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬಾಗಲಕೋಟೆ ಡಿಸಿ ಕೆ.ಎಂ.ಜಾನಕಿ ಆದೇಶ ಹೊರಡಿಸಿದ್ದಾರೆ.
ಪುತ್ಥಳಿ ತೆರವುಗೊಳಿಸದಂತೆ ಬಿಜೆಪಿ, ಹಿಂದೂ ಕಾರ್ಯಕರ್ತರ ಪಟ್ಟು ಹಿಡಿದಿದ್ದು, ಪ್ರತಿಭಟನೆ ನಡೆಸಿದ್ದರು. ಶಿವಾಜಿ ಪುತ್ಥಳಿ ಇರುವ ಸ್ಥಳದಲ್ಲೇ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದ್ದು, 3 DAR, 1 KSRP ತುಕಡಿ ಸೇರಿ 100ಕ್ಕೂ ಹೆಚ್ಚು ನಿಯೋಜನೆ ಮಾಡಲಾಗಿದೆ. ಜತೆಗೆ ಪುತ್ಥಳಿ ಇರುವ ಸ್ಥಳದಲ್ಲಿ ಸಿಸಿಕ್ಯಾಮರಾ ಅಳವಡಿಸಲಾಗಿದೆ.
ಪ್ರತಿಭಟನಾನಿರತರನ್ನು ಮೇಲೆಬ್ಬಿಸಲು ಎಸ್ಪಿ, ಪೊಲೀಸರು ಯತ್ನಿಸಿದ್ದು, ಎಸ್ಪಿ ಜಯಪ್ರಕಾಶ್ ಜತೆ ಮಾತಿನಚಕಮಕಿ ಉಂಟಾಗಿದೆ. ಈ ವೇಳೆ 15 ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಾಗಲಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿದ್ದು, ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರಿಂದ ಏನು ತೊಂದರೆ? ಎಲ್ಲ ಕಡೆ ಅನುಮತಿ ಪಡೆದು ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದಾರಾ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ಯಾವ ಶಾಸಕರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ; ಕೋಟ ಶ್ರೀನಿವಾಸ ಪೂಜಾರಿ
ಕಳೆದ ಮೂರು ದಿನದಿಂದ ಬಾಗಲಕೋಟೆ ನಗರದಲ್ಲಿ ಶಿವಾಜಿ ಪುತ್ಥಳಿಯದ್ದೇ ಚರ್ಚೆ. ಮೂರು ದಿನದ ಹಿಂದೆ ರಾತ್ರೋರಾತ್ರಿ ನಗರದ ಕಾಂಚನ ಪಾರ್ಕ್ ಬಳಿಯ ನಗರಸಭೆ ಜಾಗದಲ್ಲಿ ಆರು ಅಡಿ ಎತ್ತರ ಶಿವಾಜಿ ಪುತ್ಥಳಿಯನ್ನು ಅಪರಿಚಿತರು ಪ್ರತಿಷ್ಠಾಪನೆ ಮಾಡಿ ಹೋಗಿದ್ದಾರೆ. ಪ್ರತಿಷ್ಠಾಪನೆ ಮಾಡಿದವರು ಯಾರು ಅಂತ ಗೊತ್ತಿದ್ದರೂ ಇದನ್ನು ಯಾರೋ ಹಿಂದು ಕಾರ್ಯಕರ್ತರು ಕೂರಿಸಿದ್ದಾರೆ. ಇದು ಖುಷಿಯ ವಿಚಾರ ಎಂದು ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರು ಖುಷಿ ಪಟ್ಟಿದ್ದರು.
ಇದನ್ನೂ ಓದಿ: ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ; ಹೊಸ ಪರಿಕಲ್ಪನೆ ಜಾರಿಗೆ ಮುಂದಾಗಿದ್ದೇವೆ ಎಂದ ಡಿಕೆ ಶಿವಕುಮಾರ್
ಆದರೆ ಇದ್ದಕ್ಕಿಂದಂತೆ ನಿನ್ನೆ ರಾತ್ರಿ ನಗರಸಭೆಯವರು ಪುತ್ಥಳಿ ತೆರವು ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇದರಿಂದ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು. ಯಾವುದೇ ಕಾರಣಕ್ಕೂ ಮೂರ್ತಿ ತೆರವುಗೊಳಿಸಲು ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದರು. ಮೂರ್ತಿ ತೆರವು ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಜಿಲ್ಲಾಧ್ಯಕ್ಷ ಶಿವಾಜಿ ಚಲೊ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:29 pm, Wed, 16 August 23