ಮುಗಿಯದ 108 ಸಿಬ್ಬಂದಿಯ ವೇತನ ಸಮಸ್ಯೆ: ಆ 18 ರೊಳಗೆ ವೇತನ ನೀಡದಿದ್ದರೆ ಪ್ರತಿಭಟನೆ ಎಂದ ನೌಕರರು
ಮಾರ್ಚ್ ತಿಂಗಳ ವೇತನ ಹಾಗೂ ಕಡಿತ ಮಾಡಿರುವ ಹಿಣ ನೀಡದ ಹಿನ್ನಲೆ, ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ನೌಕರರ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 18ರ ವರೆಗೂ ಕಾಲಾವಕಾಶ ನೀಡಿದ್ದು, ವೇತನ ನೀಡದಿದ್ದರೆ ಕರ್ತವ್ಯಕ್ಕೆ ಗೈರಾಗುವುದಾಗಿ ಸಕಾರ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಆಗಸ್ಟ್ 10: ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮೊದಲು ಜಾರಿ ಮಾಡಿದ್ದೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಗ್ಯಾರಂಟಿ ಯೋಜನೆ. ಆದರೆ ಸರ್ಕಾರ ಯೋಜನೆ ಜಾರಿ ಮಾಡಿದ ಬಳಿಕ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ಸಿಗದಂತಾಗಿತ್ತು. ಇದೀಗ ಮತ್ತೆ 108 ಸಿಬ್ಬಂದಿಯ (108 employees) ವೇತನದ ಸಮಸ್ಯೆ ಉಂಟಾಗಿದ್ದು, ಮತ್ತೆ ಹೋರಾಟಕ್ಕೆ ಆ್ಯಂಬುಲೆನ್ಸ್ ನೌಕರರು ಸಜ್ಜಾಗಿದ್ದಾರೆ.
ಆ್ಯಂಬುಲೆನ್ಸ್ ನೌಕರರಿಂದ ಆರೋಗ್ಯ ಇಲಾಖೆಗೆ ಎಚ್ಚರಿಕೆ
ಮಾರ್ಚ್ ತಿಂಗಳ ವೇತನ ಹಾಗೂ ಕಡಿತ ಮಾಡಿರುವ ಹಿಣ ನೀಡದ ಹಿನ್ನಲೆ ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ನೌಕರರ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 18 ರೊಳಗೆ ವೇತನ ನೀಡದಿದ್ದರೆ ಕರ್ತವ್ಯಕ್ಕೆ ಗೈರಾಗುವುದಾಗಿ 108 ಆ್ಯಂಬುಲೆನ್ಸ್ ನೌಕರರಿಂದ ಆರೋಗ್ಯ ಇಲಾಖೆಗೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಆಗಸ್ಟ್ 27 ರಂದು ರಾಜ್ಯದ 11 ಸಾವಿರ ಕಡೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ: ಡಿಕೆ ಶಿವಕುಮಾರ್
ಉಚಿತ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡ ಕಾಂಗ್ರೆಸ್
ಕೊಟ್ಟ ಮಾತು ಉಳಿಸಿಕೊಳ್ಳಲು ಉಚಿತ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಗುತ್ತಿಗೆದಾರು ಶಾಕ್ ಕೊಟ್ಟಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕಾಮಗಾರಿಗಳ ಬಾಕಿ ಬಿಲ್ ಕ್ಲಿಯರ್ ಆಗುತ್ತೋ ಇಲ್ವೋ ಎಂಬ ಆತಂಕ ಗುತ್ತಿಗೆದಾರರಿಗೆ ಕಾಡುತ್ತಿದ್ದೆ. ಕಳೆದ 2ವರ್ಷದಿಂದ ಸಾವಿರಾರು ಕೋಟಿ ರೂ. ಬಿಲ್ ಬಾಕಿ ಇದ್ದು, ಈಗ ಬಿಲ್ ಕ್ಲಿಯರ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: KKRDB Committee: ಕೆಕೆಆರ್ಡಿಬಿಗೆ ಸಮಿತಿ ರಚನೆ, ಅಧ್ಯಕ್ಷರಾಗಿ ಡಾ.ಅಜಯಸಿಂಗ್ ನೇಮಕ
ಕೆಲ ಗುತ್ತಿಗೆದಾರರು ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ತಿಕ್ಕಾಟ ಜೋರಾಗಿದೆ. ಇತ್ತೀಚೆಗೆ ಕೆಲ ಗುತ್ತಿಗೆದಾರರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಇಂದು ಸಚಿವ ಆರ್ ಅಶೋಕ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಡಿಕೆ ಶಿವಕುಮಾರ್ ಬಾಕಿ ಬಿಲ್ ವಿರತಣೆ ಮಾಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿಲ್ಲ ಅನ್ನೋದಾದ್ರೆ, ದೇವರ ಮುಂದೆ ಪ್ರಮಾಣ ಮಾಡಲಿ ಅಂತಲೂ ಸವಾಲು ಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.