Horoscope 24 August: ದಿನಭವಿಷ್ಯ, ಕೇಳಿ ಬಂದವರಿಗೆ ಇಂದು ಧನ ಸಹಾಯ: ಹೆಚ್ಚಿನ ಆದಾಯಕ್ಕೆ ನೀವು ಯೋಜನೆ ರೂಪಿಸುವಿರಿ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಐಂದ್ರ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:08 ರಿಂದ 03:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:21 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:28 ರಿಂದ 11:01ರ ವರೆಗೆ.
ಮೇಷ ರಾಶಿ: ನೌಕರರ ಬಗ್ಗೆ ನಿಮಗೆ ಕಾಳಜಿ ಇರುವುದು. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮಾಡುವ ಕೌಶಲವು ನಿಮ್ಮದಾಗಲಿದೆ. ರಪ್ತು ವ್ಯವಹಾರವು ನಿಮಗೆ ಲಾಭದಾಯಕವಾಗಲಿದೆ. ಉದ್ಯಮಿಗಳು ಇಂದು ನಿಮ್ಮನ್ನು ಭೇಟಿಯಾಗಬಹುದು. ಭೂಮಿಯ ಖರೀದಿಗೆ ಸೂಕ್ತ ಸಮಯವು ಇದಾಗಿದೆ. ಸಂಗಾತಿಯ ವಿಚಾರಕ್ಕೆ ನೀವು ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಮನಸ್ಸಿನ ಚಾಂಚಲ್ಯವನ್ನು ನೀವು ನಿಗ್ರಹಿಸುವ ವಿಧಾನವನ್ನು ಕಂಡಿಲುಕೊಂಡಿರುವಿರಿ. ಅಧಿಕೃತ ಮೂಲದಿಂದ ಬಂದ ವಿಚಾರಗಳನ್ನು ಮಾತ್ರ ನಂಬಿ. ನಿಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾಸವು ಇರಲಿದ್ದು ಕೆಲವು ಕೆಲಸಗಳಿಗೆ ಇದು ತೊಡಕನ್ನು ತಂದೀತು.
ವೃಷಭ ರಾಶಿ: ಹೇಳಬೇಕಾದ ವಿಚಾರವನ್ನು ನೀವು ಸರಿಯಾಗಿ ಹೇಳಿ. ಬೇರೆಯವರನ್ನು ಗೊಂದಲಕ್ಕೆ ನೀವು ಸಿಕ್ಕಿಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿ ಮಗ್ನತೆಯು ಎಲ್ಲಿರಿಗೂ ಇಷ್ಟವಾಗುವುದು. ನೀವು ಹೋದಕಡೆ ನಿಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ. ಕೇಳಿ ಬಂದವರಿಗೆ ನೀವು ಇಂದು ಧನ ಸಹಾಯವನ್ನು ಮಾಡುವಿರಿ. ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಲಿ. ಹೆಚ್ಚಿನ ಆದಾಯಕ್ಕೆ ನೀವು ಯೋಜನೆಯನ್ನು ರೂಪಿಸುವಿರಿ. ಅಧ್ಯಾತ್ಮದಲ್ಲಿ ನಿಮಗೆ ನಿರಾಸಕ್ತಿಯು ಉಂಟಾಗಬಹುದು. ಏಕತಾನತೆಯಿಂದ ಹೊರಬರಲು ಪ್ರಯತ್ನಿಸುವಿರಿ.
ಮಿಥುನ ರಾಶಿ: ಬೇಕಾದ ವಸ್ತುಗಳನ್ನು ಖರೀದಿಸುವ ಉತ್ಸಾಹದಲ್ಲಿ ಅನಗತ್ಯ ವಸ್ತುಗಳನ್ನು ಖರೀದಿಸುವಿರಿ. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗುವರು. ಯಾರೋ ಮಾಡಬೇಕಾದ ಕೆಲಸವನ್ನು ನೀವು ಮಾಡುವಿರಿ. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತಾತ್ಕಾಲಿಕವಾಗಿ ಸಾಲವನ್ನು ಮಾಡಬೇಕಾಗಬಹುದು. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಕೆಲಸದ ಒತ್ತಡದಿಂದ ನಿಮಗೆ ಇಂದು ಆಯಾಸವಾಗಬಹುದು. ತಲೆನೋವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡಬಹುದು.
ಕಟಕ ರಾಶಿ: ನಿದ್ರೆ ಇಲ್ಲದೇ ಮಾನಸಿಕ ಕಿರಿಕಿರಿಯು ಅಧಿಕವಾಗುವುದು. ಸ್ಪರ್ಧೆಯಲ್ಲಿ ಗೆಲುವಿಗಾಗಿ ನಿಮ್ಮ ಶ್ರಮವು ವ್ಯರ್ಥವಾದೀತು. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಬಹುದು. ಸಂಗಾತಿಯಿಂದ ನಿಮಗೆ ಬೆಂಬಲವು ಪೂರ್ಣವಾಗಿ ಸಿಗದೇ ಇರಬಹುದು. ಧಾರ್ಮಿಕ ವಿಷಯದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಇರುವುದು. ನಕಾರಾತ್ಮಕ ಚಿಂತನೆಯನ್ನು ದೂರ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಗೌರವಕ್ಕೆ ತೊಂದರೆಯಾಗುವ ಕಡೆ ನೀವು ಹೀಗುವುದು ಬೇಡ. ಜನಸಾಮಾನ್ಯರ ಜೊತೆ ಬೆರೆಯುವುದು ನಿಮಗೆ ಆಗದು. ಮಾತನಾಡುವಾಗ ಬಹಳ ಆಯ್ಕೆ ಮಾಡುವಿರಿ. ಇನ್ನೊಬ್ಬರ ಸಂಕಷ್ಟಕ್ಕೆ ನಿಮಗಮ ಸ್ಪಂದನೆಯು ಇರದು.
ಸಿಂಹ ರಾಶಿ: ಇಂದಿನ ಎಲ್ಲ ಕಾರ್ಯವನ್ನೂ ಒತ್ತಡದಿಂದಲೇ ಮಾಡಬೇಕಾದೀತು. ಶರೀರಪೀಡಿಯು ಹೆಚ್ಚಾಗಲಿದ್ದು ಕಛೇರಿಗೆ ಹೋಗುವವರು ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ. ವೈದ್ಯರಿಂದ ಸರಿಯಾದ ಮಾಹಿತಿಯನ್ನು ಪಡೆಯಿರಿ. ನಿಮ್ಮ ಬಯಕೆಗಳನ್ನು ಯಾರ ಬಳಿಯೂ ಪ್ರಕಟಪಡಿಸುವುದಿಲ್ಲ. ಯಾರನ್ನೋ ದ್ವೇಷ ಮಾಡುವುದು ಸರಿ ಕಾಣದು. ಸ್ಪರ್ಧಾತ್ಮಕ ಪರೀಕ್ಷೆಗೆ ಇನ್ನೂ ಹೆಚ್ಚಿನ ಶ್ರಮವು ಬೇಕಾಗುತ್ತದೆ. ಎಂದೋ ಕಾಣೆಯಾದ ವಸ್ತುವನ್ನು ಇಂದು ನೀವು ಹುಡುಕುವಿರಿ. ತಂದೆಯ ಪ್ರೀತಿಯು ನಿಮಗೆ ಸಿಗಲಿದೆ.
ಕನ್ಯಾ ರಾಶಿ: ಸ್ವಲ್ಪಮಟ್ಟಿಗೆ ಸಾಲವು ಮುಕ್ತಾಯವಾಗಿದ್ದರಿಂದ ಕುಟುಂಬದಲ್ಲಿ ಸೌಖ್ಯವು ಇರಲಿದೆ. ಎಲ್ಲ ಕೆಲಸಗಳೂ ಅಪೂರ್ಣವಾಗಿರುವುದು ನಿಮಗೆ ಕಿರಿಕಿರಿ ಆಗಲಿದೆ. ಯಾವುದನ್ನು ಮುಗಿಸಬೇಕು ಎನ್ನುವ ಗೊಂದಲವೂ ಇರುವುದು. ಮಾನಸಿಕ ಒತ್ತಡದಿಂದ ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಇಷ್ಟು ದಿನ ಮನೆಯಿಂದಲೇ ಕೆಲಸ ಮಾಡುತ್ತಿದ್ದ ನಿಮಗೆ ಇಂದು ಕಛೇರಿಗೆ ಕರೆಯುವರು. ನಿಮ್ಮ ತುರ್ತು ಕಾರ್ಯಗಳನ್ನು ನೀವು ಬಿಡಬೇಕಾದೀತು. ಹಿರಿಯರ ಮಾತುಗಳೂ ನಿಮಗೆ ಸಿಟ್ಟು ತರಿಸಬಹುದು. ಯಾವ ಕಾರ್ಯಕ್ಕೂ ಉತ್ಸಾಹವೇ ಇಲ್ಲವಾಗುವುದು. ಮಹಾವಿಷ್ಣುವಿನ ಆರಾಧನೆಯು ಅವಶ್ಯವಾಗಿ ಮಾಡಬೇಕಾಗುವುದು.
ತುಲಾ ರಾಶಿ: ಸುಲಭ ಮಾರ್ಗದಲ್ಲಿ ಆದಾಯವನ್ನು ಪಡೆಯುವ ಯೋಜನೆಯು ಯಶಸ್ವಿಯಾಗದು. ಸರ್ಕಾರಿ ಕೆಲಸಗಳು ಒತ್ತಡದಿಂದಾಗಿ ಮುಂದುವರಿಯುವುದು. ನೀವು ಮೌನದಿಂದ ಇದ್ದಷ್ಟು ಎಲ್ಲದಕ್ಕೂ ಒಪ್ಪಿಗೆ ಸೂಚಿಸಿದ್ದೀರಿ ಎಂದಾಗುವುದು. ಸಮಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಕಾಲಕ್ಕೆ ಮುಗಿಸುವಿರಿ. ದೇವರ ದರ್ಶನಕ್ಕೆ ನೀವು ಇಂದು ಬಿಡುವುಮಾಡಿಕೊಂಡು ಹೋಗುವಿರಿ. ಆಪ್ತರನ್ನು ದೂರ ಮಾಡಿಕೊಳ್ಳಬೇಕಾದೀತು. ನಿಮ್ಮ ಸಾಧನೆಗೆ ಗೌರವವು ಸಿಗಲಿದೆ. ಆಲಸ್ಯದಿಂದ ನೀವು ಹೊರಬೇಕಡದೀತು. ವಾಹನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಾಗರೂಕತೆ ಇರಲಿ. ಒಂದು ತೀರ್ಮಾನಕ್ಕೆ ಬರಲು ಹತ್ತು ಬಾರಿ ಯೋಚಿಸಿ.
ವೃಶ್ಚಿಕ ರಾಶಿ: ನಿಮ್ಮ ಸಾಮರ್ಥ್ಯಕ್ಕೆ ನಿಮಗೆ ಕೊಟ್ಟ ಜವಾಬ್ದಾರಿಯು ಚಿಕ್ಕದು ಎನಿಸಬಹುದು. ನಿಮ್ಮ ಬಂಧುಗಳ ಕಡೆಯಿಂದ ವಿವಾಹವು ಏರ್ಪಡಬಹುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸುವಿರಿ. ನೀವು ಮಾಡುವ ಕಾರ್ಯದಲ್ಲಿ ಗೊಂದಲವಿದ್ದರೆ ಯಾರನ್ನಾದರೂ ಕೇಳಿ. ಮುಂದೂಡುತ್ತ ಕುಳಿತರೆ ಇನ್ನಷ್ಟು ಗೊಂದಲಗಳು ಹೆಚ್ಚಾದೀತು. ಸಂಗಾತಿಯ ವಿಷಯಕ್ಕೆ ನಿಮಗೆ ಬೇಸರವಾಗುವುದು. ನಿಮಗೆ ಬೇಕಾಗಿರುವ ಸಂಪತ್ತನ್ನು ಸ್ನೇಹಿತರಿಂದ ಸಾಲವಾಗಿ ಪಡೆಯುವಿರಿ. ದುರಭ್ಯಾಸಗಳು ಸಹವಾಸದಿಂದ ಬರಬಹುದು. ಮನೆಗೆ ಇಂದು ವಿಳಂಬವಾಗಿ ಹೋಗುವಿರಿ. ಮನೋರಂಜನೆಗೆ ಹಣವನ್ನು ಖರ್ಚು ಮಾಡುವಿರಿ. ಬೆನ್ನು ನೋವು ನಿಮ್ಮನ್ನು ಬಾಧಿಸೀತು.
ಧನು ರಾಶಿ: ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ಸ್ಥಳವು ಸಿಗಬಹುದು. ನಿಮಗೆ ಇಷ್ಟವಾದ ವಿಚಾರವನ್ನು ಬೇಗ ಗ್ರಹಿಸುವಿರಿ. ಉದ್ಯೋಗವಿಲ್ಲವೆಂದು ಸಂಕಟಪಡುತ್ತಿದ್ದರೆ ಉತ್ತಮ ಅವಕಾಶವು ಸಿಗಲಿದೆ. ಮತ್ತೇನನ್ನೂ ವಿಚಾರಿಸದೇ ಸಿಕ್ಕ ಅವಕಾಶವನ್ನು ಸದ್ಯ ಬಳಸಿಕೊಳ್ಳಿ. ನಿಮ್ಮನಕಾರಾತ್ಮಕ ಆಲೋಚನೆಗಳಿಂದ ಕುಟುಂಬವನ್ನೂ ಕೆಡಸುವುದು ಬೇಡ. ನಿಮ್ಮವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ. ಆರ್ಥಿಕ ವಿಚಾರವನ್ನು ಹೇಳಬೇಕಾದವರಲ್ಲಿ ಹೇಳಿ. ಅಪರಿಚಿತರು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಲಹೆಯನ್ನು ಕೊಡುವರು. ಪ್ರೀತಿಪಾತ್ರರ ಭೇಟಿಯು ನಿಮಗೆ ನೆಮ್ಮದಿಯನ್ನು ನೀಡಬಹುದು. ಉದ್ಯೋಗದ ಕಾರಣ ಓಡಾಟವು ಇರಬಹುದು.
ಮಕರ ರಾಶಿ: ವೈಯಕ್ತಿಕ ಕೆಲಸಗಳು ಬಹಳಷ್ಟು ಇದ್ದು ಅದನ್ನು ಮಾಡಲು ನಿಮಗೆ ಸಮಯವು ಸಿಗದಾಗುವುದು. ಮಿತ್ರರ ಸಹಾಯದಿಂದ ನಿಮಗೆ ಉತ್ತಮ ಲಾಭವು ಸಿಗಲಿದೆ. ಎಲ್ಲರೆದುರು ನಿಮಗೆ ಅಪಮಾನವಾಗುವ ಸಂದರ್ಭವು ಬರಬಹುದು. ನಿಮಗೆ ಪರಿಚಿತರಾದವರು ಆಪ್ತರಾಗುವರು. ಸಂಗಾತಿಯ ಭಾವನೆಗಳಿಗೆ ಸ್ಪಂದಿಸದೇ ನಿಮ್ಮ ಮೇಲೆ ಸಿಟ್ಟುಗೊಂಡಾರು. ನಿಮ್ಮಇಂದಿನ ಸಂಪಾದನೆಯು ಮನೆಯ ಬಳಕಗೇ ಆಗವುದು. ಕುಲದೇವರ ದರ್ಶನವನ್ನು ನೀವು ಮಾಡಲಿದ್ದು ನೆಮ್ಮದಿ ಇರುವುದು. ಗೆಳೆತನದಿಂದ ಸಲ್ಲದ ಮಾತುಗಳು ನಿಮ್ಮ ಬಗ್ಗೆ ಬರಬಹುದು. ನಿಮ್ಮ ಗುಣಗಳನ್ನು ದುರುಪಯೋಗ ಮಾಡುವರು. ಮಕ್ಕಳು ನಿಮ್ಮ ಮಾತನ್ನು ಕೇಳಲಾರರು.
ಕುಂಭ ರಾಶಿ: ವೃತ್ತಿಯನ್ನು ಹೊರತುಪಡಿಸಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಒಳ ಜಗಳವು ಇಂದು ಹೊರಬರುವುದು. ನಿಮ್ಮನ್ನು ನಂಬಿಕೊಂಡವರಿಗೆ ಕಷ್ಟವಾದೀತು. ಉತ್ತಮ ಸಮಯದ ನಿರೀಕ್ಷೆಯಲ್ಲಿ ಇದ್ದರೂ ನಿಮಗೆ ಸಮಾಧಾನ ಇರದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ನೀಡುವಿರಿ. ಸಿಟ್ಟನ್ನು ಮಾಡಬಾರದು ಎಂದುಕೊಂಡರೂ ಸಂದರ್ಭವು ನಿಮ್ಮ ನಿರ್ಧಾರವನ್ನು ಬದಲಿಸುವುದು. ಮಕ್ಕಳಿಂದ ನೆಮ್ಮದಿಯು ಸಿಗುವುದು. ವ್ಯವಹಾರವನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಲು ನೀವು ಸೋಲಬಹುದು. ನಿಮ್ಮ ಗುರಿಯನ್ನು ತಲುಪಲು ನಿಮಗೆ ವಿಘ್ನಗಳು ಬರಬಹುದು.
ಮೀನ ರಾಶಿ: ನಿಮ್ಮ ಕಾರ್ಯವು ಆಗಬೇಕಾದರೆ ತಿರುಗಾಟವನ್ನು ಮಾಡುವುದು ಅನಿವಾರ್ಯ. ನೀವು ಇಂದು ಉತ್ಸಾಹದಿಂದ ಇರುವಿರಿ. ನಿಮಗಾಗದವರನ್ನು ಮುಖಾಮುಖಿಯಾಗುವ ಸಂದರ್ಭವು ಬರುವುದು. ಇಬ್ಬರ ನಡುವೆ ವಾಗ್ವಾದವೂ ಆಗಲಿದೆ. ನೀವು ಇಂದು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಮಾತೇ ನಿಮಗೆ ತೊಂದರೆಯನ್ನು ತರುವುದು. ಸಂಗಾತಿಯು ಇತರರನ್ನು ಹೋಲಿಸಿಕೊಂಡು ಮಾತನಾಡುವರು. ಒಂದೊಂದು ರುಪಾಯಿಯನ್ನೂ ಬಹಳ ಜೊಪಾನ ಮಾಡುವಿರಿ. ನಿಮ್ಮ ಉತ್ಸಾಹವನ್ನು ಭಂಗ ಮಾಡುವ ಮಾತುಗಳು ನಿಮ್ಮ ನಡುವೇ ಬರಬಹುದು. ವಿಚಲಿತರಾಗುವ ಸಾಧ್ಯತೆ ಇದೆ.
-ಲೋಹಿತಶರ್ಮಾ – 8762924271 (what’s app only)