Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 21ರ ದಿನಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 21ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Important Highlight‌
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 21ರ ದಿನಭವಿಷ್ಯ 
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 21, 2023 | 1:02 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 21ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಇದು ಬಹಳ ಮುಖ್ಯವಾದ ದಿನವಾಗಿರುತ್ತದೆ. ಮನೆಯಲ್ಲಿ ಮಾತುಕತೆಯಾಗಿ, ನಿಮ್ಮ ಮದುವೆಗೆ ಒಪ್ಪಿಗೆ ಸಿಕ್ಕಿಯೂ ಬಿಡಬಹುದು. ಅಚಾನಕ್ ಆಗಿ ಸಿಕ್ಕಂಥ ಕಾಂಟ್ಯಾಕ್ಟ್ ನಿಂದ ಬಹಳ ದೊಡ್ಡ ಮಟ್ಟದ ಅನುಕೂಲ ಒದಗಿಬರಲಿದೆ. ಪಾರ್ಕಿಂಗ್ ನಲ್ಲಿ ನಿಮ್ಮ ವಾಹನ ನಿಲ್ಲಿಸುವಾಗ ಮಾಮೂಲಿಗಿಂತ ಹೆಚ್ಚಿನ ಲಕ್ಷ್ಯ ವಹಿಸಬೇಕಾಗುತ್ತದೆ. ಏಕೆಂದರೆ ಇತರ ವಾಹನಗಳು ತಾಗಿ ವಾಹನದ ಪೇಂಟ್ ಹೋಗುವುದೋ ಅಥವಾ ಡೆಂಟ್ ಆಗುವುದೋ ಇಂಥ ಬೆಳವಣಿಗೆ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ಅದೃಷ್ಟ ನಿಮ್ಮ ಪಾಲಿಗೆ ಬಹಳ ಮುಖ್ಯವಾಗುತ್ತದೆ. ನಿಮ್ಮ ಬಗೆಗಿನ ಅಭಿಪ್ರಾಯವೋ ಅಥವಾ ಇತರರ ಮೂಲಕ ಈ ಹಿಂದೆ ನೀವು ಕೆಲಸ ಮಾಡಿದ ಸಾಮರ್ಥ್ಯ ಬಗ್ಗೆ ಹೇಳಿಸಬೇಕು ಎಂದಿದ್ದರೆ ಯಾರಿಂದ ಈ ಕೆಲಸ ಆಗಬೇಕು ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ. ವ್ಯಾಲೆಟ್ ಬಳಸುವಂಥ ಪುರುಷರು ಜನಜಂಗುಳಿಯಲ್ಲಿ ಹೋಗುವಂತಹ ಸಂದರ್ಭದಲ್ಲಿ ಜಾಗ್ರತೆಯಿಂದ ಇರಬೇಕಾಗುತ್ತದೆ. ಒಂದಿಷ್ಟು ಮೈ ಮರೆತರೂ ಬೆಲೆಬಾಳುವ ವಸ್ತು, ಹಣವನ್ನು ಕಳೆದುಕೊಳ್ಳುವಂಥ ಸಾಧ್ಯತೆ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಇತರರ ವ್ಯವಹಾರಕ್ಕೆ ಮಧ್ಯವರ್ತಿಗಳಿಗೆ ಕೆಲಸ ಮಾಡುತ್ತಿರುವವರಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರತಿಫಲ ದೊರೆಯಲಿದೆ. ನಿಮ್ಮಲ್ಲಿ ಕೆಲವರಿಗೆ ಚಿನ್ನದ ಒಡವೆಯೋ ಅಥವಾ ಗ್ಯಾಜೆಟ್ ಗಳೋ ಉಡುಗೊರೆಯಾಗಿ ಪಡೆದುಕೊಳ್ಳುವಂಥ ಯೋಗ ಸಹ ಇದೆ. ಸಾಧ್ಯವಾದಷ್ಟೂ ಆಡುವ ಮಾತಿನ ಮೇಲೆ ಒಂದಿಷ್ಟು ನಿಗಾ ಇರಿಸಿಕೊಳ್ಳಿ. ಕಡಿಮೆ ಮಾತನಾಡಿದಷ್ಟೂ ಲಾಭ ಹೆಚ್ಚಿಗೆ ದೊರೆಯಲಿದೆ. ಕಾರು ಅಥವಾ ಆಟೋ ಚಾಲಕರಿಗೆ ಇರುವವರಿಗೆ ಸ್ವಂತ ವಾಹನವನ್ನು ಖರೀದಿಸುವಂಥ ಸನ್ನಿವೇಶ ಸೃಷ್ಟಿ ಆಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಹೀಗೆ ಮಾತನಾಡಿದ್ದು ನಾನೇನಾ ಎಂಬಂತೆ ಈ ದಿನ ಆಗಲಿದೆ. ಸಣ್ಣ ಮಾತಿಗೆ ಅಥವಾ ತಮಾಷೆಗೆ ಸಿಟ್ಟಿಗೆದ್ದು, ಸ್ನೇಹವನ್ನು ಕಳೆದುಕೊಳ್ಳುವಂಥ ಸಾಧ್ಯತೆಗಳಿವೆ. ಆದ್ದರಿಂದ ತಾಳ್ಮೆ, ಸಂಯಮ ಬಹಳ ಮುಖ್ಯವಾದವು. ದೂರದ ಸಂಬಂಧಿಯೊಬ್ಬರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರುತ್ತದೆ. ಪಾರ್ಟಿ ಅಥವಾ ಗೆಟ್ ಟುಗೆದರ್ ನಲ್ಲಿ ಭಾಗೀ ಆಗುತ್ತಿದ್ದೀರಿ ಎಂದಾದರೆ ಸಾಧ್ಯವಾದಷ್ಟೂ ಗಾಸಿಪ್ ಗಳಿಂದ ದೂರ ಇರಿ. ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂಥ ಕೆಲವು ಬೆಳವಣಿಗೆಗಳು ಆಗಬಹುದು, ಜಾಗ್ರತೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಎದ್ದು ಹೋಗೋ ಮಾತು ಬಿದ್ದು ಹೋಗಲಿ ಎಂಬಂತೆ ನೀವು ಮಾಡುವ ಚೌಕಾಶಿ ಈ ದಿನ ಲಾಭ ತಂದುಕೊಡಲಿದೆ. ಅನಿರೀಕ್ಷಿತವಾಗಿ ಪ್ರಭಾವಿಗಳ ಸ್ನೇಹ ವಲಯದಲ್ಲಿ ಸೇರ್ಪಡೆ ಆಗುವಂಥ ಯೋಗ ನಿಮ್ಮ ಪಾಲಿಗೆ ಇದೆ. ಅನಂತ ಪದ್ಮನಾಭ ಸ್ವಾಮಿಯ ಆರಾಧನೆಯನ್ನು ಮಾಡಿ. ಒಂದು ವೇಳೆ ನಿಮ್ಮ ಧಾರ್ಮಿಕ ನಂಬಿಕೆ ಬೇರೆಯದ್ದಾಗಿದ್ದರೆ ಮನೆಯಿಂದ ಹೊರಡುವಾಗ ಬಿಳಿಯ ವಸ್ತ್ರವೊಂದನ್ನು ಬಳಿ ಇಟ್ಟುಕೊಳ್ಳುವುದರಿಂದ ಉತ್ತಮ ಫಲಿತಾಂಶವನ್ನು ಕಾಣಲಿದ್ದೀರಿ. ಹೊಸ ಪಾದರಕ್ಷೆ, ಶೂ ಇಂಥದ್ದನ್ನು ಖರೀದಿ ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬಹಳ ಸಮಯದಿಂದಲೂ ಪ್ರಯತ್ನ ಮಾಡುತ್ತಿದ್ದ ಕೆಲಸವೊಂದರ ಬಗ್ಗೆ ಶುಭ ಸುದ್ದಿ ಕೇಳಿಬರಲಿದೆ. ವಸ್ತ್ರಾಭರಣ ಖರೀದಿ ಮಾಡುವಂಥ ಸಾಧ್ಯತೆಗಳಿವೆ. ಸೋದರ ಸಂಬಂಧಿಗಳಿಗಾಗಿ ನೀವು ಹಣ ಹಾಕಿ, ಕೆಲವು ವಸ್ತುಗಳನ್ನು ಕೊಡಿಸುವ ಸಾಧ್ಯತೆ ಇದೆ. ಷೇರು, ಮ್ಯೂಚುವಲ್ ಫಂಡ್ಸ್ ಗಳನ್ನು ಮಾರಾಟ ಮಾಡಬೇಕು ಎಂದು ಮುಂದಾದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಲಾಭ ದೊರೆಯುವ ಎಲ್ಲ ಅವಕಾಶಗಳಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಆತ್ಮಗೌರವಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಇದರಿಂದ ನಿಮ್ಮ ಕೆಲಸದ ವೇಗ ಹಾಗೂ ಅದನ್ನು ನೋಡುತ್ತಿದ್ದ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮ ಸೈಟು ಅಥವಾ ಮನೆಯನ್ನು ಮಾರಾಟಕ್ಕಾಗಿ ಯಾರಾದರೂ ಕೇಳಿಕೊಂಡು ಬರುವಂಥ ಸಾಧ್ಯತೆಗಳಿವೆ. ಎಷ್ಟೇ ಕೆಲಸದ ಒತ್ತಡ ಇದ್ದರೂ ಕುಟುಂಬ ಸದಸ್ಯರಿಗಾಗಿ ಸಮಯ ಮೀಸಲಿಡುವುದಕ್ಕೆ ಪ್ರಯತ್ನಿಸಿ. ಸೂರ್ಯನಾರಾಯಣ ಸ್ವಾಮಿ ದೇವರನ್ನು ಮನಸ್ಸಲ್ಲಿ ಸ್ಮರಿಸಿ, ಮನೆಯಿಂದ ಆಚೆಗೆ ಹೊರಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವೇ ತೆಗೆದುಕೊಂಡ ನಿರ್ಧಾರವನ್ನು ಬದಲಿಸಿಕೊಳ್ಳಲೇ ಬೇಕಾಗುತ್ತದೆ. ಹಣಕಾಸಿನ ಖರ್ಚು ಮುನ್ನೆಲೆಗೆ ಬರಲಿದೆ. ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಕೈ ಚಾಚಬೇಡಿ. ಇದರಿಂದ ನಿಮ್ಮ ಸಂಸಾರದಲ್ಲಿ ಭಾರೀ ಬಿರುಗಾಳಿಯೇ ಏಳಬಹುದು. ನಿಮ್ಮ ನೆರವಿಗೆ ಬಂದೇ ಬರುತ್ತಾರೆ ಅಂದುಕೊಂಡಂಥ ವ್ಯಕ್ತಿಯೊಬ್ಬರು ಕೊನೆ ಕ್ಷಣದಲ್ಲಿ ತಮ್ಮಿಂದ ಈ ಸಮಯದಲ್ಲಿ ಯಾವ ಸಹಾಯವನ್ನೂ ಮಾಡಲಿಕ್ಕೆ ಆಗುವುದಿಲ್ಲ ಎಂದು ಬಿಡಬಹುದು. ಯಾವುದೇ ವ್ಯವಹಾರದಲ್ಲಿ ಪ್ಲಾನ್ ಬಿ ಎಂಬುದೊಂದನ್ನು ಇರಿಸಿಕೊಂಡಿದ್ದರೆ ಕ್ಷೇಮ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ತಂದೆ ಅಥವಾ ತಂದೆಗೆ ಸಮಾನರಾದವರಿಗೆ ನೆರವಾಗಲಿದ್ದೀರಿ. ಈ ಹಿಂದೆ ಬಹಳ ಸಮಯದಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗೆ ಸೂಕ್ತ ವೈದ್ಯೋಪಚಾರ ದೊರೆಯಲಿದೆ. ಕೂಡಿಟ್ಟಿದ್ದ ಹಣವನ್ನು ಸೂಕ್ತವಾದ ಕಡೆ ಹೂಡಿಕೆ ಮಾಡುವುದಕ್ಕೆ ಸ್ನೇಹಿತರು, ಪರಿಣತರ ನೆರವನ್ನು ಕೇಳುವಂಥ ಸಾಧ್ಯತೆ ಇದೆ. ಹೊಸ ರುಚಿಯ ಅಹಾರ ಪದಾರ್ಥವನ್ನೋ ಅಥವಾ ಮನೆಯಿಂದ ಹೊರಗೆ ಏನಾದರೂ ತಿನ್ನುವಂಥ ಪರಿಸ್ಥಿತಿಯಲ್ಲಿ ಗುಣಮಟ್ಟದ ಬಗ್ಗೆ ಲಕ್ಷ್ಯ ನೀಡಿ. ಒಂದು ವೇಳೆ ಬೇಡ ಎಂದೆನಿಸಿದರೂ ದಾಕ್ಷಿಣ್ಯಕ್ಕೆ ಬಿದ್ದು ಸೇವಿಸಿದರೆ ಹೊಟ್ಟೆ ಸಮಸ್ಯೆ ಆಗಬಹದು.

ಲೇಖನ- ಎನ್‌.ಕೆ.ಸ್ವಾತಿ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು