ಮಧುಮೇಹದಿಂದ ಬಳಲುತ್ತಿದ್ದೀರಾ? ಇದಕ್ಕೆ ಬೆಳ್ಳುಳ್ಳಿ ಸೇವನೆ ಉತ್ತಮ

ನಿಮ್ಮ ಎಲ್ಲಾ ಕಾಲೋಚಿತ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರವೆಂದರೆ ಬೆಳ್ಳುಳ್ಳಿಯನ್ನು ನಿಮ್ಮ ನಿಯಮಿತ ಆಹಾರದಲ್ಲಿ ಸೇರಿಸುವುದು ಎಂದು ನಿಮಗೆ ತಿಳಿದಿದೆಯೇ? ಈ ಪ್ರಬಲ ಘಟಕಾಂಶವನ್ನು ಸಾಂಪ್ರದಾಯಿಕ ಪರಿಹಾರಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಹಾಗಾಗಿ ಬೆಳ್ಳುಳ್ಳಿಯನ್ನು ನಿಮ್ಮ ಆಹಾರದ ದೈನಂದಿನ ಭಾಗವಾಗಿ ಹೇಗೆ ಬಳಸಬಹುದು? ಎಂಬುದರ ಕುರಿತು 5 ವಿಧಾನಗಳು ಇಲ್ಲಿವೆ.

Important Highlight‌
ಮಧುಮೇಹದಿಂದ ಬಳಲುತ್ತಿದ್ದೀರಾ? ಇದಕ್ಕೆ ಬೆಳ್ಳುಳ್ಳಿ ಸೇವನೆ ಉತ್ತಮ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 21, 2023 | 5:20 PM

ನಿಮ್ಮ ಆರೋಗ್ಯವನ್ನು ಹೆಚ್ಚಿಸಲು ನೀವು ರುಚಿಕರವಾದ ಮತ್ತು ನೈಸರ್ಗಿಕ ಮಾರ್ಗವನ್ನು ಹುಡುಕುತ್ತಿದ್ದೀರಾ? ಹಾಗಾದರೆ ಬೆಳ್ಳುಳ್ಳಿಗಿಂತ ಮತ್ತೊಂದು ನೈಸರ್ಗಿಕ ಔಷಧಗಳಿಲ್ಲ ಎಂಬುದನ್ನು ತಿಳಿಯಿರಿ. ಅದರ ವಿಶಿಷ್ಟ ಗುಣ ಅನೇಕ ಆರೋಗ್ಯ ಪ್ರಯೋಜನಗಳಿಗೆ ಉತ್ತಮ. ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವುದರಿಂದ ಹಿಡಿದು ಮಧುಮೇಹವನ್ನು ನಿಯಂತ್ರಿಸುವವರೆಗೆ, ಈ ಪ್ರಬಲ ಘಟಕಾಂಶವನ್ನು ಸಾಂಪ್ರದಾಯಿಕ ಪರಿಹಾರಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಹಾಗಾಗಿ ಬೆಳ್ಳುಳ್ಳಿಯನ್ನು ನಿಮ್ಮ ಆಹಾರದ ದೈನಂದಿನ ಭಾಗವಾಗಿ ಹೇಗೆ ಬಳಸಬಹುದು? ನಿಮ್ಮ ಊಟದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಲು ಕೆಲವು ರುಚಿಕರವಾದ ಮತ್ತು ಸುಲಭವಾದ ಮಾರ್ಗಗಳನ್ನು ಇಲ್ಲಿ ನೀಡಲಾಗಿದ್ದು ಬೆಳ್ಳುಳ್ಳಿಯ ಗರಿಷ್ಠ ಪ್ರಯೋಜನ ಪಡೆಯಲು ಪ್ರತಿದಿನ ಬೆಳ್ಳುಳ್ಳಿಯನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ.

ಆಯುರ್ವೇದ ತಜ್ಞ ಡಾ. ಅಣ್ಣು ಪ್ರಸಾದ್ ಅವರ ಪ್ರಕಾರ, ನಿಮ್ಮ ನಿಯಮಿತ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಧುಮೇಹವನ್ನು ನಿಯಂತ್ರಿಸುವುದು ಹಾಗೂ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಹಸಿ ಬೆಳ್ಳುಳ್ಳಿ ಎಲ್ಲರಿಗೂ ಇಷ್ಟವಾಗದಿದ್ದರೂ, ಅದನ್ನು ವಿಭಿನ್ನವಾಗಿ ಸೇವಿಸಲು ಮತ್ತು ಅದರ ಪ್ರಯೋಜನಗಳನ್ನು ಹೆಚ್ಚಿಸಿಕೊಳ್ಳಲು ಹಲವಾರು ರುಚಿಕರವಾದ ಮತ್ತು ಪರಿಣಾಮಕಾರಿ ಮಾರ್ಗಗಳಿವೆ.

ಬೆಳ್ಳುಳ್ಳಿಯ ಗರಿಷ್ಠ ಪ್ರಯೋಜನಗಳಿಗಾಗಿ ಪ್ರತಿದಿನ ಅದನ್ನು ಉಪಯೋಗಿಸುವುದು ಹೇಗೆ?

1. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ: ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ತಿನ್ನುವುದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. “ಹಸಿ ಬೆಳ್ಳುಳ್ಳಿಯಲ್ಲಿ ಕಂಡು ಬರುವ ಅಲಿಸಿನ್ ಎಂಬ ಸಂಯುಕ್ತವು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ” ಎಂದು ಡಾ. ಅಣ್ಣು ಪ್ರಸಾದ್ ಹೇಳಿದ್ದಾರೆ. ಈ ಪ್ರಯೋಜನಗಳನ್ನು ಪಡೆದುಕೊಳ್ಳಲು, ಬೆಳಿಗ್ಗೆ ಒಂದು ಲೋಟ ನೀರಿನೊಂದಿಗೆ ಕೆಲವು ಹಸಿ ಬೆಳ್ಳುಳ್ಳಿ ಎಸಳುಗಳನ್ನು ತಿನ್ನಿ. “ಬೇಯಿಸಿದಾಗ ಅಲಿಸಿನ್ ದುರ್ಬಲಗೊಳ್ಳುತ್ತದೆ, ಆದ್ದರಿಂದ ಬೆಳ್ಳುಳ್ಳಿಯನ್ನು ಸೇವಿಸಲು ಸೂಕ್ತ ಮಾರ್ಗವೆಂದರೆ ಅದನ್ನು ಹಸಿಯಾಗಿ ಮತ್ತು ಖಾಲಿ ಹೊಟ್ಟೆಯಲ್ಲಿ ತಿನ್ನುವುದು” ಎಂದು ಅವರು ಹೇಳಿದ್ದಾರೆ. ಆದ್ದರಿಂದ, ಹಸಿ ಬೆಳ್ಳುಳ್ಳಿಯನ್ನು ಒಂದು ಲೋಟ ನೀರಿನೊಂದಿಗೆ ತಿನ್ನುವುದು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಮತ್ತು ಮಧುಮೇಹವನ್ನು ಹತೋಟಿಯಲ್ಲಿಡಲು ಉತ್ತಮ ಮಾರ್ಗವಾಗಿದೆ.

2. ಬೆಳ್ಳುಳ್ಳಿ ಚಹಾ; ಬೆಳ್ಳುಳ್ಳಿಯ ಪ್ರಯೋಜನಗಳನ್ನು ಆನಂದಿಸುವಾಗ ಸೌಮ್ಯ ಪರಿಮಳವನ್ನು ಬಯಸುವವರಿಗೆ ಬೆಳ್ಳುಳ್ಳಿ ಚಹಾವು ಅತ್ಯುತ್ತಮ ಆಯ್ಕೆಯಾಗಿದೆ. ಬೆಳ್ಳುಳ್ಳಿ ಚಹಾವನ್ನು ತಯಾರಿಸಲು, ಬೆಳ್ಳುಳ್ಳಿ ಮತ್ತು ಲವಂಗವನ್ನು ಜಜ್ಜಿ ಒಂದು ಕಪ್ ನೀರಿಗೆ ಸೇರಿಸಿ. ಬಳಿಕ ಕೆಲವು ನಿಮಿಷಗಳ ಕಾಲ ಕುದಿಸಿ ನಂತರ 1- 2 ಟೀ ಸ್ಪೂನ್ ದಾಲ್ಚಿನ್ನಿ ಸೇರಿಸಿ. ಗ್ಯಾಸ್ ಆಫ್ ಮಾಡುವ ಮೊದಲು ಮಿಶ್ರಣವನ್ನು ಒಂದೆರಡು ನಿಮಿಷಗಳ ಕಾಲ ಹಾಗೇ ಬಿಡಿ. ಅಂತಿಮವಾಗಿ, ಒಂದು ಟೀ ಸ್ಪೂನ್ ಜೇನುತುಪ್ಪ ಮತ್ತು ಅರ್ಧ ಟೀ ಸ್ಪೂನ್ ನಿಂಬೆ ರಸವನ್ನು ಸೇರಿಸಿ. ಬೆಳಿಗ್ಗೆ ಈ ರುಚಿಕರವಾದ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿ ಚಹಾವು ಕುಡಿಯಿರಿ. ಇದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.

3. ಬೆಳ್ಳುಳ್ಳಿ ಮತ್ತು ಜೇನುತುಪ್ಪ: ಬೆಳ್ಳುಳ್ಳಿಯನ್ನು ಜೇನುತುಪ್ಪದೊಂದಿಗೆ ಸಂಯೋಜಿಸುವುದು ನಿಮ್ಮ ದೈನಂದಿನ ದಿನಚರಿಯಲ್ಲಿ ಬೆಳ್ಳುಳ್ಳಿಯನ್ನು ಸೇರಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ. ಬೆಳ್ಳುಳ್ಳಿ ಲವಂಗವನ್ನು ಮೂರರಿಂದ ನಾಲ್ಕು ತುಂಡುಗಳಾಗಿ ಕತ್ತರಿಸಿ ಚಮಚದಲ್ಲಿ ಇರಿಸಿ. ಅದಕ್ಕೆ ಕೆಲವು ಹನಿ ಜೇನುತುಪ್ಪವನ್ನು ಸೇರಿಸಿ ಮತ್ತು ಒಂದೆರಡು ನಿಮಿಷಗಳ ಕಾಲ ಬಿಡಿ. ನಂತರ, ಬೆಳ್ಳುಳ್ಳಿ ಮತ್ತು ಜೇನು ತುಪ್ಪದ ಮಿಶ್ರಣವನ್ನು ಚೆನ್ನಾಗಿ ಜಗಿದು ನುಂಗಿರಿ. ಬೇಕಾದಲ್ಲಿ ನೀವು ಅದರೊಂದಿಗೆ ಕೆಲವು ಗುಟುಕು ಬೆಚ್ಚಗಿನ ನೀರನ್ನು ಕುಡಿಯಬಹುದು. “ಆಸಿಡ್ ರಿಫ್ಲಕ್ಸ್ ಮತ್ತು ರೆಗ್ಯುರಿಟೇಶನ್ ರೋಗಲಕ್ಷಣಗಳನ್ನು ನಿವಾರಿಸಲು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಒಂದು ಚಮಚ ತೆಗೆದುಕೊಳ್ಳಿ” ಎಂದು ಡಾ. ಅಣ್ಣು ಪ್ರಸಾದ್ ಹೇಳುತ್ತಾರೆ.

ಇದನ್ನೂ ಓದಿ :ಮಧುಮೇಹ ನಿಯಂತ್ರಣಕ್ಕೆ ಬೆಳ್ಳುಳ್ಳಿ ಬಳಸುವ ಕ್ರಮ

4. ದೈನಂದಿನ ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಸಿ: ಬೆಳ್ಳುಳ್ಳಿಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಲು ಸುಲಭವಾದ ಮಾರ್ಗವೆಂದರೆ ಅದನ್ನು ನಿಮ್ಮ ನಿಯಮಿತ ಊಟಕ್ಕೆ ಸೇರಿಸುವುದು. ಬೆಳ್ಳುಳ್ಳಿ ತರಕಾರಿ ಪಲ್ಯಗಳು, ಬೇಳೆಗಳು, ಸೂಪ್ ಗಳು ಮತ್ತು ಸ್ಟಿರ್- ಫ್ರೈಸ್ ಸೇರಿದಂತೆ ವಿವಿಧ ಭಕ್ಷ್ಯಗಳೊಂದಿಗೆ ಚೆನ್ನಾಗಿ ಬೆರೆಯುತ್ತದೆ. ಬೆಳ್ಳುಳ್ಳಿ ಎಸಳುಗಳನ್ನು ನುಣ್ಣಗೆ ಕತ್ತರಿಸಿ ಅಥವಾ ಜಜ್ಜಿ ಮತ್ತು ಇತರ ಪದಾರ್ಥಗಳನ್ನು ಸೇರಿಸುವ ಮೊದಲು ಸ್ವಲ್ಪ ಎಣ್ಣೆಯಲ್ಲಿ ಹುರಿಯಿರಿ. ಬೆಳ್ಳುಳ್ಳಿಯನ್ನು ಬೇಯಿಸುವುದು ಅಲಿಸಿನ್ ನ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು ನೆನಪಿಡಿ, ಆದ್ದರಿಂದ ನೀವು ಅದರ ಆರೋಗ್ಯ ಪ್ರಯೋಜನಗಳನ್ನು ಹೆಚ್ಚಿಸಲು ಬಯಸಿದರೆ, ಬಡಿಸುವ ಮೊದಲು ನಿಮ್ಮ ಊಟಕ್ಕೆ ಕತ್ತರಿಸಿದ ಹಸಿ ಬೆಳ್ಳುಳ್ಳಿಯನ್ನು ಸೇರಿಸಿ.

5. ಬೆಳ್ಳುಳ್ಳಿ ಎಣ್ಣೆ: ಬೆಳ್ಳುಳ್ಳಿಯ ಪ್ರಯೋಜನಗಳನ್ನು ಆನಂದಿಸಲು ಬೆಳ್ಳುಳ್ಳಿ ಎಣ್ಣೆ ಮತ್ತೊಂದು ಅನುಕೂಲಕರ ಮಾರ್ಗವಾಗಿದೆ. ಬೆಳ್ಳುಳ್ಳಿ ಎಣ್ಣೆಯನ್ನು ಅಡುಗೆ, ಸಲಾಡ್ ಅಥವಾ ಹುರಿದ ತರಕಾರಿಗಳು ಅಥವಾ ಬ್ರೆಡ್ ಮೇಲೆ ಪರಿಮಳಕ್ಕಾಗಿ ಸ್ವಲ್ಪ ಸ್ವಲ್ಪ ಬಳಸಬಹುದು. ಬೆಳ್ಳುಳ್ಳಿ ಎಣ್ಣೆಯನ್ನು ತಯಾರಿಸಲು, ಹಲವಾರು ಬೆಳ್ಳುಳ್ಳಿ ಸಿಪ್ಪೆ ಸುಲಿದು ಜಜ್ಜಿದ ನಂತರ ಅವುಗಳನ್ನು ಒಂದು ಕಪ್ ಆಲಿವ್ ಎಣ್ಣೆ ಅಥವಾ ಆವಕಾಡೊ ಎಣ್ಣೆಯಂತಹ ಉತ್ತಮ ಗುಣಮಟ್ಟದ ಅಡುಗೆ ಎಣ್ಣೆಯೊಂದಿಗೆ ಪ್ಯಾನ್ ನಲ್ಲಿ ಬೆರೆಸಿ. ಮಿಶ್ರಣವನ್ನು ಕಡಿಮೆ ಶಾಖದಲ್ಲಿ ಸುಮಾರು 10 ನಿಮಿಷಗಳ ಕಾಲ ಬಿಸಿ ಮಾಡಿ, ಬೆಳ್ಳುಳ್ಳಿ ಉರಿಯದಂತೆ ನೋಡಿಕೊಳ್ಳಿ. ಬಳಿಕ ತಣ್ಣಗಾಗಲು ಬಿಡಿ. ಬೆಳ್ಳುಳ್ಳಿ ಬೇರ್ಪಡಿಸಲು ಎಣ್ಣೆಯನ್ನು ಸೋಸಿ, ಮತ್ತು ಅದನ್ನು ಸ್ವಚ್ಛವಾದ, ಗಾಳಿಯಾಡದ ಬಾಟಲಿಗೆ ವರ್ಗಾಯಿಸಿ. ಬೆಳ್ಳುಳ್ಳಿ ಎಣ್ಣೆಯನ್ನು ರೆಫ್ರಿಜರೇಟರ್ನಲ್ಲಿ ಎರಡು ವಾರಗಳವರೆಗೆ ಸಂಗ್ರಹಿಸಿ ಮತ್ತು ನಿಮ್ಮ ಪಾಕವಿಧಾನಗಳಿಗೆ ರುಚಿಕರವಾದ ಸೇರ್ಪಡೆಯಾಗಿ ಬಳಸಿ. ನಿಮ್ಮ ನಿಯಮಿತ ಊಟದಲ್ಲಿ ಬೆಳ್ಳುಳ್ಳಿಯನ್ನು ಸೇರಿಸುವ ಮೂಲಕ, ಗಮನಾರ್ಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು