ಹೋಳಿ 2023: ಜ್ಯೋತಿಷಿಗಳ (Astrologers) ಪ್ರಕಾರ ಹೋಲಾಷ್ಟಕ (Holashtak) ಸಮಯದಲ್ಲಿ ಒಟ್ಟು 8 ಗ್ರಹಗಳು ಉಗ್ರವಾಗಿರುತ್ತವೆ. ಇದರಲ್ಲಿ ಫಾಲ್ಗುಣ ಪೂರ್ಣಿಮಾ (Phalgun Purnima) ಸಮಯದಲ್ಲಿ ರಾಹು (Rahu Ketu) ಹಿಂಸಾತ್ಮಕವಾಗಿ ಇರುತ್ತಾನೆ. ಇದರ ದುಷ್ಪರಿಣಾಮಗಳನ್ನು ತಪ್ಪಿಸಲು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು ಯಾವುವು ಇಲ್ಲಿದೆ ಮಾಹಿತಿ (Holi ka Dahan). ನಮ್ಮ ಜೀವನದಲ್ಲಿ ನಡೆಯುವ ಎಲ್ಲವೂ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆ ಮತ್ತು ಅವುಗಳ ನಡವಳಿಕೆಯಿಂದ ಪ್ರಭಾವಿತವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗಬೇಕೆಂದು ನಾವು ಬಯಸಿದರೆ ಈ ಗ್ರಹಗಳ ಅಶುಭ ಫಲಿತಾಂಶಗಳನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಹು-ಕೇತುವನ್ನು ಅತ್ಯಂತ ಅಪಾಯಕಾರಿ ಗ್ರಹಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 7 ರಂದು ಆಚರಿಸಲಾಗುವ ಹೋಲಿಕಾ ದಹನದ ಸಂದರ್ಭದಲ್ಲಿ ರಾಹು ಕೆಟ್ಟದ್ದಾಗಿದೆ, ಅದರ ದುಷ್ಪರಿಣಾಮಗಳನ್ನು ತಪ್ಪಿಸುವುದು ಬಹಳ ಮುಖ್ಯ.
ಹೋಲಾಷ್ಟಕದ ಒಂಬತ್ತು ದಿನಗಳು ಫೆಬ್ರವರಿ 27 ರಂದೇ ಪ್ರಾರಂಭವಾಗಿದೆ. ಹೋಲಾಷ್ಟಕದ ಸಮಯದಲ್ಲಿ, ಎಲ್ಲಾ ಶುಭ ಕಾರ್ಯಗಳನ್ನು ಅವಾಯ್ಡ್ ಮಾಡಬೇಕು. ಇದು ಹೋಲಿ ಕಾ ದಹನದವರೆಗೆ ಮುಂದುವರಿಯುತ್ತದೆ. ಜ್ಯೋತಿಷಿಗಳ ಪ್ರಕಾರ, ಹೋಲಾಷ್ಟಕದ ಸಮಯದಲ್ಲಿ ಒಟ್ಟು 8 ಗ್ರಹಗಳು ಉಗ್ರವಾಗಿರುತ್ತವೆ. ಇದರಲ್ಲಿ ಫಾಲ್ಗುಣ ಪೂರ್ಣಿಮೆಯ ಸಮಯದಲ್ಲಿ ರಾಹು ಹಿಂಸಾತ್ಮಕವಾಗಿರುತ್ತದೆ. ರಾಹುವನ್ನು ನೆರಳು ಗ್ರಹವೆಂದು ಪರಿಗಣಿಸಲಾಗಿದೆ. ಇದರ ದುಷ್ಪರಿಣಾಮಗಳನ್ನು ತಪ್ಪಿಸಲು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು ಇಲ್ಲಿವೆ.
ಒಬ್ಬ ವ್ಯಕ್ತಿಯು ಕಳ್ಳತನ ಮತ್ತು ಜೂಜಾಟದ ವ್ಯಸನಿಯಾಗುತ್ತಾನೆ.
ರಾಹುವಿನ ಕಾರಣದಿಂದಾಗಿ ವ್ಯಕ್ತಿಯು ಭಾಷೆಯ ಮೇಲೆ ಹಿಡಿತವನ್ನು ಕಳೆದುಕೊಳ್ಳುತ್ತಾನೆ, ಅದು ವಿವಾದಕ್ಕೆ ಕಾರಣವಾಗುತ್ತದೆ.
ರಾಹುವಿನ ಕಾರಣದಿಂದಾಗಿ ವ್ಯಕ್ತಿಯು ಕೆಟ್ಟ ಸಹವಾಸದಲ್ಲಿ ಸಿಲುಕಿಕೊಳ್ಳುತ್ತಾನೆ.
ರಾಹುವಿನ ಪ್ರಭಾವದಿಂದಾಗಿ ವ್ಯಕ್ತಿಯು ಮಾನಸಿಕ ಅಸ್ವಸ್ಥತೆ ಮತ್ತು ಖಿನ್ನತೆಗೆ ಒಳಗಾಗಬಹುದು.
ರಾಹುವಿನ ದುಷ್ಪರಿಣಾಮಗಳ ಕಾರಣದಿಂದಾಗಿ ಒಬ್ಬ ವ್ಯಕ್ತಿಯು ಚರ್ಮ ರೋಗಗಳಂತಹ ಸಮಸ್ಯೆಗಳನ್ನು ಸಹ ಅನುಭವಿಸಬೇಕಾದೀತು.
ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಿ
ಗಣೇಶನ ಆರಾಧನೆ ಮಾಡಿ
ರಾಹು ದೋಷ ನಿವಾರಣೆ ಮಂತ್ರವನ್ನು ಪಠಿಸಿ (ಮಂತ್ರ- ಓಂ ಭ್ರಂ ಭ್ರಂ ಭ್ರಂ ಸ: ರಾಹವೇ ನಮಃ)
ಸೋಮವಾರ ಮತ್ತು ಶನಿವಾರದಂದು ಶಿವನಿಗೆ ನೀರು ಮತ್ತು ಹಾಲನ್ನು ಅರ್ಪಿಸಿ
ರಾಹು ಗ್ರಹವನ್ನು ಶಾಂತಗೊಳಿಸಲು ‘ಓಂ ನಮಃ ಶಿವಾಯ’ ಮಂತ್ರವನ್ನು ಪಠಿಸಿ
ರಾಹು ದೋಷ ನಿವಾರಣೆಗೆ 18 ಶನಿವಾರ ಉಪವಾಸ ಮಾಡಿ
Date of Holika Dahan: ಹೋಳಿ ಕಾ ದಹನ್ ದಿನಾಂಕ – 7 ಮಾರ್ಚ್ 2023
ಹೋಳಿ ದಹನ ಮುಹೂರ್ತ – ಸಂಜೆ 6.24 ರಿಂದ 8.51 ರವರೆಗೆ
ಹೋಳಿ ದಹನ ಒಟ್ಟು ಸಮಯ – 2 ಗಂಟೆ 27 ನಿಮಿಷಗಳು