‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ

| Updated By: Rajesh Duggumane

Updated on: Oct 15, 2022 | 8:09 AM

ಮಾಲಾ ಸಂಸ್ಥೆಯ ಒಡತಿ ರತ್ನಮಾಲಾ. ಆಕೆಯ ಬಳಿ ಸಂಪೂರ್ಣ ಅಧಿಕಾರ ಇದೆ. ಮಗ ಹರ್ಷ ಮುಂಗೋಪಿ. ಈ ಕಾರಣಕ್ಕೆ ಕಂಪನಿಯನ್ನು ಆತನ ಹೆಸರಿಗೆ ಬರೆಯೋಕೆ ಆಕೆಗೆ ಇಷ್ಟವಿರಲಿಲ್ಲ. ಹೀಗಾಗಿ, ಎಲ್ಲಾ ಆಸ್ತಿಯನ್ನು ಸೊಸೆ ಭುವಿ ಹೆಸರಿಗೆ ಬರೆದಿದ್ದಾಳೆ ರತ್ನಮಾಲಾ.

‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
ರತ್ನಮಾಲಾ
Follow us on

‘ಕನ್ನಡತಿ’ (Kannadathi)ಧಾರಾವಾಹಿಯಲ್ಲಿ ರತ್ನಮಾಲಾ ಪಾತ್ರ ಸಾಕಷ್ಟು ಹೈಲೈಟ್ ಆಗುತ್ತಿದೆ. ಅವಳನ್ನು ಕಂಡರೆ ಅನೇಕರಿಗೆ ಇಷ್ಟ. ಅವಳು ನಡೆದುಕೊಳ್ಳುವ ರೀತಿ, ಅವಳ ತಾಳ್ಮೆ, ಅವಳು ಎಲ್ಲರಿಗೂ ಗೌರವ ನೀಡುವ ರೀತಿ ಹೀಗೆ ಪ್ರತಿ ವಿಚಾರಗಳು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಈ ಮೊದಲು ರತ್ನಮಾಲಾ ಪಾತ್ರ ಕೊನೆಯಾಗಲಿದೆ ಎಂದೇ ಹೇಳಲಾಗಿತ್ತು. ಆದರೆ ಆ ರೀತಿ ಆಗಿಲ್ಲ. ಈಗ ವೀಕ್ಷಕರಲ್ಲಿ ಮತ್ತದೇ ಅನುಮಾನ ಮೂಡಿದೆ. ರತ್ನಮಾಲಾ (Ratnamala) ಪಾತ್ರ ಶೀಘ್ರವೇ ಕೊನೆಯಾಗಬಹುದು ಎಂದು ಪ್ರೇಕ್ಷಕರು ಊಹಿಸುತ್ತಿದ್ದಾರೆ. ಅಕ್ಟೋಬರ್ 14ರಂದು ನಡೆದ ಘಟನೆಯೇ ಅದಕ್ಕೆ ಸಾಕ್ಷಿ.

ಮಾಲಾ ಸಂಸ್ಥೆಯ ಒಡತಿ ರತ್ನಮಾಲಾ. ಆಕೆಯ ಬಳಿ ಸಂಪೂರ್ಣ ಅಧಿಕಾರ ಇದೆ. ಮಗ ಹರ್ಷ ಮುಂಗೋಪಿ. ಈ ಕಾರಣಕ್ಕೆ ಕಂಪನಿಯನ್ನು ಆತನ ಹೆಸರಿಗೆ ಬರೆಯೋಕೆ ಆಕೆಗೆ ಇಷ್ಟವಿರಲಿಲ್ಲ. ಹೀಗಾಗಿ, ಎಲ್ಲಾ ಆಸ್ತಿಯನ್ನು ಸೊಸೆ ಭುವಿ ಹೆಸರಿಗೆ ಬರೆದಿದ್ದಾಳೆ ರತ್ನಮಾಲಾ. ಆಕೆಯನ್ನು ಕಂಡರೆ ರತ್ನಮಲಾಗೆ ಬಲು ಇಷ್ಟ. ಈ ಕಾರಣದಿಂದಲೇ ಆಸ್ತಿ ವಿಚಾರದಲ್ಲಿ ಬಹು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಳು. ಆದರೆ, ಈ ವಿಚಾರ ಇನ್ನೂ ರಿವೀಲ್ ಆಗಿಲ್ಲ. ಇದನ್ನು ಹೇಳುವ ಮೊದಲೇ ರತ್ನಮಾಲಾ ಪಾತ್ರ ಕೊನೆಯಾಗುವ ಸೂಚನೆ ಸಿಕ್ಕಿದೆ.

ರತ್ನಮಾಲಾ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆಕೆಗೆ ಬಂದಿರೋ ಕಾಯಿಲೆಯಿಂದ ಸಾಕಷ್ಟು ತೊಂದರೆಗಳು ಉಂಟಾಗುತ್ತಿವೆ. ಆರಂಭದಲ್ಲಿ ಮರೆವಿನ ಕಾಯಿಲೆ ಅತಿಯಾಗಿತ್ತು. ಈಗ ಅದು ಮತ್ತೊಂದು ಹಂತಕ್ಕೆ ಹೋಗಿದೆ. ಆಕೆಯ ದೇಹದ ಮೇಲೆ ಪರಿಣಾಮ ಬೀರೋಕೆ ಶುರುವಾಗಿದೆ. ಆಕೆ ಮೂರ್ಚೆ ಹೋಗಿದ್ದಾಳೆ. ಇದರಿಂದ ಮನೆಯವರಲ್ಲಿ ಆತಂಕ ಶುರುವಾಗಿದೆ.

ಇದನ್ನೂ ಓದಿ
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ಮಾಲಾ ಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿತ್ತು. ರತ್ನಮಾಲಾ ಈ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಅನಾಆರೋಗ್ಯದ ಕಾರಣದಿಂದ ಅವಳು ಸಭೆಗೆ ಬಂದಿಲ್ಲ. ಬದಲಿಗೆ ಭುವಿಯನ್ನು ಕಳುಹಿಸಿದ್ದಾಳೆ. ಭುವಿಯನ್ನು ನೋಡಿ ಅನೇಕರಿಗೆ ಅಚ್ಚರಿ ಆಗಿತ್ತು. ಅಷ್ಟೇ ಅಲ್ಲ ರತ್ನಮಾಲಾಗೆ ಅನಾರೋಗ್ಯ ಕಾಡಿದೆಯೇ ಎಂಬ ಅನುಮಾನ ಮೂಡಿತ್ತು. ಹೀಗಿರುವಾಗಲೇ ರತ್ನಮಾಲಾ ತಲೆತಿರುಗಿ ಬಿದ್ದಿದ್ದಾಳೆ. ಆಕೆಯನ್ನು ಅಲ್ಲಿಯೇ ಇರುವ ಕೊಠಡಿಯಲ್ಲಿ ಇರಿಸಲಾಗಿದೆ.

ಹರ್ಷನ ಸಹೋದರ ದೇವ್ ವೈದ್ಯ. ಅವನು ರತ್ನಮಾಲಾ ಇರುವಲ್ಲಿಗೆ ಬಂದಿದ್ದಾನೆ. ಹರ್ಷನ ಆತಂಕವನ್ನು ಕಡಿಮೆ ಮಾಡಿದ್ದಾನೆ. ‘ನೀನು ಹೆದರಬೇಡ. ಈ ರೀತಿಯ ಕಾಯಿಲೆ ಬಂದಾಗ ಹೀಗೆ ಆಗೋದು ಸಹಜ. ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಅಮ್ಮಮ್ಮ ಮಲಗಿದ್ದಾಳೆ. ಆಕೆಗೆ ಯಾವಾಗ ಎಚ್ಚರ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಧೈರ್ಯ ತುಂಬಿದ್ದಾನೆ.

ದೇವ್ ಆಡಿದ ಮಾತಿನಿಂದ ಹರ್ಷ ಧೈರ್ಯ ತೆಗೆದುಕೊಂಡಿದ್ದಾನೆ. ಹೀಗಿರುವಾಗಲೇ ರತ್ನಮಾಲಾ ಬರೆದುಕೊಂಡಿರುವ ಅನೇಕ ನೋಟ್ಸ್ ಹರ್ಷನಿಗೆ ಸಿಕ್ಕಿದೆ. ಆಗ ಹರ್ಷ ಹಾಗೂ ದೇವ್​ಗೆ ಅನುಮಾನ ಹೆಚ್ಚಾಗಿದೆ. ‘ಈ ರೀತಿಯ ಪ್ರಕರಣದಲ್ಲಿ ನಿದ್ದೆ ಮಾಡುತ್ತಲೇ ಕೋಮಾ ಸ್ಥಿತಿಗೆ ಹೋದ ಉದಾಹರಣೆ ಇದೆ. ಹೀಗಾಗಿ, ನಾವು ರತ್ನಮಾಲಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು’ ಎಂದಿದ್ದಾನೆ ದೇವ್. ಈ ವಿಚಾರ ಕೇಳಿ ಹರ್ಷನಿಗೂ ಆತಂಕ ಆಗಿದೆ. ಜತೆಗೆ ವೀಕ್ಷಕರಲ್ಲಿ ಅನುಮಾನ ಒಂದು ಮೂಡಿದೆ.

ಧಾರಾವಾಹಿಗೆ ಟ್ವಿಸ್ಟ್ ನೀಡಬೇಕು ಎಂಬ ಕಾರಣಕ್ಕೆ ಹಲವು ಧಾರಾವಾಹಿಗಳ ಫೇಮಸ್ ಪಾತ್ರಗಳನ್ನು ಕೊನೆ ಮಾಡಿದ ಅನೇಕ ಉದಾಹರಣೆಗಳು ಇವೆ. ಈಗ ‘ಕನ್ನಡತಿ’ ಧಾರಾವಾಹಿಯಲ್ಲೂ ಅದೇ ರೀತಿ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಹಾಗಾದಲ್ಲಿ ಒಂದು ವರ್ಗದವರಿಗೆ ಈ ಟ್ವಿಸ್ಟ್ ಹಿಡಿಸದೇ ಇರಬಹುದು. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.