‘ನಾನು ಎಷ್ಟು ಟೇಕ್​ ತೆಗೆದುಕೊಳ್ತೀನಿ ಅಂತ ಬೆಟ್​ ಕಟ್ಟುತ್ತಿದ್ದರು’; ಅವಮಾನದ ಹಾದಿ ನೆನೆದ ಕಿರಣ್​ ರಾಜ್

| Updated By: Rajesh Duggumane

Updated on: Aug 24, 2021 | 9:03 PM

‘ಕನ್ನಡ ಬಿಗ್ ಬಾಸ್ ಸೀಸನ್ 8’ ಪೂರ್ಣಗೊಂಡ ನಂತರ ಮಿನಿ‌ ಸೀಸನ್ ಆರಂಭಿಸಲಾಗಿದೆ. ಕನ್ನಡ ಕಿರುತೆರೆ ಸೆಲೆಬ್ರಿಟಿಗಳು‌ ಇದರಲ್ಲಿ‌ ಪಾಲ್ಗೊಂಡಿದ್ದಾರೆ.‌ ಈ ಮೂಲಕ ನಟ-ನಟಿಯರು ಖಾಸಗಿ ಜೀವನ ತಿಳಿದುಕೊಳ್ಳಲು ಇದು ಸಹಕಾರಿಯಾಗಿದೆ.

‘ನಾನು ಎಷ್ಟು ಟೇಕ್​ ತೆಗೆದುಕೊಳ್ತೀನಿ ಅಂತ ಬೆಟ್​ ಕಟ್ಟುತ್ತಿದ್ದರು’; ಅವಮಾನದ ಹಾದಿ ನೆನೆದ ಕಿರಣ್​ ರಾಜ್
ಕಿರಣ್​ ರಾಜ್
Follow us on

ಕಿರಣ್ ರಾಜ್ ಕಿರುತೆರೆಯ ಬೇಡಿಕೆಯ‌ ನಟ. ‘ಕನ್ನಡತಿ‌’ ಧಾರಾವಾಹಿ‌ ಮೂಲಕ ಅವರ ಖ್ಯಾತಿ ಜಾಸ್ತಿ ಆಗಿದೆ.‌ ಅವರು‌ ಈಗ ಸಿನಿಮಾಗಳಲ್ಲೂ‌ ನಟಿಸುತ್ತಿದ್ದಾರೆ.‌ ಇದರ‌ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಈಗ ಅವರು ತಾವು ಅನುಭವಿಸಿದ‌ ಕಷ್ಟದ ಬಗ್ಗೆ ಬಿಗ್ ಬಾಸ್ ಮಿನಿ‌ ಸೀಸನ್‌ನಲ್ಲಿ‌ ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಕನ್ನಡ ಬಿಗ್ ಬಾಸ್ ಸೀಸನ್ 8’ ಪೂರ್ಣಗೊಂಡ ನಂತರ ಮಿನಿ‌ ಸೀಸನ್ ಆರಂಭಿಸಲಾಗಿದೆ. ಕನ್ನಡ ಕಿರುತೆರೆ ಸೆಲೆಬ್ರಿಟಿಗಳು‌ ಇದರಲ್ಲಿ‌ ಪಾಲ್ಗೊಂಡಿದ್ದಾರೆ.‌ ಈ ಮೂಲಕ ನಟ-ನಟಿಯರು ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಇದು ಸಹಕಾರಿಯಾಗಿದೆ. ಕಿರುತೆರೆ ಸಾಕಷ್ಟು ಸೆಲೆಬ್ರಿಟಿಗಳು ತಾವು ಅನುಭವಿಸಿದ‌ ಕಷ್ಟಗಳು ಹಾಗೂ ಅವಮಾನಗಳ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಕಿರಣ್ ರಾಜ್ ಅವರು ಅಭಿನವ್​ ಜತೆ ಮಾತನಾಡುತ್ತಿದ್ದರು. ‌ಆಗ ತಮ್ಮ ವೃತ್ತಿ‌ ಜೀವನದ  ಆರಂಭದ ದಿನಗಳನ್ನು‌ ಕಿರಣ್ ನೆನಪಿಸಿಕೊಂಡಿದ್ದಾರೆ. ಅನುಭವಿಸಿದ ಅವಮಾನಗಳನ್ನು ಅವರು ವಿವರಿಸಿದ್ದಾರೆ. ‘ಆರಂಭದಲ್ಲಿ ನಾನು ತುಂಬಾ ಬೈಯ್ಯಿಸಿಕೊಳ್ಳುತ್ತಿದೆ. ನನಗೆ ಆ ಶೋನಲ್ಲಿ ತುಂಬಾ ಬೈಯ್ತಿದ್ರು. ನಾನು ಆಗತಾನೇ ಕನ್ನಡ ಕಲಿಯುತ್ತಾ ಇದ್ದೆ. ಒಂದು ಕಡೆ ನರ್ವಸ್​ನೆಸ್. ನಾನು ಡೈಲಾಗ್​ ಕಂಠಪಾಠ​​ ಮಾಡುವಾಗ ಅಲ್ಲಿದ್ದವರು ನಾನು ಎಷ್ಟು ಟೇಕ್​ ತೆಗೆದುಕೊಳ್ತೀನಿ ಎಂದು ಬೆಟ್​ ಕಟ್ಟುತ್ತಾ ಇದ್ರು. ಅಂದು ಟ್ರಿಗರ್ ಆದೆ. ನಾನು ಮತ್ತೆ ಸಿಗಲ್ಲ ಎಂದು ಹೇಳಿ ಬಂದಿದ್ದೆ. ಆದರೆ, ನನಗೆ ಇತ್ತೀಚೆಗೆ ಸಿಕ್ಕಿದ್ರು. ಒಂದು ಸಿನಿಮಾ ಮಾಡ್ತಾ ಇದೀನಿ. ಪ್ರಮೋಷನ್​ ಮಾಡಿಕೊಡಿ. ಒಂದು ವಿಡಿಯೋ ಬೈಟ್​ ಕೊಡಿ ಎಂದು ಅವರು ಕೇಳಿದ್ರು. ನೀವು ಯಾವಾಗಲೂ ಜೋಕ್​ ಮಟೀರಿಯಲ್​ ಆಗಬಾರದು. ಹಾಗಾದರೆ, ನೀವು ಅಲ್ಲಿರಲೇ ಬಾರದು’ ಎಂದಿದ್ದಾರೆ ಕಿರಣ್​ ರಾಜ್​.

ಕಿರಣ್​ ರಾಜ್​ ಆರಂಭದಲ್ಲಿ ಹಿಂದಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಅವರ ಕುಟುಂಬ ಇದ್ದಿದ್ದು ಉತ್ತರ ಭಾರತದಲ್ಲಿ. ಹೀಗಾಗಿ, ಅವರಿಗೆ ಕನ್ನಡ ಬರುತ್ತಿರಲಿಲ್ಲ. ಕರ್ನಾಟಕಕ್ಕೆ ಬಂದು ಅವರು ನಂತರ ಕನ್ನಡ ಕಲಿತು ಮಾತನಾಡಲಾರಂಭಿಸಿದರು.

ಇದನ್ನೂ ಓದಿ: ದೊಡ್ಮನೆಯಲ್ಲಿ ಕಿರಣ್​ ರಾಜ್​ ವಿಶೇಷ ಮನವಿ; ಇದನ್ನು ಬಿಗ್​ ಬಾಸ್​ ಸ್ವೀಕರಿಸ್ತಾರ?

ಬಿಗ್​ ಬಾಸ್​ ಬಗ್ಗೆ ಕಿರಣ್​ ರಾಜ್​ಗಿದೆ ಒಂದು ಭಯ; ದೊಡ್ಮನೆ ಆಫರ್​ ತಿರಸ್ಕರಿಸೋಕೆ ಕಾರಣವಾಯ್ತು ಈ ಅಂಶ

Published On - 8:27 pm, Tue, 24 August 21