ಚಿತ್ರರಂಗ ತೊರೆದು ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡಿದ್ದ ನಟನಿಗೆ ಬಿಗ್ ಬಾಸ್​ನಲ್ಲಿ ಚಾನ್ಸ್?

|

Updated on: Aug 24, 2023 | 10:33 AM

ಮಿರ್ಜಾ ಅಬ್ಬಾಸ್ ಅಲಿ ಕೋಲ್ಕತ್ತಾ ಮೂಲದವರು. ಸಣ್ಣ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡರು. 1996ರಲ್ಲಿ ರಿಲೀಸ್ ಆದ ‘ಕಾದಲ್ ದೇಶಂ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡದ ‘ಶಾಂತಿ ಶಾಂತಿ ಶಾಂತಿ’, ‘ಅಪ್ಪು ಆ್ಯಂಡ್ ಪಪ್ಪು’ ‘ಹೆಲೋ’ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಚಿತ್ರರಂಗ ತೊರೆದು ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡಿದ್ದ ನಟನಿಗೆ ಬಿಗ್ ಬಾಸ್​ನಲ್ಲಿ ಚಾನ್ಸ್?
ಅಬ್ಬಾಸ್
Follow us on

‘ಬಿಗ್ ಬಾಸ್’ (Bigg Boss) ರಿಯಾಲಿಟಿ ಶೋ ಅನೇಕರ ಬದುಕನ್ನು ಬದಲಾಯಿಸಿದೆ. ಟ್ಯಾಲೆಂಟ್ ತೋರಿಸೋಕೆ ಇದೊಂದು ಉತ್ತಮ ವೇದಿಕೆ. ದೊಡ್ಮನೆಗೆ ಬಂದ ಅನೇಕರಿಗೆ ಬದುಕು ಸಿಕ್ಕಿದೆ. ಕೆಲವರಿಗೆ ಮರುಹುಟ್ಟು ದೊರೆತಿದೆ. ಕನ್ನಡ, ತೆಲುಗು ಮೊದಲಾದ ಚಿತ್ರರಂಗದಲ್ಲಿ ಕೆಲಸ ಮಾಡಿದ ನಟ ಅಬ್ಬಾಸ್ (Abbas)​ ‘ಬಿಗ್ ಬಾಸ್’ಗೆ ಬರುತ್ತಾರೆ ಎನ್ನುವ ಸುದ್ದಿ ಹರಿದಾಡಿದೆ. ಚಿತ್ರರಂಗದಿಂದ ದೂರವೇ ಇದ್ದ ಅವರು ಈಗ ಬಣ್ಣದ ಲೋಕಕ್ಕೆ ಮರಳೋಕೆ ರೆಡಿ ಆಗಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಭಾರತದ ಹಲವು ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಕಾಣುತ್ತಿದೆ. ‘ಬಿಗ್ ಬಾಸ್ ತೆಲುಗು ಸೀಸನ್ 7’ಗೆ ದಿನಗಣನೆ ಆರಂಭ ಆಗಿದೆ. ಬಿಗ್ ಬಾಸ್ ಮನೆಗೆ ತೆರಳುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಬಗ್ಗೆ ಈಗಲೇ ಒಂದು ದೊಡ್ಡ ಲಿಸ್ಟ್ ಓಡಾಡುತ್ತಿದೆ. ಅಬ್ಬಾಸ್ ಕೂಡ ಬಿಗ್ ಬಾಸ್​ಗ ಎಂಟ್ರಿ ಕೊಡುತ್ತಾರೆ ಎನ್ನಲಾಗಿದೆ. ಈ ಬಗ್ಗೆ ವಾಹಿನಿಯವರು ಮಾತುಕತೆ ನಡೆಸಿದ್ದಾರಂತೆ.

ಮಿರ್ಜಾ ಅಬ್ಬಾಸ್ ಅಲಿ ಕೋಲ್ಕತ್ತಾ ಮೂಲದವರು. ಸಣ್ಣ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡರು. 1996ರಲ್ಲಿ ರಿಲೀಸ್ ಆದ ‘ಕಾದಲ್ ದೇಶಂ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡದ ‘ಶಾಂತಿ ಶಾಂತಿ ಶಾಂತಿ’, ‘ಅಪ್ಪು ಆ್ಯಂಡ್ ಪಪ್ಪು’ ‘ಹೆಲೋ’ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. 2015ರಲ್ಲಿ ಅವರು ಚಿತ್ರರಂಗ ತೊರೆದರು. ನ್ಯೂಜಿಲೆಂಡ್​ಗೆ ತೆರಳಿ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡಿದರು. ಬೈಕ್ ಮೆಕ್ಯಾನಿಕ್ ಆಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ಈಗ ಅವರು ಮೋಟಿವೇಶನಲ್ ಸ್ಪೀಕರ್ ಆಗಿದ್ದಾರೆ ಎನ್ನಲಾಗುತ್ತಿದೆ. ಅವರಿಗೆ ಚಾನ್ಸ್ ಕೊಡಲು ಸ್ಟಾರ್ ಮಾ ನಿರ್ಧರಿಸಿದೆಯಂತೆ.

ಇದನ್ನೂ ಓದಿ: Exclusive: ಈ ಬಾರಿ ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್ ಇರುತ್ತಾ, ಇರಲ್ವಾ? ಇಲ್ಲಿದೆ ಪಕ್ಕಾ ಮಾಹಿತಿ

ಒಂದೊಮ್ಮೆ ಅಬ್ಬಾಸ್ ಬಿಗ್ ​ಬಾಸ್​ಗೆ ಬರೋಕೆ ಒಪ್ಪಿಕೊಂಡರೆ ಟಿಆರ್​ಪಿ ಹೆಚ್ಚಬಹುದು. ಅವರು ಇಷ್ಟು ವರ್ಷ ಎಲ್ಲಿದ್ದರು, ಯಾವ ರೀತಿಯ ಕೆಲಸಗಳನ್ನು ಮಾಡಿದ್ದರು ಎಂಬಿತ್ಯಾದಿ ವಿಚಾರಗಳು ಅಭಿಮಾನಿಗಳಿಗೆ ತಿಳಿಯಲಿದೆ. ಅವರಿಗೆ ಚಿತ್ರರಂಗದಲ್ಲಿ ಮತ್ತೆ ನಟಿಸೋಕೆ ಅವಕಾಶ ಸಿಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ