‘ಆರ್​ಆರ್​ಆರ್​’ ಸಿನಿಮಾ ಹೊಸ ದಾಖಲೆ; ಹಾಲಿವುಡ್ ಅವಾರ್ಡ್​ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆದ ರಾಜಮೌಳಿ ಚಿತ್ರ

| Updated By: Rajesh Duggumane

Updated on: Jul 02, 2022 | 8:00 PM

ರಾಜಮೌಳಿ ಸಿನಿಮಾಗಳಲ್ಲಿ ಅದ್ದೂರಿತನ ಕೊಂಚ ಹೆಚ್ಚೇ ಇರುತ್ತದೆ. ‘ಆರ್​​ಆರ್​ಆರ್’ ಚಿತ್ರ ಕೂಡ ಸಖತ್ ಅದ್ದೂರಿಯಾಗಿ ಮೂಡಿ ಬಂದಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1000+ ಕೋಟಿ ರೂಪಾಯಿ ಬಾಚಿಕೊಂಡಿರುವುದು ಚಿತ್ರದ ಹೆಚ್ಚುಗಾರಿಕೆ.

‘ಆರ್​ಆರ್​ಆರ್​’ ಸಿನಿಮಾ ಹೊಸ ದಾಖಲೆ; ಹಾಲಿವುಡ್ ಅವಾರ್ಡ್​ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆದ ರಾಜಮೌಳಿ ಚಿತ್ರ
ಜ್ಯೂ.ಎನ್​ಟಿಆರ್​-ರಾಮ್​ ಚರಣ್​
Follow us on

ಚಿತ್ರಮಂದಿರದಲ್ಲಿ ಸಾವಿರಾರು ಕೋಟಿ ಬಾಚಿದ ‘ಆರ್​ಆರ್​ಆರ್’ ಸಿನಿಮಾ (RRR Movie) ಒಟಿಟಿಯಲ್ಲೂ ಧೂಳ್ಳೆಬ್ಬಿಸಿತು. ಈ ಚಿತ್ರ ತೆರೆಕಂಡು ಮೂರು ತಿಂಗಳ ಮೇಲಾದರೂ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಹಲವು ವಿಚಾರಗಳಿಂದ ಈ ಸಿನಿಮಾ ಸುದ್ದಿ ಆಗುತ್ತಿದೆ. ಈಗ ಹಾಲಿವುಡ್​ ಅಂಗಳದಲ್ಲಿ ಚಿತ್ರಕ್ಕೆ ಪುರಸ್ಕಾರ ಸಿಕ್ಕಿದೆ. ಹಾಲಿವುಡ್​ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ರಾಜಮೌಳಿ (SS Rajamouli) ಸಿನಿಮಾಗೆ ರನ್ನರ್ ಅಪ್ ಸಿಕ್ಕಿದೆ. ಭಾರತದ ಚಿತ್ರವೊಂದು ಈ ರೀತಿಯ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ರಾಜಮೌಳಿ ಸಿನಿಮಾಗಳಲ್ಲಿ ಅದ್ದೂರಿತನ ಕೊಂಚ ಹೆಚ್ಚೇ ಇರುತ್ತದೆ. ‘ಆರ್​​ಆರ್​ಆರ್’ ಚಿತ್ರ ಕೂಡ ಸಖತ್ ಅದ್ದೂರಿಯಾಗಿ ಮೂಡಿ ಬಂದಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1000+ ಕೋಟಿ ರೂಪಾಯಿ ಬಾಚಿಕೊಂಡಿರುವುದು ಚಿತ್ರದ ಹೆಚ್ಚುಗಾರಿಕೆ. ಈ ಚಿತ್ರಕ್ಕೆ ಹಾಲಿವುಡ್​ ಮಂದಿಯೂ ಕೂಡ ಮೆಚ್ಚುಗೆ ಸೂಚಿಸಿದ್ದರು. ಈಗ ಚಿತ್ರ ಹಾಲಿವುಡ್ ಸಿನಿಮಾಗಳ ಜತೆ ಸ್ಪರ್ಧಿಸಿ ಗೆಲುವಿನ ಸಮೀಪದಲ್ಲಿ ಹಿನ್ನಡೆ ಕಂಡಿದೆ.

ಅಮೆರಿಕದಲ್ಲಿ ನಡೆದ ‘ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಮಿಡ್​ ಸೀಸನ್​ ಅವಾರ್ಡ್ಸ್​’ ಕಾರ್ಯಕ್ರಮದಲ್ಲಿ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಪೈಕಿ ‘ಅತ್ಯುತ್ತಮ ಸಿನಿಮಾ’ ವಿಭಾಗದಲ್ಲಿ ‘ಆರ್​ಆರ್​ಆರ್’ ಸಿನಿಮಾ ನಾಮ ನಿರ್ದೇಶನಗೊಂಡಿತ್ತು. ಈ ವಿಭಾಗದಲ್ಲಿ ಹಾಲಿವುಡ್​ನ ‘ದಿ ಬ್ಯಾಟ್​​ಮನ್​’ ಹಾಗೂ ‘ಟಾಪ್​ ಗನ್​: ಮಾರ್ವಿಕ್​’ ಸಿನಿಮಾಗಳು ಕೂಡ ಇದ್ದವು. ಅಂತಿಮವಾಗಿ ‘ಎವರಿಥಿಂಗ್​ ಎವರಿವೇರ್​ ಆಲ್​ ಎಟ್​ ಒನ್ಸ್​’ ವಿನ್ನರ್ ಆಗಿ ಹೊರ ಹೊಮ್ಮಿದರೆ, ‘ಆರ್​ಆರ್​ಆರ್​’ ರನ್ನರ್ ಅಪ್​ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ
RRR OTT Release: ‘ಆರ್​ಆರ್​ಆರ್​’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ? ಆ ದಿನಾಂಕಕ್ಕಾಗಿ ಕಾದಿರುವ ಫ್ಯಾನ್ಸ್​
RRR 2: ಆರ್​ಆರ್​ಆರ್​ ಸೀಕ್ವೆಲ್​ ಮಾಡಲು ಉತ್ಸಾಹ ತೋರಿದ ರಾಜಮೌಳಿ, ರಾಮ್​ ಚರಣ್​, ಜ್ಯೂ. ಎನ್​ಟಿಆರ್​
‘RRR’ ಯಶಸ್ಸು; ಚಿತ್ರತಂಡಕ್ಕೆ 18 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟ ರಾಮ್ ಚರಣ್
RRR Twitter Review: ನಿದ್ದೆ ಬಿಟ್ಟು ‘ಆರ್​ಆರ್​ಆರ್​’ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಏನಂದ್ರು?

ಮಾರ್ಚ್​ 24ರಂದು ‘ಆರ್​ಆರ್​ಆರ್’ ಸಿನಿಮಾ ತೆರೆಗೆ ಬಂತು. ಮೇ ಅಂತ್ಯಕ್ಕೆ ಚಿತ್ರ ಒಟಿಟಿಯಲ್ಲಿ ರಿಲೀಸ್​ ಆಯಿತು. ನೆಟ್​​ಫ್ಲಿಕ್ಸ್​ನಲ್ಲಿ ‘ಆರ್​ಆರ್​ಆರ್​’  ಹಿಂದಿ ಅವತರಣಿಕೆ ಪ್ರದರ್ಶನವಾಗುತ್ತಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಅವತರಣಿಕೆಗಳು ಜೀ5ನಲ್ಲಿ ಬಿತ್ತರವಾಗುತ್ತಿವೆ. ಈ ಸಿನಿಮಾ ಮೇಕಿಂಗ್ ಮೂಲಕ ಸಾಕಷ್ಟು ಗಮನ ಸೆಳೆಯಿತು. ಜ್ಯೂ.ಎನ್​ಟಿಆರ್ ಹಾಗೂ ರಾಮ್​ ಚರಣ್ ಕಾಂಬಿನೇಷನ್ ಫ್ಯಾನ್ಸ್​ಗೆ ಇಷ್ಟವಾಯಿತು. ನೈಜ ಪಾತ್ರಗಳನ್ನು ಇಟ್ಟುಕೊಂಡು ರಾಜಮೌಳಿ ಕಾಲ್ಪನಿಕ ಕಥೆ ಹೆಣೆದಿದ್ದರು.

ಇದನ್ನೂ ಓದಿ: RRR: ಹಾಲಿವುಡ್​​ ಜನಪ್ರಿಯ ಬರಹಗಾರನಿಂದ ‘ಆರ್​ಆರ್​ಆರ್​​’ಗೆ ಶಹಬ್ಬಾಸ್​ಗಿರಿ; ಚಿತ್ರ ನೋಡಿ ಹೇಳಿದ್ದೇನು ಗೊತ್ತಾ?

‘ಆರ್​ಆರ್​ಆರ್​’ ರೆಸ್ಟೋರೆಂಟ್ ಆರಂಭಿಸಲಿದ್ದಾರೆ ರಾಮ್​ ಚರಣ್​-ಜ್ಯೂ.ಎನ್​ಟಿಆರ್​? ಕೇಳಿಬಂತು ಹೊಸ ಗುಸುಗುಸು