ಅಪ್ಪು​ ನಿವಾಸಕ್ಕೆ ರಾಹುಲ್​ ಗಾಂಧಿ ಭೇಟಿ; ಅಶ್ವಿನಿ ಪುನೀತ್​ ರಾಜ್​ಕುಮಾರ್​ ಜತೆ ಮಾತುಕತೆ

| Updated By: Rajesh Duggumane

Updated on: Mar 31, 2022 | 8:45 PM

ತುಮಕೂರಿನಿಂದ ರಾತ್ರಿ ವೇಳೆಗೆ ರಾಹುಲ್​ ಗಾಂಧಿ ಬೆಂಗಳೂರಿಗೆ ಆಗಮಿಸಿದರು. ಆ ಬಳಿಕ ಪುನೀತ್ ನಿವಾಸಕ್ಕೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಅಪ್ಪು​ ನಿವಾಸಕ್ಕೆ ರಾಹುಲ್​ ಗಾಂಧಿ ಭೇಟಿ; ಅಶ್ವಿನಿ ಪುನೀತ್​ ರಾಜ್​ಕುಮಾರ್​ ಜತೆ ಮಾತುಕತೆ
ಪುನೀತ್ ನಿವಾಸಕ್ಕೆ ರಾಹುಲ್
Follow us on

ಪುನೀತ್​ ರಾಜ್​ಕುಮಾರ್ (Puneeth Rajkumar) ಅವರನ್ನು ನಾವು ಕಳೆದುಕೊಂಡಿದ್ದೇವೆ. ಇದು ಇಡೀ ಭಾರತದ ಸಿನಿಮಾ ಇಂಡಸ್ಟ್ರಿಗೆ ತುಂಬಲಾರದ ನಷ್ಟ. ಪುನೀತ್ ನಿಧನದ ನಂತರದಲ್ಲಿ ಅವರ ನಿವಾಸಕ್ಕೆ ಸಾಕಷ್ಟು ಸೆಲೆಬ್ರಿಟಿಗಳು, ರಾಜಕಾರಣಿಗಳು ಭೇಟಿ ನೀಡಿ, ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ (Ashwini Puneeth Rajkumar) ಅವರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲು ಅರ್ಜುನ್, ರಾಮ್​ ಚರಣ್​ ಸೇರಿ ಹಲವು ಟಾಲಿವುಡ್​ ಸ್ಟಾರ್​ಗಳು ಪುನೀತ್​ ಮನೆಗೆ ಭೇಟಿ ನೀಡಿದ್ದರು. ಇಂದು (ಮಾರ್ಚ್​ 31) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಪುನೀತ್ ನಿವಾಸಕ್ಕೆ ತೆರಳಿದ್ದಾರೆ. ಈ ಮೂಲಕ ಕುಟುಂಬಕ್ಕೆ ಅವರು ಸಾಂತ್ವನ ಹೇಳಿದ್ದಾರೆ.

ಶುಕ್ರವಾರ (ಏಪ್ರಿಲ್​ 1) ಶಿವಕುಮಾರ ಶ್ರೀಗಳ 115ನೇ ಜಯಂತಿ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು (ಮಾರ್ಚ್​ 31) ತುಮಕೂರಿನ ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಸಿದ್ದಗಂಗಾ ಮಠದ ಶಿವಕುಮಾರ ಶ್ರೀ ಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ರಾತ್ರಿ ವೇಳೆಗೆ ಅವರು ಬೆಂಗಳೂರಿಗೆ ಆಗಮಿಸಿದರು. ಆ ಬಳಿಕ ಪುನೀತ್ ನಿವಾಸಕ್ಕೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದರು ರಾಹುಲ್​ ಗಾಂಧಿ.

ರಾಹುಲ್​ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಪುನೀತ್​ ನಿವಾಸಕ್ಕೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. 15ಕ್ಕೂ ಅಧಿಕ ಪೊಲೀಸರು ಪುನೀತ್​ ನಿವಾಸಕ್ಕೆ ಭದ್ರತೆ ನೀಡಿದರು.

ಪುನೀತ್​ ರಾಜ್​ಕುಮಾರ್ ಅವರನ್ನು ಕಳೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ಏಪ್ರಿಲ್​ 17ರಂದು ಪುನೀತ್​ ಜನ್ಮದಿನ ಆಚರಿಸಲಾಗಿದೆ. ಈ ಪ್ರಯುಕ್ತ ಅವರ ನಟನೆಯ ‘ಜೇಮ್ಸ್’ ಸಿನಿಮಾ ತೆರೆಗೆ ಬಂತು. ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹೈಪ್​ ಸೃಷ್ಟಿ ಮಾಡಿತ್ತು. ಈ ಚಿತ್ರಕ್ಕೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್ ಆದರು. ಈ ಸಿನಿಮಾ ನಾಲ್ಕೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.

ಇದನ್ನೂ ಓದಿ: ‘RRR​’ ನೋಡಲು ಬಂದರು, ಪುನೀತ್​ಗೆ ಜೈಕಾರ ಹಾಕಿದರು; ಅಪ್ಪು ಮೇಲಿನ ಅಭಿಮಾನ ನಿರಂತರ

ಪುನೀತ್ ನಿಧನರಾಗಿ 5 ತಿಂಗಳು, ಕುಟುಂಬ ಸದಸ್ಯರಿಂದ ಪೂಜೆ ಸಲ್ಲಿಕೆ; ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸಿದ ಆರ್​ಜಿವಿ