Lucky Man: ಒಂದು ದಿನ ಮೊದಲೇ ‘ಲಕ್ಕಿ ಮ್ಯಾನ್​’ ನೋಡುವ ಚಾನ್ಸ್; ಪುನೀತ್ ಚಿತ್ರದ ಟಿಕೆಟ್​ ಸೋಲ್ಡ್​ ಔಟ್​

Puneeth Rajkumar: ಸೆಪ್ಟೆಂಬರ್​ 8ರಂದು ಅನೇಕ ಕಡೆಗಳಲ್ಲಿ ‘ಲಕ್ಕಿ ಮ್ಯಾನ್​’ ಚಿತ್ರದ ಪ್ರೀಮಿಯರ್​ ಪ್ರದರ್ಶನ ಆಗುತ್ತಿದೆ. ಅದರ ಟಿಕೆಟ್​ಗಳ ಮುಂಗಡ ಬುಕಿಂಗ್​ಗೆ ಅವಕಾಶ ನೀಡಲಾಗಿದೆ.

Important Highlight‌
Lucky Man: ಒಂದು ದಿನ ಮೊದಲೇ ‘ಲಕ್ಕಿ ಮ್ಯಾನ್​’ ನೋಡುವ ಚಾನ್ಸ್; ಪುನೀತ್ ಚಿತ್ರದ ಟಿಕೆಟ್​ ಸೋಲ್ಡ್​ ಔಟ್​
ಲಕ್ಕಿ ಮ್ಯಾನ್ ಸಿನಿಮಾ ಪೋಸ್ಟರ್​
Follow us
TV9 Digital Desk
| Updated By: ಮದನ್​ ಕುಮಾರ್​

Updated on: Sep 07, 2022 | 10:55 AM

‘ಪವರ್ ಸ್ಟಾರ್​’ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರನ್ನು ಅಭಿಮಾನಿಗಳು, ಸ್ನೇಹಿತರು, ಕುಟುಂಬದವರು ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ದೊಡ್ಡ ಪರದೆ ಮೇಲೆ ನೋಡಬೇಕು ಎಂಬುದು ಫ್ಯಾನ್ಸ್​ ಬಯಕೆ. ಅದಕ್ಕೆ ಉಳಿದಿರುವುದು ಕೆಲವೇ ಕೆಲವು ಅವಕಾಶಗಳು ಮಾತ್ರ. ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಪುನೀತ್ ರಾಜ್​ಕುಮಾರ್​ ಅವರು ‘ಲಕ್ಕಿ ಮ್ಯಾನ್​’ (Lucky Man Movie) ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರವೀಗ ಬಿಡುಗಡೆಗೆ ಸಿದ್ಧವಾಗಿದೆ. ಸೆಪ್ಟೆಂಬರ್​ 9ರಂದು ‘ಲಕ್ಕಿ ಮ್ಯಾನ್​’ ರಿಲೀಸ್​ ಆಗಲಿದೆ. ಆದರೆ ಒಂದು ದಿನ ಮುನ್ನ, ಅಂದರೆ, ಸೆಪ್ಟೆಂಬರ್​ 8ರಂದು ಅನೇಕ ಕಡೆಗಳಲ್ಲಿ ಪೇಯ್ಡ್​ ಪ್ರೀಮಿಯರ್​ಗೆ​ ವ್ಯವಸ್ಥೆ ಮಾಡಲಾಗುತ್ತಿದೆ. ಆ ಶೋಗಳ ಟಿಕೆಟ್​ಗಳು ಸೋಲ್ಡ್​ ಔಟ್​ ಆಗುತ್ತಿವೆ. ಅಪ್ಪು ಜೊತೆ ಈ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ, ಪ್ರಭುದೇವ (Prabhu Deva), ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್​ ಮುಂತಾದವರು ನಟಿಸಿದ್ದಾರೆ.

ಪ್ರಭುದೇವ ಅವರ ಸಹೋದರ ಎಸ್​. ನಾಗೇಂದ್ರ ಪ್ರಸಾದ್​ ಅವರು ‘ಲಕ್ಕಿ ಮ್ಯಾನ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ದೇವರ ಪಾತ್ರವಿದೆ. ಅಭಿಮಾನಿಗಳ ಕಣ್ಣಲ್ಲಿ ಅವರ ದೇವರಾಗಿದ್ದಾರೆ. ಆ ರೀತಿ ದೇವರ ಪಾತ್ರದಲ್ಲಿಯೇ ಅವರನ್ನು ತೆರೆಮೇಲೆ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ಗಮನ ಸೆಳೆಯುತ್ತಿದೆ.

ಸೆಪ್ಟೆಂಬರ್​ 8ರ ಗುರುವಾರ ಅನೇಕ ಕಡೆಗಳಲ್ಲಿ ಪ್ರೀಮಿಯರ್​ ಪ್ರದರ್ಶನ ನಡೆಯುತ್ತಿದೆ. ಅದರ ಟಿಕೆಟ್​ಗಳ ಮುಂಗಡ ಬುಕಿಂಗ್​ಗೆ ಅವಕಾಶ ನೀಡಲಾಗಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ. ಬೆಂಗಳೂರಿನ ಅನೇಕ ಮಲ್ಟಿಪ್ಲೆಕ್ಸ್​ನಲ್ಲಿ ಅಂದು ಸಂಜೆ 6 ಗಂಟೆ ನಂತರ ಪ್ರೀಮಿಯರ್​ ಪ್ರದರ್ಶನ ನಡೆಯಲಿದೆ.

ಇದನ್ನೂ ಓದಿ
Image
‘ಲಕ್ಕಿ ಮ್ಯಾನ್​​ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ,​ ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ’; ಕಿಚ್ಚ ಸುದೀಪ್​
Image
‘ದೇವರ ಪಾತ್ರದಲ್ಲಿ ದೇವ್ರನ್ನೇ ನೋಡಲು ಕಾಯ್ತಿದೀನಿ’: ಪುನೀತ್​ ಬಗ್ಗೆ ಯುವ ರಾಜ್​ಕುಮಾರ್​ ಭಾವುಕ ನುಡಿ
Image
ಪುನೀತ್ ನಟನೆಯ ‘ಲಕ್ಕಿ ಮ್ಯಾನ್​’ ಚಿತ್ರದ ಆಡಿಯೋ ರಿಲೀಸ್ ಲೈವ್ ನೋಡಿ
Image
Puneeth Rajkumar: ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿನ ಪುನೀತ್​ ಪೋಟೋಗಳು; ‘ನಮ್ಮ ಬಾಸ್​ ಸೂಪರ್​’ ಎಂದ ಫ್ಯಾನ್ಸ್​

ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಇವೆಂಟ್​ ಬೆಂಗಳೂರಿನಲ್ಲಿ ನಡೆದಿತ್ತು. ಆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ‘ಈ ಸಿನಿಮಾ ರಿಲೀಸ್​ ಆದಾಗ ಎಲ್ಲರೂ ಎರಡೂ ಕೈಗಳನ್ನು ಚಾಚಿ ತಬ್ಬಿಕೊಂಡು ನೋಡಿ. ಯಾಕೆಂದರೆ, ಮತ್ತೆ ಬೇಕು ಎಂದರೂ ಕೂಡ ಇದು ಸಿಗಲ್ಲ. ಇರುವಾಗ ನಾವು ಬೆಲೆ ಕೊಡುತ್ತೇವೆ. ಕಳೆದುಕೊಂಡ ನಂತರ ಅದಕ್ಕೆ ಇನ್ನೂ ಜಾಸ್ತಿ ಬೆಲೆ ಕೊಡುತ್ತೇವೆ. ಈ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ದೇವರ ಪಾತ್ರ ಮಾಡಿದ್ದಾರೆ. ಅದೊಂದು ನಂಬಿಕೆ. ಅವರು ಬದುಕಿದ ರೀತಿಯೇ ಆಗಿತ್ತು. ನಾವೆಲ್ಲರೂ ಅವರನ್ನು ಮಿಸ್​ ಮಾಡಿಕೊಳ್ಳುತ್ತೇವೆ. ಆದರೆ ಟ್ರೇಲರ್​ ನೋಡುವಾಗ ನಾನು ಸ್ಮೈಲ್​ ಮಾಡುತ್ತಿದ್ದೆ. ಯಾಕೆಂದರೆ ಅವರಿಗೆ ಈ ಸಿನಿಮಾ ಹೆಚ್ಚು ಹೊಂದಿಕೆ ಆಗುತ್ತಿದೆ. ಎಲ್ಲರೂ ಈ ಸಿನಿಮಾವನ್ನು ತಬ್ಬಿಕೊಂಡು ಅನುಭವಿಸಿ’ ಎಂದು ಕಿಚ್ಚ ಸುದೀಪ್​ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು