ನೂರಾರು ಕೋಟಿ ಗಳಿಸಿದರೂ ಆ ತಪ್ಪು ಮಾಡಲಿಲ್ಲ ಹೊಂಬಾಳೆ ಫಿಲ್ಮ್ಸ್​; ನಿರ್ಮಾಪಕರ​ ಜಾಣತನದ ನಡೆ

| Updated By: Rajesh Duggumane

Updated on: Jun 13, 2022 | 1:16 PM

100 ಕೋಟಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಹಲವು ಪಟ್ಟು ಹೆಚ್ಚು ಹಣವನ್ನು ಗಳಿಕೆ ಮಾಡಿದೆ. ಇದು ವಿಜಯ್​ ಖುಷಿಗೆ ಕಾರಣವಾಗಿದೆ. ಈ ಹಣವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ನಿರ್ಮಾಪಕರು ಯೋಚಿಸಿದಂತಿದೆ.

ನೂರಾರು ಕೋಟಿ ಗಳಿಸಿದರೂ ಆ ತಪ್ಪು ಮಾಡಲಿಲ್ಲ ಹೊಂಬಾಳೆ ಫಿಲ್ಮ್ಸ್​; ನಿರ್ಮಾಪಕರ​ ಜಾಣತನದ ನಡೆ
ವಿಜಯ್ -ಯಶ್
Follow us on

ನೂರಾರು ಕೋಟಿ ರೂಪಾಯಿ ಹಾಕಿ ಮಾಡಿದ ಸಿನಿಮಾ ಹಿಟ್ ಆಯಿತು ಎಂದಾಕ್ಷಣ ನಿರ್ಮಾಪಕರಿಗೆ ಹೊಸ ಹುಮ್ಮಸ್ಸು ಬರುತ್ತದೆ. ಮುಂದಿನ ಪ್ರಾಜೆಕ್ಟ್​​ಗೆ ಬೇಕಾಬಿಟ್ಟಿ ದುಡ್ಡು ಸುರಿಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೈ ಸುಟ್ಟುಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ರೀತಿ ಆದ ಸಾಕಷ್ಟು ಉದಾಹರಣೆ ಇದೆ. ಇನ್ನೂ ಕೆಲವರು ಒಂದು ಸಿನಿಮಾ ಹಿಟ್ ಆದ ಬಳಿಕ ಮತ್ತೆ ಸಿನಿಮಾ ಮಾಡುವ ಸಾಹಸಕ್ಕೆ ಹೋಗುವುದೇ ಇಲ್ಲ. ‘ಕೆಜಿಎಫ್ 2’ ಚಾಪ್ಟರ್​ ಸಿನಿಮಾ (KGF Chapter 2) ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur) ಅವರು ಈ ವಿಚಾರದಲ್ಲಿ ಜಾಣತನದ ನಡೆ ತೋರಿದ್ದಾರೆ. ತೆಲುಗು, ಮಲಯಾಳಂ, ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವ ಅವರು ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ.

‘ಕೆಜಿಎಫ್ 2’ ಸಿನಿಮಾ ಮಾಡಿದ ಮೋಡಿ ತುಂಬಾನೇ ದೊಡ್ಡದು. ಈ ಚಿತ್ರದಿಂದ ನಿರ್ಮಾಣ ಸಂಸ್ಥೆಗೆ ನೂರಾರು ಕೋಟಿ ಹರಿದು ಬಂದಿದೆ. 100 ಕೋಟಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಹಲವು ಪಟ್ಟು ಹೆಚ್ಚು ಹಣವನ್ನು ಗಳಿಕೆ ಮಾಡಿದೆ. ಇದು ವಿಜಯ್​ ಖುಷಿಗೆ ಕಾರಣವಾಗಿದೆ. ಈ ಹಣವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ನಿರ್ಮಾಪಕರು ಯೋಚಿಸಿದಂತಿದೆ.

ಕನ್ನಡದ ‘ಕಾಂತಾರಾ’, ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾಗಳು ಕಡಿಮೆ ಬಜೆಟ್​ನಲ್ಲಿ ಸಿದ್ಧಗೊಂಡ ಸಿನಿಮಾಗಳು. ಈ ಎರಡೂ ಚಿತ್ರಗಳ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ‘ಬಘೀರ’ ಹಾಗೂ ‘ರಿಚರ್ಡ್​ ಆ್ಯಂಟನಿ’ ಸಿನಿಮಾಗಳು ಸ್ವಲ್ಪ ದೊಡ್ಡ ಬಜೆಟ್​ನಲ್ಲಿ ಸಿದ್ದಗೊಳ್ಳುತ್ತಿವೆ. ಈ ಚಿತ್ರಗಳ ಬಗ್ಗೆಯೂ ನಿರೀಕ್ಷೆ ಇದೆ.

ಇದನ್ನೂ ಓದಿ
Yash: ಅಬ್ಬಬ್ಬಾ.. ರಾಕಿಂಗ್ ಸ್ಟಾರ್ ಯಶ್ ತೊಟ್ಟ ಈ ಕ್ಯಾಪ್​ ಇಷ್ಟೊಂದು ದುಬಾರಿಯಾ?
ಸಂಡೇ ಸ್ಪೆಷಲ್​; ಯಶ್ ಜತೆಗಿನ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
Radhika Pandit: ಪತ್ನಿ ರಾಧಿಕಾ ಪಂಡಿತ್ ಕೆನ್ನೆಗೆ ಮುತ್ತಿಟ್ಟ ಯಶ್; ಫೋಟೋ ವೈರಲ್
Radhika Pandit: ಕುಟುಂಬದೊಂದಿಗೆ ಜನ್ಮದಿನ ಆಚರಿಸಿದ ರಾಧಿಕಾ ಪಂಡಿತ್; ಇಲ್ಲಿವೆ ಮುದ್ದಾದ ಫೋಟೋಗಳು

ಇದಲ್ಲದೆ, ತೆಲುಗಿನಲ್ಲಿ ‘ಸಲಾರ್​’, ಮಲಯಾಳಂನಲ್ಲಿ ‘ಟೈಸನ್​’, ತಮಿಳಿನಲ್ಲಿ ಸುಧಾ ಕೊಂಗರ ನಿರ್ದೇಶನದ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್​ ಬಂಡವಾಳ ಹೂಡುತ್ತಿದೆ. ಈ ಮೂಲಕ ವಿಜಯ್​ ಕಿರಗಂದೂರು ಅವರು ದಕ್ಷಿಣ ಭಾರತದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗಳಲ್ಲಿ ಕೆಲವು ಹಿಂದಿಗೂ ಡಬ್​ ಆಗಿ ತೆರೆ ಕಾಣುತ್ತಿದೆ.

ಇದನ್ನೂ ಓದಿ: KGF Chapter 2: ಓಟಿಟಿಯಲ್ಲಿ ರಿಲೀಸ್ ಆಯ್ತು ‘ಕೆಜಿಎಫ್ ಚಾಪ್ಟರ್ 2’; ರಾಕಿ ಭಾಯ್ ಬಾಕ್ಸಾಫೀಸ್​ನಲ್ಲಿ ಇದುವರೆಗೆ ಮಾಡಿದ ಕಲೆಕ್ಷನ್ ಎಷ್ಟು?

ವಿಜಯ್​ ಕಿರಗಂದೂರು ಅವರಿಗೆ ಬಾಲಿವುಡ್​ನಿಂದಲೂ ಬೇಡಿಕೆ ಇದೆ. ಅಲ್ಲಿ ಹೋಗಿ ನೂರಾರು ಕೋಟಿ ಸುರಿದು ಸಿನಿಮಾ ಮಾಡುವ ಅವಕಾಶ ಅವರಿಗೆ ಇತ್ತು. ಆದರೆ, ಅವರು ಆ ರೀತಿ ಮಾಡಿಲ್ಲ. ಸದ್ಯ ಬಾಲಿವುಡ್​ನಲ್ಲಿ ಎಲ್ಲಾ ಸಿನಿಮಾಗಳು ಮಕಾಡೆ ಮಲಗುತ್ತಿವೆ. ಅಲ್ಲಿ ಸಿನಿಮಾ ಮಾಡಿದರೆ ನಷ್ಟ ಕೂಡ ಆಗಬಹುದು. ಹೀಗಾಗಿ, ವಿಜಯ್ ಕಿರಗಂದೂರು ಅವರು ದಕ್ಷಿಣ ಭಾರತದಲ್ಲೇ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಅವರ ಈ ಜಾಣತನದ ನಡೆಗೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.