ಜಿಯಾಗ್ರಫಿ ಚಾನೆಲ್ನ ಎಪಿಸೋಡ್ ಒಂದರಲ್ಲಿ ಸಿಕ್ಕಿದ ಕಥೆಯೇ ವೀಲ್ ಚೇರ್ ರೋಮಿಯೋ..! ಇದನ್ನು ಕೇಳಿ ನಿಮಗೆ ಒಮ್ಮೆಲೆ ಶಾಕ್ ಆಗಿರಬಹುದು. ಯಾಕಂದ್ರೆ ‘ವೀಲ್ ಚೇರ್ ರೋಮಿಯೋ’ (Wheel Chair Romeo Movie) ಟ್ರೇಲರ್ ಆಂಡ್ ಸಾಂಗ್ಸ್ಗಳನ್ನು ನೋಡಿ, ಕಥೆಯ ಗಟ್ಟಿತನಕ್ಕೆ ಆಶ್ಚರ್ಯಚಕಿತರಾಗದವರಿಲ್ಲ. ಅಷ್ಟು ಭಿನ್ನವಾಗಿದೆ ವೀಲ್ ಚೇರ್ ರೋಮಿಯೋ ಕಥಾನಕ. ಆದರೆ ಈ ಕಥೆ ಹುಟ್ಟಿದ್ದು ಹೇಗೆ ಎಂಬ ಕುತೂಹಲದ ಪ್ರಶ್ನೆಗಳಂತು ನಿಮ್ಮಲ್ಲಿ ಆಗಾಗ ಹೊಗೆಯಾಡುತ್ತಿರುತ್ತದೆ. ಅದಕ್ಕೆ ನಿರ್ದೇಶಕ ನಟರಾಜ್ (Nataraj) ಅವರೇ ಉತ್ತರ ನೀಡಿದ್ದಾರೆ. ಸಿನಿಮಾಗಳ ಕಥೆ ಹುಟ್ಟುವುದೇ ರೋಮಾಂಚಕ. ಎಲ್ಲೋ ಕುಳಿತಾಗ, ಏನೋ ನೋಡಿದಾಗ, ತಮ್ಮ ಸುತ್ತಮುತ್ತಲಿನ ಅನುಭವ ಕಥೆಯಾದಾಗ ಕತೆ ಹುಟ್ಟಲು ಅನೇಕ ಕಾರಣಗಳು ಸಿಗುತ್ತವೆ. ಅದೇ ರೀತಿ ವೀಲ್ ಚೇರ್ ರೋಮಿಯೋ ಕಥೆ ಹುಟ್ಟಿದ್ದು ಆ ಒಂದು ಎಪಿಸೋಡ್ ನೋಡುವಾಗ ಎಂಬುದು ವಿಶೇಷ. ಯಾವುದದು? ಮುಂದೆ ಓದಿ.
ನ್ಯಾಷನಲ್ ಜಿಯೋಗ್ರಫಿ ಚಾನೆಲ್ ನೋಡುಗರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಅಷ್ಟು ಆಸಕ್ತಿದಾಯಕ ವಿಚಾರಗಳು ಸಿಗುತ್ತವೆ. ಬೆರಗುಗಣ್ಣಿನಿಂದಲೇ ನೋಡುವಂತ ಎಪಿಸೋಡಿನಲ್ಲಿ, ಆಸ್ಟ್ರೇಲಿಯಾದ ತಂದೆಯೊಬ್ಬ ಮಗನನ್ನು ವೇಶ್ಯಾ ಗೃಹಕ್ಕೆ ಕರೆದೊಯ್ಯುವ ಸನ್ನಿವೇಶಗಳಿದ್ದವಂತೆ. ಅದನ್ನು ಭಾರತೀಯ ಸಮಾಜ ಒಪ್ಪಿಕೊಳ್ಳುವುದಿರಲಿ, ಅರಗಿಸಿಕೊಳ್ಳುವುದೂ ಕಷ್ಟವಿದೆ. ಆದರೆ ನಿರ್ದೇಶಕ ನಟರಾಜ್ ಅವರಿಗೆ ಅದೊಂದು ಎಳೆ ನಾನಾ ದಿಕ್ಕಿನಲ್ಲಿ ಆಲೋಚನೆಗೆ ಹಚ್ಚಿತ್ತು.
ಅದರ ಚುಂಗು ಹಿಡಿದು ಹೊರಟು, ಒಂದಷ್ಟು ಕಾಲ ಆಲೋಚಿಸಿ ಒಂದು ಚೆಂದದ ಕಥೆಗೆ ಜೀವ ಕೊಡಲಾರಂಭಿಸಿದ್ದರು. ಅದರ ಫಲವಾಗಿ ಜೀವ ತಳೆದಿದ್ದು ವೀಲ್ಚೇರ್ ರೋಮಿಯೋ ಕಥೆ. ವೀಲ್ ಚೇರ್ ರೋಮಿಯೋ ಕಣ್ಣಿಲ್ಲ ವೇಶ್ಯೆ ಮೇಲೆ ವೀಲ್ ಚೇರ್ ನಲ್ಲೇ ಜೀವನ ಸವೆಸಿದ ಹುಡುಗನಿಗೆ ಪ್ರೀತಿಯಾಗುತ್ತೆ. ಇಷ್ಟು ಗಂಭೀರ ಎಳೆಯಿರುವ ಚಿತ್ರ ನಿರ್ದೇಶಕರ ಯೋಚನೆಗೆ ತಕ್ಕಂತೆ ಮೂಡಿ ಬಂದಿದೆ. ಇದೇ 27ಕ್ಕೆ ರಾಜ್ಯಾದ್ಯಂತ ತೆರೆಕಾಣಲಿದೆ.
ಕೇಳುವುದಕ್ಕೆ ಇಷ್ಟೊಂದು ಆಶ್ಚರ್ಯ ಕಾಡಿದರೆ ಇನ್ನುಸಿನಿಮಾ ನೋಡುವಾಗ ಎಷ್ಟೆಲ್ಲಾ ಮನಸ್ಸು ಭಾರವಾಗುವ ಸನ್ನಿವೇಶ
ಸಿಗಬಹುದು ಎಂಬುದನ್ನು ಥಿಂಕ್ ಮಾಡಿ. ಇಷ್ಟೆಲ್ಲಾ ಭಾವಪರವಶ ಮಾಡುವಂತ ವೀಲ್ ಚೇರ್ ರೋಮಿಯೋನಾ ರೋಮ್ಯಾಂಟಿಕ್ ಕಥೆಯನ್ನು ಥಿಯೇಟರ್ ನಲ್ಲಿಯೇ ನೋಡಿದರೆ ಮಜಾ ಸಿಗುವುದು ಗ್ಯಾರಂಟಿ.
‘ವೀಲ್ಚೇರ್ ರೋಮಿಯೋ’ ಡೈಲಾಗ್ ಟ್ರೇಲರ್ ಇಲ್ಲಿದೆ:
‘ವೀಲ್ಚೇರ್ ರೋಮಿಯೋ’ ಚಿತ್ರದಲ್ಲಿ ರಾಮ್ ಚೇತನ್, ಮಯೂರಿ ಕ್ಯಾತರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ ಸೇರಿದಂತೆ ಖ್ಯಾತ ಕಲಾವಿದರ ದಂಡೇ ಚಿತ್ರದಲ್ಲಿದೆ. ಈಗಾಗಲೇ ಹಾಡು ಹಾಗೂ ಟ್ರೇಲರ್ ಮೂಲಕ ಮನಗೆದ್ದಿರುವ ಚಿತ್ರ ಮೇ 27ರಂದು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Tue, 24 May 22