ಅಕ್ಟೋಬರ್ 28ರಂದು ರಾಜ್ಯಾದ್ಯಂತ ‘ಗಂಧದ ಗುಡಿ’ (Gandhada Gudi) ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ, ಅಂದರೆ ಅ.27ರ ಸಂಜೆಯೇ ಹಲವು ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಶೋ ನಡೆದಿದೆ. ಬಹುನಿರೀಕ್ಷಿತ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ನೋಡಿ ಅಭಿಮಾನಿಗಳು ಎಮೋಷನಲ್ ಆಗುತ್ತಿದ್ದಾರೆ. ಇದು ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಕನಸಿನ ಪ್ರಾಜೆಕ್ಟ್. ಹಾಗಾಗಿ ಎಲ್ಲರಿಗೂ ಇದರ ಬಗ್ಗೆ ವಿಶೇಷ ಪ್ರೀತಿ ಇದೆ. ಪ್ರೀಮಿಯರ್ ಶೋ ಟಿಕೆಟ್ಗಳು ಎರಡು ದಿನ ಮುನ್ನವೇ ಸೋಲ್ಡ್ ಔಟ್ ಆಗಿದ್ದವು. ಫ್ಯಾನ್ಸ್ ಮುಗಿಬಿದ್ದು ಈ ಚಿತ್ರವನ್ನು ನೋಡಿದ್ದಾರೆ. ಬಳಿಕ ಟ್ವಿಟರ್ ಮೂಲಕ ವಿಮರ್ಶೆ (Gandhada Gudi Twitter Review) ಹಂಚಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಯಾವ ಹೀರೋ ಕೂಡ ಮಾಡಿರದ ಈ ಅಪರೂಪದ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಜಗತ್ತನ್ನು ಕಣ್ಣಿಗೆ ಕಟ್ಟುವಂತೆ ‘ಗಂಧದ ಗುಡಿ’ ತೆರೆದಿಟ್ಟಿದೆ. ಅತ್ಯುತ್ತಮವಾದ ಛಾಯಾಗ್ರಹಣದಿಂದ ಬೇರೊಂದು ಲೋಕವನ್ನೇ ನೋಡಿದಂತಹ ಅನುಭವ ಎಲ್ಲರಿಗೂ ಆಗುತ್ತಿದೆ. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ದೊಡ್ಡ ಪರದೆಯಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ಪುನೀತ್ ಅವರನ್ನು ನೋಡಿ ಫ್ಯಾನ್ಸ್ ಕಣ್ಣುಗಳು ತೇವ ಆಗುತ್ತಿವೆ.
Mixed emotions after watching #GandhadaGudi. Very hard to digest this is last movie of Shri Puneeth Rajkumar and he is no more. Was almost in tears during end cards.
— Sathya Sai Krishna B (@iamsathya) October 27, 2022
‘ಪುನೀತ್ ಅವರಿಗೆ ಇದು ಅತ್ಯುತ್ತಮವಾದ ವಿದಾಯ. ಸುಂದರವಾದ ದೃಶ್ಯಗಳು ಮತ್ತು ಹಿನ್ನೆಲೆ ಸಂಗೀತದಿಂದ ಗಂಧದ ಗುಡಿ ಇನ್ನಷ್ಟು ಸ್ಪೆಷಲ್ ಆಗಿದೆ. ಅಪ್ಪು ಅವರೇ ಬಂದು ಕೊನೆಯದಾಗಿ ಅಪ್ಪಿಕೊಂಡಂತೆ ಫೀಲ್ ಆಗಿದೆ’ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ತಾಂತ್ರಿಕವಾಗಿ ತುಂಬ ಶ್ರೀಮಂತವಾಗಿರುವ ಈ ಸಾಕ್ಷ್ಯಚಿತ್ರಕ್ಕೆ ಎಲ್ಲರೂ ಮನ ಸೋಲುತ್ತಿದ್ದಾರೆ.
The best adieu to one of the greatest human being who ever lived. Our Gandhada gudi is made more special by the beautiful visuals and background score. Felt like one last hug from our beloved Appu. #GandhadaGudi @PRK_Productions#Amoghavarsha @AJANEESHB@pratheek_dbf pic.twitter.com/HtIv312JmA
— Druvith gowda (@druvith_gowda) October 27, 2022
‘ಅಪ್ಪು ಅವರಿಗೆ ಹ್ಯಾಟ್ಸಾಫ್. ಇದು ಕರ್ನಾಟಕದ ಹೆಮ್ಮೆ. ಪುನೀತ್ ರಾಜ್ಕುಮಾರ್ ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ‘ಗಂಧದ ಗುಡಿ ಒಂದು ಎಪಿಕ್. ದೇಶಾದ್ಯಂತ ಇರುವ ಎಲ್ಲ ಸಿನಿಮಾ ನಟರ ಅಭಿಮಾನಿಗಳು ಒಮ್ಮೆಯಾದರೂ ಇದನ್ನು ನೋಡಬೇಕು. ಕರ್ನಾಟಕದ ಅದ್ಭುತ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಮಿಸ್ ಮಾಡಿಕೊಳ್ಳಬೇಡಿ’ ಎಂದು ಕೂಡ ಪೋಸ್ಟ್ ಮಾಡಿದ್ದಾರೆ.
Hats Off Appu ❤ Thank You Appu ❤ Pride Of Karnataka ❤ Miss You ?#GandhadaGudi ❤ pic.twitter.com/bSVIEt4jWT
— ShivaSainya (@ShivaSainya) October 27, 2022
‘ಗಂಧದ ಗುಡಿ’ ಡಾಕ್ಯುಮೆಂಟರಿಗೆ ಅಮೋಘವರ್ಷ ಅವರು ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ಸ್ ಮೂಲಕ ಇದು ನಿರ್ಮಾಣ ಆಗಿದೆ. ದಾಖಲೆ ಪ್ರಮಾಣದಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:42 pm, Thu, 27 October 22