ವೆಬ್ ಸರಣಿಯಾಗಿದೆ ಕರ್ನಾಟಕ ಮೂಲದವ ಮಾಡಿದ ಭಾರತದ ಅತಿ ದೊಡ್ಡ ಹಗರಣ: ಟ್ರೈಲರ್ ಬಿಡುಗಡೆ

Web Series: ಭಾರತದ ಅತಿ ದೊಡ್ಡ ಹಗರಣವಾದ ಛಾಪಾ ಕಾಗದ ಹಗರಣ ಪ್ರಕರಣ ಇದೀಗ ವೆಬ್ ಸರಣಿ ಆಗುತ್ತಿದೆ. ಸೆಪ್ಟೆಂಬರ್ 02ಕ್ಕೆ ಬಿಡುಗಡೆ ಆಗುತ್ತಿದೆ. ಟ್ರೈಲರ್ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ.

Important Highlight‌
ವೆಬ್ ಸರಣಿಯಾಗಿದೆ ಕರ್ನಾಟಕ ಮೂಲದವ ಮಾಡಿದ ಭಾರತದ ಅತಿ ದೊಡ್ಡ ಹಗರಣ: ಟ್ರೈಲರ್ ಬಿಡುಗಡೆ
ಕರೀಮ್ ತೆಲಗಿ
Follow us
ಮಂಜುನಾಥ ಸಿ.
|

Updated on:Aug 05, 2023 | 3:13 PM

ಹರ್ಷದ್ ಮೆಹ್ತಾ (Harshad Mehta), ವಿಜಯ್ ಮಲ್ಯ, ನೀರವ್ ಮೋದಿ ಇವರೆಲ್ಲರ ಹಗರಣಗಳನ್ನು ಮೀರಿದ ಭಾರತದ ಅತಿದೊಡ್ಡ ಹಗರಣಗಳಲ್ಲಿ ಒಂದಾದ ಛಾಪಾ ಕಾಗದ ಹಗರಣ ಇದೀಗ ವೆಬ್ ಸರಣಿ ಆಗಿದೆ. ಈ ಹಿಂದೆ ಹರ್ಷದ್ ಮೆಹ್ತಾ ಹಗರಣವನ್ನು ‘ಸ್ಕ್ಯಾಮ್ 1992’ (Scam 1992) ಹೆಸರಿನಲ್ಲಿ ವೆಬ್ ಸರಣಿ (Web Series) ಮಾಡಿದ್ದ ತಂಡವೇ ಈಗ ಛಾಪಾ ಕಾಗದ ಹಗರಣದ ರೂವಾರಿ ಅದ್ಬುಲ್ ಕರೀಂ ತೆಲಗಿಯ ಕತೆಯನ್ನು ‘ಸ್ಕ್ಯಾಮ್ 2003’ (Scam 2003) ಹೆಸರಿನಲ್ಲಿ ವೆಬ್ ಸರಣಿ ಮಾಡಲು ಮುಂದಾಗಿದ್ದು, ಟ್ರೈಲರ್ ಇಂದು ಬಿಡುಗಡೆ ಆಗಿದೆ.

ರೈಲ್ವೆ ಇಲಾಖೆಯ ನಾಲ್ಕನೇ ದರ್ಜೆಯ ನೌಕರನ ಮಗನಾಗಿದ್ದ, ಬೆಳಗಾವಿ ಮೂಲದ ತೆಲಗಿ, ದೇಶದ ಆರ್ಥಿಕತೆ, ರೆವಿನ್ಯೂ ವ್ಯವಸ್ಥೆಯನ್ನೇ ಅಲುಗಾಡಿಸಿದ 32 ಸಾವಿರ ಕೋಟಿ ಮೊತ್ತದ ಹಗಣರ ಮಾಡಿದ. 18 ರಾಜ್ಯಗಳಲ್ಲಿ ತಮ್ಮ ಜಾಲ ವಿಸ್ತರಿಸಿ ಪ್ರತಿದಿನ ಕೋಟಿಗಟ್ಟಲೆ ಹಣವನ್ನು ಅಕ್ರಮವಾಗಿ ಗಳಿಸುತ್ತಿದ್ದ ತೆಲಗಿ. 2003 ರಲ್ಲಿ ತೆಲಗಿಯ ಹಗರಣದ ಒಟ್ಟು ಮೊತ್ತ 32 ಸಾವಿರ ಕೋಟಿಗಳಾಗಿತ್ತು, ಹಣದುಬ್ಬರಕ್ಕೆ ಹೊಂದಿಸಿದರೆ ಈಗ ಆ ಮೊತ್ತ ಮೂರು ಲಕ್ಷ ಕೋಟಿಗಳನ್ನು ದಾಟುವ ಸಂಭವ ಇದೆ!

ಇಂದು ಬಿಡುಗಡೆ ಆಗಿರುವ ಟ್ರೈಲರ್ ವಿಷಯಕ್ಕೆ ಮರಳುವುದಾದರೆ ‘ಸ್ಕ್ಯಾಮ್ 2003’ನಲ್ಲಿ ತೆಲಗಿ ಪಾತ್ರ ಮಾಡಿರುವ ವ್ಯಕ್ತಿಯ ಮುಖವನ್ನು ತೋರಿಸಲಾಗಿಲ್ಲ ಬದಲಿಗೆ ಕೆಲವು ಡೈಲಾಗ್​ ಹಾಗೂ ಪ್ರಮುಖ ಸನ್ನಿವೇಶಗಳನ್ನಷ್ಟೆ ತೋರಿಸಲಾಗಿದೆ. ”ಹಣ ಸಂಪಾದನೆ ಮಾಡಲಾಗುವುದಿಲ್ಲ, ಹಣ ‘ಮಾಡಬೇಕಾಗುತ್ತದೆ” ಎಂಬಿತ್ಯಾದಿ ಸಂಭಾಷಣೆಗಳು ಕಿಕ್ ಕೊಡುವಂತಿವೆ. ವೆಬ್ ಸರಣಿಯಲ್ಲಿ ತೆಲಗಿಯ ಬಾಲ್ಯ, ಯೌವ್ವನದ ಕತೆಗಳೂ ಇರುವ ಸುಳಿವನ್ನು ಟ್ರೈಲರ್ ನೀಡಿದೆ. ವಿಶೇಷವೆಂದರೆ ‘ಸ್ಕ್ಯಾಮ್ 1992’ ನಲ್ಲಿ ಬಳಸಲಾಗಿದ್ದ ಜನಪ್ರಿಯ ಹಿನ್ನೆಲೆ ಸಂಗೀತದ ಬಿಟ್ ಅನ್ನೇ ‘ಸ್ಕ್ಯಾಮ್ 2003’ಗೂ ಬಳಸಲಾಗಿದೆ.

ಇದನ್ನೂ ಓದಿ:ತೆರೆಯ ಮೇಲೆ ಬರಲಿದೆ ಅಬ್ದುಲ್ ಕರೀಂ ತೆಲಗಿ ಹಗರಣ; ಸ್ಕ್ಯಾಮ್ 1992 ನಿರ್ದೇಶಕರಿಂದಲೇ ಸ್ಕ್ಯಾಮ್ 2003

ವೆಬ್ ಸರಣಿಯನ್ನು ಹನ್ಸಲ್ ಮೆಹ್ತಾ ನಿರ್ದೇಶನ ಮಾಡಿದ್ದಾರೆ, ‘ಸ್ಕ್ಯಾಮ್ 1992’ ಅನ್ನೂ ಇವರೇ ನಿರ್ದೇಶನ ಮಾಡಿದ್ದರು. ತೆಲಗಿ ಪಾತ್ರದಲ್ಲಿ ಮುಖೇಶ್ ತಿವಾರಿ ನಟಿಸಿದ್ದಾರೆ. ತೆಲಗಿ ವೆಬ್ ಸರಣಿ ಕರ್ನಾಟಕದ ಒಟಿಟಿ ಪ್ರೇಕ್ಷಕರನ್ನು ಬಹುವಾಗಿ ಸೆಳೆಯುವ ಸಾಧ್ಯತೆ ಇದೆ. ತೆಲಗಿ ಕರ್ನಾಟಕ ಮೂಲದವಾಗಿರುವುದು ಮಾತ್ರವೇ ಅಲ್ಲದೆ, ತೆಲಗಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದೆಲ್ಲ ಬೆಂಗಳೂರಿನ ಪೊಲೀಸರೆ. ತೆಲಗಿ ಬಂಧನವಾದ ಬಳಿಕವೂ ಜೈಲಿನಲ್ಲಿ ಐಶಾರಾಮಿ ಜೀವನ ನಡೆಸುತ್ತಾ ದಂದೆ ಮುಂದುವರೆಸಿದ್ದ ತೆಲಗಿಯಿಂದ ಹಲವು ಪೊಲೀಸ್ ಅಧಿಕಾರಿಗಳು ನೌಕರಿಯನ್ನು ಸಹ ಕಳೆದುಕೊಂಡಿದ್ದರು.

ತೆಲಗಿ ಪ್ರಕರಣದಲ್ಲಿ ಹಲವು ರಾಜ್ಯಗಳ ಮಂತ್ರಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು, ಪತ್ರಕರ್ತರು ಸಹ ಭಾಗಿಯಾಗಿದ್ದರು ಅವರ ಚಿತ್ರಣಗಳೂ ವೆಬ್ ಸರಣಿಯಲ್ಲಿ ಇರಲಿವೆಯೇ ಎಂಬುದರ ಬಗ್ಗೆ ಕುತೂಹಲ ಇದೆ. ತೆಲಗಿ ಬಂಧನಕ್ಕೆ ಕಾರಣವಾದ ವ್ಯಕ್ತಿಯೂ ಕರ್ನಾಟಕದವರೇ ಆಗಿದ್ದು ಅವರ ಪಾತ್ರವನ್ನು ಹೇಗೆ ಚಿತ್ರಿಸಲಾಗಿದೆ ಎಂಬ ಕುತೂಹಲವೂ ಇದೆ. ವೆಬ್ ಸರಣಿ ಸೋನಿ ಲಿವ್​ನಲ್ಲಿ ಸೆಪ್ಟೆಂಬರ್ 2ಕ್ಕೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Sat, 5 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು