ನಕಲಿ ಮತಗಳಿಂದ ಗೆದ್ದನೇ ಬಿಗ್​ಬಾಸ್ ಸ್ಪರ್ಧಿ: ವೈರಲ್ ಆಗುತ್ತಿದೆ ವಿಡಿಯೋ

Bigg Boss OTT 2: ಬಿಗ್​ಬಾಸ್ ಒಟಿಟಿ 2 ಮುಗಿದಿದ್ದು ಯೂಟ್ಯೂಬರ್ ಎಲ್ವಿಶ್ ಯಾದವ್ ವಿಜೇತರಾಗಿದ್ದಾರೆ. ಆದರೆ ಗೆದ್ದ ಬಳಿಕ ವೈರಲ್ ಆಗಿರುವ ಅವರದ್ದೇ ಒಂದು ವಿಡಿಯೋದಿಂದ ಅವರ ಗೆಲುವಿನ ಮೇಲೆ ಅನುಮಾನ ಶುರುವಾಗಿದೆ.

Important Highlight‌
ನಕಲಿ ಮತಗಳಿಂದ ಗೆದ್ದನೇ ಬಿಗ್​ಬಾಸ್ ಸ್ಪರ್ಧಿ: ವೈರಲ್ ಆಗುತ್ತಿದೆ ವಿಡಿಯೋ
ಎಲ್ವಿಶ್ ಯಾದವ್
Follow us
ಮಂಜುನಾಥ ಸಿ.
|

Updated on:Aug 15, 2023 | 7:57 PM

ಹಿಂದಿ ಬಿಗ್​ಬಾಸ್ ಒಟಿಟಿ 2 (Bigg Boss OTT 2) ಮುಗಿದಿದೆ, 59 ದಿನಗಳ ಕಾಲ ನಡೆದ ಈ ಶೋನಲ್ಲಿ 15 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ಆಗಸ್ಟ್ 14ರಂದು ರಾತ್ರಿ ನಡೆದ ಫಿನಾಲೆಯಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ವಿಜಯಯಿಯಾಗಿದ್ದಾರೆ. ಜಿಯೋ ಸಿನಿಮಾದಲ್ಲಿ ಒಟಿಟಿಯಲ್ಲಿ ಪ್ರಸಾರವಾದ ಈ ಶೋನ ವಿನ್ನರ್ ಅನ್ನು ಜನರ ಮತಗಳ ಆಧಾರದ ಮೇಲೆ ನಿರ್ಣಯಿಸಲಾಯ್ತು. ಆದರೆ ಶೋನ ವಿಜೇತ ಎಲ್ವಿಶ್ ಯಾದವ್ (Elvish Yadav) ನಕಲಿ ಮತಗಳಿಂದ ಗೆದ್ದರೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ. ಅನುಮಾನ ವ್ಯಕ್ತವಾಗಲು ಅವರದ್ದೇ ವಿಡಿಯೋ ಕಾರಣ.

ಎಲ್ವಿಶ್ ಗೆಲ್ಲಲು ಕೊನೆಯ 15ನಿಮಿಷಗಳಲ್ಲಿ ಅವರಿಗೆ ಬಂದ ಮತಗಳು ಕಾರಣ ಎನ್ನಲಾಗುಗುತ್ತಿದೆ. ಬಿಗ್​ಬಾಸ್ ಒಟಿಟಿ 2ರ ವೋಟಿಂಗ್ ಲೈನ್ ಅಂತ್ಯವಾಗುವ 15 ನಿಮಿಷಕ್ಕೆ ಮೊದಲು ಸುಮಾರು 28 ಕೋಟಿ ಮತಗಳು ಎಲ್ವಿಶ್ ಗೆ ಬಂದಿದ್ದವಂತೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮತಗಳು ಬಂದಿದ್ದರಿಂದಲೇ ಎಲ್ವಿಷ್ ಗೆದ್ದಿದ್ದಾರೆ ಎನ್ನಲಾಗುತ್ತಿದೆ. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಮತಗಳು ಬಂದಿರುವುದು ಪೂರ್ವ ಯೋಜಿತ ಎಂಬ ಮಾತುಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ.

ಎಲ್ವಿಶ್​ ಅಥವಾ ಅವರಿಗೆ ಸಂಬಂಧಿಸಿದ ಯಾರೋ ಹಣ ಕೊಟ್ಟು ಮತಗಳನ್ನು ಚಲಾಯಿಸಿಕೊಂಡಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಲೈಕ್​ಗಳು, ನಕಲಿ ಸಬ್​ಸ್ಕ್ರೈಬರ್​ಗಳನ್ನು ಪಡೆದುಕೊಂಡಂತೆ ಎಲ್ವಿಶ್ ಸಹ ಹಣ ಕೊಟ್ಟು ನಕಲಿ ಮತಗಳನ್ನು ಪಡೆದು ಗೆದ್ದಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಇದನ್ನೂ ಓದಿ:  ಬಿಗ್​ಬಾಸ್ ಮನೆಯಲ್ಲಿ ಮೊಬೈಲ್ ಬಳಸಿದರೇ ನಟಿ ಪೂಜಾ ಭಟ್?

ಬಿಗ್​ಬಾಸ್ ಒಟಿಟಿ 2 ಗೆದ್ದ ಎಲ್ವಿಶ್ ತಮ್ಮ ಆಪ್ತ ಗೆಳೆಯರು, ಕುಟುಂಬದವರೊಡನೆ ಸಂಭ್ರಮ ಆಚರಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಸ್ವತಃ ಎಲ್ವಿಶ್, ತಮಗೆ ಕಡೆಯ 15 ನಿಮಿಷದಲ್ಲಿ 28 ಕೋಟಿ ಮತಗಳು ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಶೋ ಗೆದ್ದ ಬಳಿಕ ನಾನು ಟೆಕ್ನಿಷಿಯನ್​ಗಳ ರೂಂಗೆ ಹೋಗಿದ್ದೆ, ಆಗ ಅವರು ಹೇಳಿದರು ಕೊನೆಯ 15 ನಿಮಿಷದಲ್ಲಿ ನಿಮಗೆ 28 ಕೋಟಿ ಮತಗಳು ಬಂದವೆಂದು, ಮತಹಾಕಿದವರಿಗೆಲ್ಲ ನಾನು ಋಣಿ ಎಂದಿದ್ದಾರೆ.

ಬಿಗ್​ಬಾಸ್ ಒಟಿಟಿ ಸೀಸನ್ 2 ಗೆದ್ದ ಎಲ್ವಿಶ್​ಗೆ 25 ಲಕ್ಷ ಹಣ ಹಾಗೂ ಟ್ರೋಫಿ ಬಹುಮಾನವಾಗಿ ಸಿಕ್ಕಿದೆ. ಜೊತೆಗೆ ಬಿಗ್​ಬಾಸ್ ಟಿವಿ ಸೀಸನ್​ನಲ್ಲಿ ಭಾಗವಹಿಸುವ ಅವಕಾಶವೂ ಲಭ್ಯವಾಗಲಿದೆ. ಬಿಗ್​ಬಾಸ್ ಫಿನಾಲೆಗೆ ಎಲ್ವಿಶ್, ಅಭಿಷೇಕ್, ಮನಿಷಾ, ಬೇಬಿಕಾ, ಪೂಜಾ ಅವರುಗಳು ಬಂದಿದ್ದರು. ಆದರೆ ಅಭಿಷೇಕ್​ಗೆ ಕೊನೆಯ ದಿನ ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾದ್ದರಿಂದ ಅವರು ಶೋನಿಂದ ಹೊರಗೆ ಹೋದರು. ಅವರು ಮೊದಲ ರನ್ನರ್​ ಅಪ್ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Tue, 15 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು