Vikrant Rona: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಮೊದಲಾರ್ಧದ ವಿಮರ್ಶೆ ಇಲ್ಲಿದೆ
Vikrant Rona First Half Review: ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಮೊದಲಾರ್ಧ ವಿಮರ್ಶೆ ಇಲ್ಲಿದೆ.
Important Highlight
ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಇಂದು (ಜುಲೈ 28) ರಿಲೀಸ್ ಆಗಿದೆ. ಕನ್ನಡದಲ್ಲಿ 3ಡಿ ಸಿನಿಮಾ ಬಂದಿದ್ದು ಅತೀ ಕಡಿಮೆ. ಈ ಸಾಲಿಗೆ ‘ವಿಕ್ರಾಂತ್ ರೋಣ’ (Vikrant Rona Movie) ಚಿತ್ರ ಕೂಡ ಸೇರ್ಪಡೆ ಆಗಿದೆ. ಹಾಡು ಹಾಗೂ ಟ್ರೇಲರ್ ಮೂಲಕ ಸುದೀಪ್ ಅಭಿನಯದ ಈ ಚಿತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದು ಕೂತಿದ್ದರು. ಕೊನೆಗೂ ಆ ದಿನ ಬಂದಿದೆ. ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ಮೊದಲಾರ್ಧ ವಿಮರ್ಶೆ(Vikrant Rona First Half Review) ಇಲ್ಲಿದೆ.
- ಅನೂಪ್ ಭಂಡಾರಿ ಅವರ ಈ ಹಿಂದಿನ ‘ರಂಗಿತರಂಗ’ ಶೈಲಿಯಲ್ಲಿಯೇ ‘ವಿಕ್ರಾಂತ್ ರೋಣ’ ಸಿನಿಮಾ ಮೂಡಿಬಂದಿದೆ. ಸಾಕಷ್ಟು ದೃಶ್ಯಗಳಲ್ಲಿ ಆ ವೈಭವ ಕಾಣಿಸುತ್ತದೆ.
- ಕಿಚ್ಚ ಸುದೀಪ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿ ಸೀನ್ ಅಭಿಮಾನಿಗಳಿಗೆ ಮೆಚ್ಚುಗೆ ಆಗುವಂತಿದೆ.
- ಚಿತ್ರದ ಮೊದಲಾರ್ಧದ ಕಥೆ ಸಸ್ಪೆನ್ಸ್ ಮತ್ತು ಕಾಮಿಡಿ ಜೊತೆಯಲ್ಲಿ ಸಾಗುತ್ತದೆ. ಪ್ರತಿ ದೃಶ್ಯವೂ ಅದ್ದೂರಿಯಾಗಿ ಮೂಡಿಬಂದಿದೆ.
- ಸಖತ್ ಹಿಟ್ ಆಗಿರುವ ‘ರಾ ರಾ ರಕ್ಕಮ್ಮ..’ ಸಾಂಗ್ ಮೊದಲಾರ್ಧದಲ್ಲಿ ಬರುವುದಿಲ್ಲ. ಆದರೆ ಜಾಕ್ವೆಲಿನ್ ಫರ್ನಾಂಡಿಸ್ ನಟನೆಯ ದೃಶ್ಯ ಫಸ್ಟ್ ಹಾಫ್ನಲ್ಲಿಯೇ ಬರುತ್ತದೆ. ‘ರಾ ರಾ ರಕ್ಕಮ್ಮ..’ ಹಾಡಿಗಾಗಿ ಪ್ರೇಕ್ಷಕರು ಸೆಕೆಂಡ್ ಹಾಫ್ಗೆ ಕಾಯಬೇಕು.
- ಬೃಹತ್ ಸೆಟ್ಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಆ ದೃಶ್ಯಗಳು 3ಡಿಯಲ್ಲಿ ತುಂಬ ಅದ್ಭುತವಾಗಿ ಕಾಣಿಸುತ್ತವೆ. ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ.
- ಕಿಚ್ಚ ಸುದೀಪ್ ಅವರು ಹಿಂದೆಂದಿಗಿಂತಲೂ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಮ್ಯಾನರಿಸಂ ಕೂಡ ಬೇರೆ ರೀತಿ ಇದೆ.
- ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಅವರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರಿಗೆ ಇಬ್ಬರ ಕಾಂಬಿನೇಷನ್ ಇಷ್ಟ ಆಗುತ್ತದೆ.
- ಸಿನಿಮಾದ ಬಹುತೇಕ ದೃಶ್ಯಗಳನ್ನು ಕತ್ತಲ ವಾತಾವರಣದಲ್ಲಿ ಸೆರೆ ಹಿಡಿಯಲಾಗಿದೆ. ಇದು ಪ್ರೇಕ್ಷಕರಿಗೆ ಡಿಫರೆಂಟ್ ಫೀಲ್ ನೀಡುತ್ತದೆ.
- ಫಸ್ಟ್ ಹಾಫ್ ಕೊನೆಯಲ್ಲಿ ಒಂದು ಸಸ್ಪೆನ್ಸ್ ನೀಡಲಾಗಿದೆ. ಅದನ್ನು ನೋಡಿದಾಗ ಪ್ರೇಕ್ಷಕರು ಥ್ರಿಲ್ ಆಗುವುದು ಗ್ಯಾರಂಟಿ.
ಇದನ್ನೂ ಓದಿ
ತಾಜಾ ಸುದ್ದಿ