Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು

| Updated By: Rajesh Duggumane

Updated on: Nov 25, 2022 | 11:48 AM

Sadhu Kokila | Golden Star Ganesh: ‘ತ್ರಿಬಲ್​ ರೈಡಿಂಗ್​’ ಚಿತ್ರದಲ್ಲಿ ಲವ್​ ಸ್ಟೋರಿ ಮತ್ತು ಕಾಮಿಡಿ ನಡುವೆ ರೇಸ್​ ಏರ್ಪಟ್ಟಂತಿದೆ. ಒಟ್ಟಾರೆ ಸಿನಿಮಾ ಹೇಗಿದೆ ಅಂತ ತಿಳಿಯಲು ಈ ವಿಮರ್ಶೆ ಓದಿ..

Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
'ತ್ರಿಬಲ್ ರೈಡಿಂಗ್' ಕನ್ನಡ ಸಿನಿಮಾ
Follow us on

ಸಿನಿಮಾ: ತ್ರಿಬಲ್​ ರೈಡಿಂಗ್​

ನಿರ್ಮಾಣ: ರಾಮ್​ಗೋಪಾಲ್​ ವೈ.ಎಂ.

ನಿರ್ದೇಶನ: ಮಹೇಶ್​ ಗೌಡ

ಇದನ್ನೂ ಓದಿ
Drishyam 2 Twitter Review: ‘ದೃಶ್ಯಂ 2’ ಟ್ವಿಟರ್​ ವಿಮರ್ಶೆ; ಅಜಯ್​ ದೇವಗನ್​ ಚಿತ್ರಕ್ಕೆ ಪ್ರೇಕ್ಷಕರ ರಿಯಾಕ್ಷನ್​ ಇಲ್ಲಿದೆ..
Mili Twitter Review: ಜಾನ್ವಿ ಕಪೂರ್​ ಅಭಿನಯಕ್ಕೆ ಕೇಳಿಬರ್ತಿದೆ ಮೆಚ್ಚುಗೆ; ‘ಮಿಲಿ’ ನೋಡಿ ವಿಮರ್ಶೆ ತಿಳಿಸಿದ ಸಿನಿಪ್ರಿಯರು
Gandhada Gudi Twitter Review: ಹೇಗಿದೆ ‘ಗಂಧದ ಗುಡಿ’?; ಪ್ರೀಮಿಯರ್​ ಶೋ ಬಳಿಕ ಟ್ವಿಟರ್​ ಮೂಲಕ ವಿಮರ್ಶೆ ತಿಳಿಸಿದ ಫ್ಯಾನ್ಸ್​
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ

ಪಾತ್ರವರ್ಗ: ಗಣೇಶ್​, ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್​, ಸಾಧುಕೋಕಿಲ, ರಂಗಾಯಣ ರಘು ಮುಂತಾದವರು.

ಸ್ಟಾರ್​: 3/5

‘ಗೋಲ್ಡನ್​ ಸ್ಟಾರ್​’ ಗಣೇಶ್​ ಅವರು ಲವ್​ ಸ್ಟೋರಿ ಸಿನಿಮಾಗಳಿಂದಲೇ ಫೇಮಸ್​. ಪ್ರೀತಿ ಪಡೆಯಲು ಒದ್ದಾಡುವ ಪ್ರೇಮಿಯಾಗಿ ಅವರು ಈಗಾಗಲೇ ಅನೇಕ ಚಿತ್ರಗಳಲ್ಲಿ ಜನರನ್ನು ರಂಜಿಸಿದ್ದಾರೆ. ‘ತ್ರಿಬಲ್​ ರೈಡಿಂಗ್​’ ಸಿನಿಮಾದಲ್ಲೂ ಅದು ಮುಂದುವರಿದಿದೆ. ಆದರೆ ಇಲ್ಲೊಂದು ಟ್ವಿಸ್ಟ್​ ಇದೆ. ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದು ಮೂರು ಪ್ರೇಮ್​ ಕಹಾನಿ ಇರುವ ಸಿನಿಮಾ. ಈ ಚಿತ್ರದಲ್ಲಿ ಮೂವರು ಸುಂದರಿಯರ ಪ್ರೀತಿಯಲ್ಲಿ ಸಿಕ್ಕಿಕೊಂಡು ಹೀರೋ ಸಂಕಷ್ಟ ಅನುಭವಿಸುತ್ತಾನೆ. ಆ ಸಂಕಷ್ಟಗಳು ನೋಡುಗರಿಗೆ ನಗು ತರಿಸುತ್ತವೆ. ಜೊತೆಗೆ ಸಾಕಷ್ಟು ಟ್ವಿಸ್ಟ್​ ಕೂಡ ಎದುರಾಗುತ್ತವೆ.

ಈ ಚಿತ್ರದ ಕಥೆಯ ಎಳೆ ಏನು ಎಂದು ಹೇಳಿಬಿಟ್ಟರೆ ಅಸಲಿ ಮಜಾ ಮಾಯವಾಗುತ್ತದೆ. ಅದನ್ನು ಚಿತ್ರಮಂದಿರದಲ್ಲಿ ನೋಡಿ ತಿಳಿಯುವುದೇ ಸೂಕ್ತ. ಇಡೀ ಸಿನಿಮಾವನ್ನು ಹಾಸ್ಯದ ಶೈಲಿಯಲ್ಲಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಹಾಗಾಗಿ ಲವ್​ ಸ್ಟೋರಿಯ ತೀವ್ರತೆ ಕಮ್ಮಿ ಆಗಿದೆ. ಲವ್​ ಸ್ಟೋರಿಗಿಂತಲೂ ಕಾಮಿಡಿಯನ್ನೇ ಹೆಚ್ಚಾಗಿ ಬಯಸುವ ಪ್ರೇಕ್ಷಕರಿಗೆ ಈ ಸಿನಿಮಾ ಹಿಡಿಸುತ್ತದೆ.

ಕಾಮಿಡಿ ವಿಚಾರದಲ್ಲಿ ಗಣೇಶ್​ ಕೂಡ ಪರಿಣಿತರು. ಸಾಧು ಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್​, ರಚನಾ ಇಂದರ್​, ರವಿಶಂಕರ್​ ಗೌಡ ಜೊತೆ ಸೇರಿ ಅವರು ಭರಪೂರ ನಗಿಸುತ್ತಾರೆ. ‘ತ್ರಿಬಲ್​ ರೈಡಿಂಗ್​’ ಚಿತ್ರದ ಲವ್​ ಸ್ಟೋರಿ ಮತ್ತು ಕಾಮಿಡಿ ನಡುವೆ ಒಂದು ರೇಸ್​ ಏರ್ಪಟ್ಟಂತಿದೆ. ಈ ಓಟದಲ್ಲಿ ಸಾಧುಕೋಕಿಲ ಮತ್ತು ರಂಗಾಯಣ ರಘು ಅವರು ಓವರ್​ ಟೇಕ್​ ಮಾಡುತ್ತಾರೆ. ಬೇರೆಲ್ಲ ಕಲಾವಿದರನ್ನೂ ಹಿಂದಿಕ್ಕಿ ಇವರಿಬ್ಬರು ನಗುಸುವ ರೇಸ್​ನಲ್ಲಿ ಮುಂದೆ ಸಾಗುತ್ತಾರೆ. ಆರಂಭದಿಂದ ಕ್ಲೈಮ್ಯಾಕ್ಸ್​ ತನಕ ಸಾಧುಕೋಕಿಲ ಹೆಚ್ಚು ಸ್ಕೋರ್​ ಮಾಡುತ್ತಾರೆ. ಅವರ ಅಭಿನಯದಿಂದ ಈ ಚಿತ್ರದ ಕಾಮಿಡಿ ತೂಕ ಹೆಚ್ಚಿದೆ.

ಹೀರೋ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಚ್ಯುತ್​ ಕುಮಾರ್​ ಅವರಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ. ರವಿಶಂಕರ್​, ಶೋಭರಾಜ್​, ಶರತ್​ ಲೋಹಿತಾಶ್ವ ಅವರು ಆಗಾಗ ಕಾಣಿಸಿಕೊಂಡು ಅಬ್ಬರಿಸಿದ್ದಾರೆ. ಆರಂಭದಿಂದಲೂ ಖಡಕ್​ ಆಗಿ ಕಾಣಿಸುವ ರವಿಶಂಕರ್​ ಅವರು ಕೊನೆಯಲ್ಲಿ ಕಾಮಿಡಿ ಕಿಕ್​ ನೀಡಿ ಚಪ್ಪಾಳೆ ಗಿಟ್ಟಿಸುತ್ತಾರೆ.

ಮೇಕಿಂಗ್​ ವಿಚಾರದ ಬಗ್ಗೆ ನಿರ್ದೇಶಕರು ಹೆಚ್ಚು ಗಮನ ಹರಿಸುವ ಅವಶ್ಯಕತೆ ಇತ್ತು ಎನಿಸುತ್ತದೆ. ಫೈಟಿಂಗ್​ ದೃಶ್ಯಗಳು ಅನವಶ್ಯಕ ತುರುಕಿದಂತಿವೆ. ಅದರಲ್ಲೂ ಹೊಸತನ ಕಾಣಿಸದು. ಗಣೇಶ್​ ಚಿತ್ರದಲ್ಲಿ ಅಭಿಮಾನಿಗಳು ಹಾಡುಗಳನ್ನು ವಿಶೇಷವಾಗಿ ನಿರೀಕ್ಷಿಸುತ್ತಾರೆ. ಆ ನಿರೀಕ್ಷೆಯ ಮಟ್ಟ ತಲುಪಲು ‘ತ್ರಿಬಲ್​ ರೈಡಿಂಗ್​’ ಹಾಡುಗಳಿಗೆ ಇನ್ನಷ್ಟು ತೂಕ ಇರಬೇಕಿತ್ತು. ಚಿತ್ರದ ಮೊದಲಾರ್ಧ ನೀರಸವಾಗಿ ಸಾಗುತ್ತದೆ. ಆ ಬಗ್ಗೆ ನಿರ್ದೇಶಕರು ಗಮನ ಹರಿಸಿದ್ದರೆ ಚಿತ್ರದ ಮೆರುಗು ಹೆಚ್ಚುತ್ತಿತ್ತು. ದ್ವಿತೀಯಾರ್ಧದಲ್ಲಿ ನಿರೂಪಣೆ ಕೊಂಚು ಚುರುಕು ಪಡೆದುಕೊಂಡಿದೆ.

ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್​ ಅವರು ರಮ್ಯಾ, ರಕ್ಷಿತಾ, ರಾಧಿಕಾ ಎಂಬ ಪಾತ್ರಗಳಲ್ಲಿ ಸ್ಕ್ರೀನ್​ ಸ್ಪೇಸ್​ ಸಮನಾಗಿ ಹಂಚಿಕೊಂಡಿದ್ದಾರೆ. ಈ ಮಧ್ಯದಲ್ಲಿ ರಶ್ಮಿಕಾ ಎಂಬ ಪಾತ್ರ ಕೂಡ ಎಂಟ್ರಿ ಆಗುತ್ತದೆ! ಅದು ಸಸ್ಪೆನ್ಸ್​ ಅಂಶ ಆದ್ದರಿಂದ ಚಿತ್ರಮಂದಿರದಲ್ಲಿ ನೋಡುವುದೇ ಸೂಕ್ತ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:05 am, Fri, 25 November 22