Bro twitter review: ಪವನ್ ಕಲ್ಯಾಣ್-ಸಾಯಿ ಧರಮ್ ಕಾಂಬಿನೇಷನ್​ನ ‘ಬ್ರೋ’ ಸಿನಿಮಾ ನೋಡಿದವರು ಹೇಳಿದ್ದು ಹೀಗೆ

|

Updated on: Jul 28, 2023 | 3:36 PM

Bro: ಪವನ್ ಕಲ್ಯಾಣ್-ಸಾಯಿ ಧರಮ್ ತೇಜ್ ನಟನೆಯ 'ಬ್ರೋ' ಸಿನಿಮಾ ಹೇಗಿದೆ. ಬ್ರೋ ಸಿನಿಮಾ ನೋಡಿದವರು ಹೇಳಿದ್ದೇಣು? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ.

Bro twitter review: ಪವನ್ ಕಲ್ಯಾಣ್-ಸಾಯಿ ಧರಮ್ ಕಾಂಬಿನೇಷನ್​ನ ಬ್ರೋ ಸಿನಿಮಾ ನೋಡಿದವರು ಹೇಳಿದ್ದು ಹೀಗೆ
ಬ್ರೋ ಸಿನಿಮಾ
Follow us on

ಪವನ್ ಕಲ್ಯಾಣ್ (Pawan Kalyan) ತಮ್ಮ ಸಹೋದರಿಯ ಪುತ್ರ ಸಾಯಿ ಧರಮ್ ತೇಜ್ (Sai Dharam Tej) ಜೊತೆಗೆ ನಟಿಸಿರುವ ‘ಬ್ರೋ’ ಸಿನಿಮಾ ಇಂದು (ಜುಲೈ 28) ಆಂಧ್ರ-ತೆಲಂಗಾಣ ಹಾಗೂ ಇತರ ಕೆಲವು ರಾಜ್ಯಗಳಲ್ಲಿ ಬಿಡುಗಡೆ ಆಗಿದೆ. ತಮಿಳು ಸಿನಿಮಾ ರೀಮೇಕ್ ಆಗಿದ್ದರೂ ಸಹ ಮೂಲ ಸಿನಿಮಾಕ್ಕಿಂತಲೂ ಸಾಕಷ್ಟು ಬದಲಾವಣೆಗಳನ್ನು ತಂದು ಸಿನಿಮಾವನ್ನು ತೆಲುಗು ಪ್ರೇಕ್ಷಕರಿಗೆ ಹಾಗೂ ಪವನ್ ಅಭಿಮಾನಿಗಳಿಗೆ ಒಪ್ಪಿಗೆ ಆಗುವಂತೆ ಮಾಸ್ ರೂಪದಲ್ಲಿ ಪ್ರೆಸೆಂಟ್ ಮಾಡಲಾಗಿದೆ. ಮೊದಲ ದಿನ ಪವನ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾವನ್ನು ನೋಡಿದ್ದು, ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಭಿಪ್ರಾಯಗಳು ಇಲ್ಲಿವೆ.

”ಪವನ್ ಕಲ್ಯಾಣ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅವರ ಎನರ್ಜಿ ಸೂಪರ್. ಪವನ್ ತೆರೆಯ ಮೇಲೆ ಕಾಣಿಸಿಕೊಂಡ ಮೊದಲ ಫ್ರೇಂನಿಂದಲೂ ಆ ಎನರ್ಜಿ ಹಾಗೆಯೇ ಇದೆ. ಸಾಯಿ ಧರಮ್ ತೇಜ್ ಸಾಧಾರಣವಾಗಿ ನಟಿಸಿದ್ದಾರೆ. ಎಸ್ ತಮನ್, ಪವನ್​ಗಾಗಿ ತಮ್ಮ ಪ್ರತಿಭೆಯನ್ನೆಲ್ಲ ಬಳಸಿ ಸಂಗೀತ ಮಾಡಿದ್ದಾರೆ. ಇದೆಲ್ಲವೂ ಸಿನಿಮಾದ ಪ್ಲಸ್ ಪಾಯಿಂಟ್. ಸಿನಿಮಾದ ಬರವಣಿಗೆ ಇನ್ನಷ್ಟು ಗಟ್ಟಿ ಆಗಿರಬಹುದಿತ್ತು. ಕುಟುಂಬದವರು ಒಟ್ಟಿಗೆ ನೋಡಬಹುದಾದ ಸಿನಿಮಾ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ವೆಂಕಟೇಶ್ ಕಿಲಾರು ಹೆಸರಿನ ಟ್ವಿಟ್ಟರ್ ಬಳಕೆದಾರರು, ‘ಬ್ರೋ’ ಸಿನಿಮಾವನ್ನು ವಿಪರೀತ ಟೀಕಿಸಿದ್ದಾರೆ. ಪವನ್ ಕಲ್ಯಾಣ್ ವೃತ್ತಿ ಬದುಕಿನಲ್ಲಿಯೇ ‘ಬ್ರೋ’ ಸಿನಿಮಾ ಅತ್ಯಂತ ಕಳಪೆ ಸಿನಿಮಾ. ಈ ಸಿನಿಮಾದಲ್ಲಿ ಧನಾತ್ಮಕವಾಗಿರುವುದು ಏನೂ ಇಲ್ಲ. ಸಿನಿಮಾದ ಸಂಗೀತ, ನಟನೆ, ಕತೆ, ಚಿತ್ರಕತೆ ಎಲ್ಲವೂ ನೆಗೆಟಿವ್​ಗಳೇ ಎಂದಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಅವರನ್ನು ಆಂಧ್ರ ಪ್ರದೇಶ ಸಿಎಂ ಎಂದ ಊರ್ವಶಿ ರೌಟೇಲಾ; ಸೋಶಿಯಲ್ ಮೀಡಿಯಾದಲ್ಲಿ ಟೀಕೆ

ಹೇಮಂತ್ ಕಿಯಾರಾ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿ, ‘ಪುಷ್ಪ’ ಅಲ್ಲು ಅರ್ಜುನ್​ರ ಒನ್​ ಮ್ಯಾನ್ ಶೋ, ಅಂತೆಯೇ ‘ಸರ್ಕಾರು ವಾರಿ ಪಾಠ’ ಸಿನಿಮಾ ಮಹೇಶ್ ಬಾಬು ಅವರ ಒನ್​ ಮ್ಯಾನ್ ಶೋ. ಅಂತೆಯೇ ‘ಬ್ರೋ’ ಸಿನಿಮಾ ಪವನ್ ಕಲ್ಯಾಣ್ ಅವರ ಒನ್​ಮ್ಯಾನ್ ಶೋ ಎಂದಿದ್ದಾರೆ. ಅಲ್ಲದೆ ಈ ಸಿನಿಮಾವನ್ನು ಉದಾಹರಣೆಯಾಗಿ ಇರಿಸಿಕೊಂಡು ಪ್ರಭಾಸ್ ಗೆ ಟಾಂಗ್ ಕೊಟ್ಟಿರುವ ಹೇಮಂತ್, ಪ್ರತಿ ಭಾರಿ ಬಜೆಟ್, ವಿಎಫ್​ಎಕ್ಸ್ ವಿಷಯದಲ್ಲಿ ಬಡಾಯಿ ಕೊಚ್ಚಿಕೊಳ್ಳುವುದು ಬಿಟ್ಟರೆ ಈ ರೀತಿ ಒನ್​ ಮ್ಯಾನ್ ಶೋ ಎಂದಾದರೂ ಕೊಟ್ಟಿದ್ದೀಯ ಎಂದು ಪ್ರಶ್ನಿಸಿದ್ದಾರೆ.

ಫಕ್ರುದ್ ಹೆಸರಿನ ವ್ಯಕ್ತಿಯೊಬ್ಬರು ‘ಬ್ರೋ’ ಸಿನಿಮಾದ ಬಗ್ಗೆ ಟ್ವಿಟ್ಟರ್​ನಲ್ಲಿ ವಿಮರ್ಶೆ ಬರೆದಿದ್ದು ”ಬ್ರೋ’ ಸಿನಿಮಾ ಹೃದಯ ತುಂಬಿ ಬರುವಂಥಹಾ ಕತೆಯುಳ್ಳ ಸಿನಿಮಾ. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್, ಜೀವನದ ಬಗ್ಗೆ ಪಾಠ ಮಾಡುತ್ತಾರೆ. ಸಿನಿಮಾದ ಅಂತ್ಯದಲ್ಲಿ ಪವನ್ ಭಾವುಕ ಲೋಕವನ್ನು ಸೃಷ್ಟಿಸುತ್ತಾರೆ, ಅದಕ್ಕೆ ತಮನ್​ರ ಸಂಗೀತ ಸಾಕಷ್ಟು ಸಹಾಯ ಮಾಡಿದೆ. ಪವನ್ ಕಲ್ಯಾಣ್ ಹಾಗೂ ಸಿನಿಮಾದ ಸಂಗೀತ ಹೊರತುಪಡಿಸಿದರೆ ಉಳಿದಿದ್ದೆಲ್ಲವೂ ಸಾಧಾರಣವಾಗಿದೆಯಷ್ಟೆ. ಕುಟುಂಬಗಳು ಈ ಸಿನಿಮಾವನ್ನು ನೋಡಲು ಸಾಲುಗಟ್ಟಿ ನಿಲ್ಲುತ್ತಾರೆ. ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಎಂದಿದ್ದಾರೆ.

‘ಬ್ರೋ’ ಸಿನಿಮಾವು ತಮಿಳು ಸಿನಿಮಾದ ರೀಮೇಕ್ ಆಗಿದ್ದು ಮೂಲ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸಮುದ್ರಕಿಣಿ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಬಹುಪಾಲು ಉತ್ತಮ ಪ್ರತಿಕ್ರಿಯೆಗಳೇ ವ್ಯಕ್ತವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ