Matthe Maduve Review: ಅವರು ಯಾಕೆ ‘ಮತ್ತೆ ಮದುವೆ’ ಆದರು? ಉತ್ತರ, ಸಮರ್ಥನೆ, ಸ್ಪಷ್ಟನೆ ಎಲ್ಲವೂ ಇದೆ ಇಲ್ಲಿ

Matthe Maduve Kannada Movie: ಈ ವಯಸ್ಸಿನಲ್ಲಿ ಆ ಜನಪ್ರಿಯ ನಟ-ನಟಿ ಯಾಕೆ ತಮ್ಮ ಸಂಸಾರದಿಂದ ಹೊರಬಂದು ಇನ್ನೊಂದು ಸಂಬಂಧವನ್ನು ಬೆಳೆಸಿದರು ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಅದಕ್ಕೆ ಉತ್ತರ ಎಂಬಂತೆ ‘ಮತ್ತೆ ಮದುವೆ’ ಸಿನಿಮಾ ಮೂಡಿಬಂದಿದೆ.

Important Highlight‌
Matthe Maduve Review: ಅವರು ಯಾಕೆ ‘ಮತ್ತೆ ಮದುವೆ’ ಆದರು? ಉತ್ತರ, ಸಮರ್ಥನೆ, ಸ್ಪಷ್ಟನೆ ಎಲ್ಲವೂ ಇದೆ ಇಲ್ಲಿ
ನರೇಶ್​, ಪವಿತ್ರಾ ಲೋಕೇಶ್
Follow us
ಮದನ್​ ಕುಮಾರ್​
|

Updated on: Jun 09, 2023 | 3:58 PM

ಸಿನಿಮಾ: ಮತ್ತೆ ಮದುವೆ

ನಿರ್ಮಾಣ: ವಿಜಯ ಕೃಷ್ಣ ಮೂವೀಸ್​

ನಿರ್ದೇಶನ: ಎಂ.ಎಸ್​. ರಾಜು

ಪಾತ್ರವರ್ಗ: ನರೇಶ್​, ಪವಿತ್ರಾ ಲೋಕೇಶ್​, ವನಿತಾ ವಿಜಯ್​ಕುಮಾರ್​, ಶರತ್​ ಬಾಬು, ಜಯಸುಧಾ, ಅನನ್ಯಾ ನಗಳ್ಳ, ಅನ್ನಪೂರ್ಣ ಮುಂತಾದವರು.

ಸ್ಟಾರ್​: 3/5

ಸೆಲೆಬ್ರಿಟಿಗಳು ಸಾರ್ವಜನಿಕ ವಲಯದಲ್ಲಿ ಇರುವುದರಿಂದ ಅವರ ವೈಯಕ್ತಿಕ ಜೀವನದ ವಿವರಗಳು ಹೆಚ್ಚಾಗಿ ಸುದ್ದಿ ಆಗುತ್ತವೆ. ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh)​ ಮತ್ತು ತೆಲುಗು ನಟ ನರೇಶ್​ (Naresh) ಅವರ ಖಾಸಗಿ ಬದುಕಿನ ಕುರಿತು ಕೆಲವೇ ತಿಂಗಳ ಹಿಂದೆ ಭಾರಿ ಚರ್ಚೆ ಆಗಿತ್ತು. ಆ ಸಂಗತಿಗಳನ್ನೇ ಇಟ್ಟುಕೊಂಡು ‘ಮತ್ತೆ ಮದುವೆ’ ಸಿನಿಮಾ ಮಾಡಲಾಗಿದೆ. ಆದರೆ ಎಲ್ಲಿಯೂ ಇದು ತಮ್ಮದೇ ಕಥೆ ಎಂದು ಈ ಕಲಾವಿದರು ಹೇಳಿಕೊಂಡಿಲ್ಲ. ಹಾಗಿದ್ದರೂ ಕೂಡ ಈ ಸಿನಿಮಾ ನೋಡಿದ ಎಲ್ಲರಿಗೂ ಇದು ಯಾರ ಕಥೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಒಬ್ಬ ಶ್ರೀಮಂತ ನಟ ಹಾಗೂ ಖ್ಯಾತ ನಟಿಯ ವೈಯಕ್ತಿಕ ಜೀವನದಲ್ಲಿ ಆಗಬಹುದಾದ ಏರುಪೇರುಗಳನ್ನೇ ‘ಮತ್ತೆ ಮದುವೆ’ (Matthe Maduve) ಸಿನಿಮಾದಲ್ಲಿ ತೋರಿಸಲಾಗಿದೆ.

ನರೇಶ್​ ಮತ್ತು ಪವಿತ್ರಾ ಲೋಕೇಶ್​ ಅವರು ಜೋಡಿಯಾಗಿ ನಟಿಸಿರುವುದರಿಂದ ಹಾಗೂ ಈ ಸಿನಿಮಾದಲ್ಲಿ ತೋರಿಸಿರುವ ಘಟನೆಗಳೆಲ್ಲವೂ ಅವರ ರಿಯಲ್​ ಲೈಫ್​ಗೆ ಹೋಲಿಕೆ ಆಗುತ್ತಿರುವುದರಿಂದ ಸಹಜವಾಗಿಯೇ ಪ್ರೇಕ್ಷಕರಿಗೆ ಇದು ಒಂದು ಕಾಲ್ಪನಿಕ ಕಥೆ ಎನಿಸುವುದಿಲ್ಲ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆದಿದ್ದು, ಮೈಸೂರಿನ ಹೋಟೆಲ್​ನಲ್ಲಿ ಹೈಡ್ರಾಮಾ ಆಗಿದ್ದು ಸೇರಿದಂತೆ ಅನೇಕ ಸಂಗತಿಗಳು ಜನರಿಗೆ ತಿಳಿದಿವೆ. ಆದರೆ ಆ ಘಟನೆಗಳ ಹಿಂದೆ ಏನು ನಡೆದಿತ್ತು ಎಂಬುದನ್ನು ‘ಮತ್ತೆ ಮದುವೆ’ ಸಿನಿಮಾದಲ್ಲಿ ವಿವರಿಸಲಾಗಿದೆ. ಈ ವಯಸ್ಸಿನಲ್ಲಿ ಆ ಜನಪ್ರಿಯ ನಟ-ನಟಿ ಯಾಕೆ ತಮ್ಮ ಸಂಸಾರದಿಂದ ಹೊರಬಂದು ಇನ್ನೊಂದು ಸಂಬಂಧವನ್ನು ಬೆಳೆಸಿದರು ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಅದಕ್ಕೆ ಉತ್ತರ ಎಂಬಂತೆ ‘ಮತ್ತೆ ಮದುವೆ’ ಸಿನಿಮಾ ಮೂಡಿಬಂದಿದೆ.

‘ಮತ್ತೆ ಮದುವೆ’ ಸಿನಿಮಾದ ಕಥೆ ಏನು?

ನರೇಂದ್ರ ಮತ್ತು ಪಾರ್ವತಿ ಎಂಬ ಎರಡು ಪಾತ್ರಗಳನ್ನು ಮುಖ್ಯವಾಗಿ ಇಟ್ಟುಕೊಂಡು ಕಥೆ ಹೇಳಲಾಗಿದೆ. ತೆಲುಗು ಚಿತ್ರರಂಗದ ಪ್ರತಿಷ್ಠಿತ ಮನೆತನಕ್ಕೆ ಸೇರಿದ ನಟ ನರೇಂದ್ರ. ಆತನ ದಾಂಪತ್ಯ ಜೀವನದ ದಿಕ್ಕು ತಪ್ಪಿರುತ್ತದೆ. ಮೂರನೇ ಹೆಂಡತಿಯಾಗಿ ಬರುವ ಸೌಮ್ಯ ಸೇತುಪತಿ ಕೂಡ ಹೆಚ್ಚು ದಿನ ಅನ್ಯೋನ್ಯವಾಗಿ ಇರುವುದಿಲ್ಲ. ಆಗ ಆತನಿಗೆ ಕನ್ನಡದ ನಟಿ ಪಾರ್ವತಿ ಮೇಲೆ ಲವ್​ ಆಗುತ್ತದೆ. ಆದರೆ ಪಾರ್ವತಿಗೆ ಈಗಾಗಲೇ ಗಂಡ ಹಾಗೂ ಮಕ್ಕಳು ಇರುತ್ತಾರೆ. ಹಾಗಿದ್ದರೂ ಕೂಡ ಆಕೆ ನರೇಶ್​ ಜೊತೆ ಬದುಕಲು ತೀರ್ಮಾನಿಸುತ್ತಾಳೆ. ಆಕೆ ಮನಸ್ಸು ಬದಲಾಯಿಸಲು ಕಾರಣ ಏನು? ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಇದನ್ನೂ ಓದಿ: Pinki Elli Review: ನಾಟಕೀಯ ತಂತ್ರಗಳಿಲ್ಲದೆ ಮಂತ್ರಮುಗ್ಧ ಆಗಿಸುವ ನೈಜ ಸಿನಿಮಾ

ಲವ್​, ಮದುವೆ ಎಂದರೆ ಕೇವಲ ಒಂದು ವಯಸ್ಸಿಗೆ ಸೀಮಿತವಾಗಿದ್ದಲ್ಲ. ಎಲ್ಲ ವಯೋಮಾನದಲ್ಲೂ ಕೂಡ ಸೂಕ್ತ ಸಂಗಾತಿಗಾಗಿ ಮನಸ್ಸು ಹಂಬಲಿಸುತ್ತದೆ ಎಂಬುದನ್ನು ‘ಮತ್ತೆ ಮದುವೆ’ ಸಿನಿಮಾದಲ್ಲಿ ವಿವರಿಸಲಾಗಿದೆ. ನರೇಶ್​ ಅವರು ಈ ರೀತಿಯ ಕಥೆಗೆ ಬಂಡವಾಳ ಹೂಡುವ ಮೂಲಕ ಒಂದು ಬೋಲ್ಡ್​ ಪ್ರಯತ್ನ ಮಾಡಿದ್ದಾರೆ. ಒಂದು ರೀತಿಯಲ್ಲಿ ಇದು ಅವರ ಎಲ್ಲ ನಿರ್ಧಾರಗಳಿಗೆ ಸಮರ್ಥನೆ ಅಥವಾ ಸ್ಪಷ್ಟನೆ ನೀಡುವಂತಹ ಸಿನಿಮಾ ಎನಿಸುತ್ತದೆ. ಹಾಗಿದ್ದರೂ ಕೂಡ ಇದು ಹಲವು ಸಂಸಾರಗಳಿಗೆ ಹೋಲಿಕೆ ಆಗಬಹುದಾದ ಕಥೆ ಕೂಡ ಹೌದು.

ಇದನ್ನೂ ಓದಿ: Daredevil Musthafa Review: ಭರಪೂರ ನಗಿಸುತ್ತಾ ಮತಗಳ ಜಗಳ ಬಿಡಿಸುವ ‘ಡೇರ್​ಡೆವಿಲ್​ ಮುಸ್ತಫಾ’

ಅನಗತ್ಯ ಬಿಲ್ಡಪ್​ಗಳಿಗೆ ಅವಕಾಶ ನೀಡದೇ ಸರಳವಾಗಿ ಎಲ್ಲವನ್ನೂ ವಿವರಿಸಲಾಗಿದೆ. ಅದರ ನಡುವೆಯೇ ಎಷ್ಟು ಸಾಧ್ಯವೋ ಅಷ್ಟು ರೋಚಕವಾಗಿ ಕಥೆಯನ್ನು ನಿರೂಪಿಸುವ ಪ್ರಯತ್ನ ಆಗಿದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಮೇಕಿಂಗ್​ ಗುಣಮಟ್ಟ ಕೂಡ ಉತ್ತಮವಾಗಿದೆ. ಇದು ಸಂಪೂರ್ಣ ಕಾಲ್ಪನಿಕ ಕಥೆ ಎಂದುಕೊಂಡರೆ ಪ್ರೇಕ್ಷಕರಿಗೆ ಇಲ್ಲಿ ಹೆಚ್ಚಿನ ವಿಶೇಷತೆ ಕಾಣಿಸದೇ ಇರಬಹುದು. ಪವಿತ್ರಾ ಲೇಕೇಶ್​ ಮತ್ತು ನರೇಶ್​ ಬದುಕಿಗೆ ಬಹುಪಾಲು ಸಾಮ್ಯತೆ ಇರುವ ಕಾರಣದಿಂದ ‘ಮತ್ತೆ ಮದುವೆ’ ಚಿತ್ರದಲ್ಲಿ ಕುತೂಹಲದ ಮಟ್ಟ ಹೆಚ್ಚಾಗಿದೆ.

ಇದನ್ನೂ ಓದಿ: The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

ನಟನೆ ವಿಚಾರದಲ್ಲಿ ಈ ಸಿನಿಮಾದಲ್ಲಿನ ಎಲ್ಲ ಕಲಾವಿದರು ಮೆಚ್ಚುಗೆಗೆ ಅರ್ಹರು. ಪವಿತ್ರಾ ಲೋಕೇಶ್​ ಮತ್ತು ನರೇಶ್​ ಅವರು ತಮ್ಮದೇ ರಿಯಲ್​ ಲೈಫ್​ ಪಾತ್ರಗಳನ್ನು ಮರು ಜೀವಿಸಿದಂತಿದೆ. ಕಥಾನಾಯಕಿಯ ಯೌವನದ ದಿನಗಳ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ಅನನ್ಯಾ ನಗಳ್ಳ ಅವರು ತಮ್ಮ ಅಭಿನಯದಿಂದ ಹಾಗೂ ಗ್ಲಾಮರ್​ನಿಂದಲೂ ಗಮನ ಸೆಳೆಯುತ್ತಾರೆ. ವನಿತಾ ವಿಜಯ್​ಕುಮಾರ್​ ನಟನೆಗೂ ಚಪ್ಪಾಳೆ ಸಲ್ಲಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು