ಕ್ರಿಸ್ಟೋಫರ್ ನೋಲನ್ (Christopher Nolan) ನಿರ್ದೇಶನದ ‘ಆಪನ್ ಹೈಮರ್’ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ಸುಳ್ಳಾಗಲಿಲ್ಲ. ಈ ಚಿತ್ರವನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಣು ಬಾಂಬ್ ಕಂಡುಹಿಡಿದ ವಿಜ್ಞಾನಿ ಜೆ. ರಾಬರ್ಟ್ ಆಪನ್ಹೈಮರ್ (J. Robert Oppenheimer) ಅವರ ಜೀವನ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಈ ಪಾತ್ರದಲ್ಲಿ ಕಿಲಿಯನ್ ಮರ್ಫಿ ನಟಿಸಿದ್ದಾರೆ. ಅವರ ನಟನೆಗೂ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾಗೆ ಸಿಕ್ಕ ವಿಮರ್ಶೆ ನೋಡಿದರೆ ಚಿತ್ರ ಧೂಳೆಬ್ಬಿಸೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಸಿನಿಮಾ ನೋಡಿದ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸುತ್ತಿದ್ದಾರೆ.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ನ ಎರಡು ನಗರಗಳ ಮೇಲೆ ಅಣುಬಾಂಬ್ ಹಾಕಲಾಯಿತು. ಈ ಅಣುಬಾಂಬ್ನ ಕಂಡು ಹಿಡಿದಿದ್ದು ಜೆ ರಾಬರ್ಟ್ ಆಪನ್ಹೈಮರ್. ಅವರ ಜೀವನಾಧಾರಿತ ಸಿನಿಮಾ ಮಾಡುತ್ತಾರೆ ಎಂದಾಗಲೇ ನಿರೀಕ್ಷೆ ಸೃಷ್ಟಿ ಆಗಿತ್ತು. ಜುಲೈ 21ರಂದು ಈ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಆಸ್ಕರ್ ಅವಾರ್ಡ್ನಲ್ಲಿ ಇದು ಹಲವು ಪ್ರಶಸ್ತಿ ಗೆಲ್ಲುವ ಭರವಸೆ ಸೃಷ್ಟಿಸಿದೆ.
‘ಕಿಲಿಯನ್ ಮರ್ಫಿ ಅವರ ನಟನೆ ಅದ್ಭುತ. ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಅವರಿಗೆ ಖಂಡಿತವಾಗಿಯೂ ಅವಾರ್ಡ್ ಸಿಗಲಿದೆ. ಇದು ಕ್ರಿಸ್ಟೋಫರ್ ನೋಲನ್ ಅವರ ಮಾಸ್ಟರ್ಪೀಸ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಸಿನಿಮಾ ಅರ್ಧ ಕಲರ್ ಹಾಗೂ ಇನ್ನರ್ಧ ಕಪ್ಪು-ಬಿಳುಪಿನ ಶೈಲಿಯಲ್ಲಿ ಮೂಡಿ ಬಂದಿದೆ.
#Oppenheimer I enjoyed the movie to a large extent. The way sound and editing were used in synchrony is just batshit crazy! Acting was just perfect in every sequence. Since the movie was extremely dialogue heavy and they don’t even take a millisecond of breath in between each.. pic.twitter.com/BkYUeX4i52
— Likith (@likitongue) July 21, 2023
#Oppenheimer is a breathtaking masterpiece by Christopher Nolan. It’s an unforgettable tour de force with outstanding performances from Cillian Murphy and Robert Downey Jr. The background score is a 10/10; visually stunning!
THAT scene..those blue eyes are Hypnotizing pic.twitter.com/aeX7k6DBY8
— Arnab ? (@NonGoswami) July 20, 2023
‘ಆಪನ್ಹೈಮರ್ ಸಿನಿಮಾ ಬಗ್ಗೆ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದನ್ನು ನೀವು ಥಿಯೇಟರ್ನಲ್ಲೇ ನೋಡಿ ಎಂಜಾಯ್ ಮಾಡಬೇಕು. 10ಕ್ಕೆ 10 ಅಂಕ ನೀಡುತ್ತೇವೆ’ ಎಂದು ಪ್ರೇಕ್ಷಕನೋರ್ವ ಬರೆದುಕೊಂಡಿದ್ದಾನೆ. ಇನ್ನು, ಸಿನಿಮಾ ವಿಮರ್ಶೆ ತಿಳಿಸುವ ಭರದಲ್ಲಿ ಕೆಲವರು ಸಿನಿಮಾದ ಪ್ರಮುಖ ದೃಶ್ಯಗಳನ್ನು ಶೂಟ್ ಮಾಡಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲೂ ಧೂಳೆಬ್ಬಿಸಿದ ಕ್ರಿಸ್ಟೋಫರ್ ನೋಲನ್; ‘ಆಪನ್ಹೈಮರ್’ ಟಿಕೆಟ್ ಸೋಲ್ಡ್ಔಟ್
ಜುಲೈ 11ರಂದು ಪ್ಯಾರಿಸ್ನಲ್ಲಿ, ಜುಲೈ 13ರಂದು ಲಂಡನ್ನಲ್ಲಿ, ಜುಲೈ 17ರಂದು ನ್ಯೂಯಾರ್ಕ್ನಲ್ಲಿ ಪ್ರೀಮಿಯರ್ ಆಗಿತ್ತು. ಇಂದು ಬಹುತೇಕ ರಾಷ್ಟ್ರಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.
Published On - 12:35 pm, Fri, 21 July 23