ನಟ ಟಾಮ್ ಕ್ರೂಸ್ (Tom Cruise) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳು ಭಾರತದಲ್ಲೂ ಭರ್ಜರಿ ಕಲೆಕ್ಷನ್ ಮಾಡಿದ ಉದಾಹರಣೆ ಇದೆ. ಇತ್ತೀಚೆಗೆ ಅವರು ನಟಿಸಿದ ‘ಮಿಷನ್ ಇಂಪಾಸಿಬಲ್ ಡೆಡ್ ರೆಕನಿಂಗ್ ಪಾರ್ಟ್ 1’ (ಮಿಷನ್ ಇಂಪಾಸಿಬಲ್ 7) ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ ಈಗ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ (Box Office Collection) ಕುಸಿಯುತ್ತಿದೆ. 8ನೇ ದಿನಕ್ಕೆ ಈ ಸಿನಿಮಾದ ಗಳಿಕೆ 4 ಕೋಟಿ ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಆ್ಯಕ್ಷನ್ ಪ್ರಿಯರಿಗೆ ‘ಮಿಷನ್ ಇಂಪಾಸಿಬಲ್ 7’ (Mission impossible 7) ಸಿನಿಮಾ ಇಷ್ಟ ಆಗಿದೆ.
ರಿಯಲ್ ಸ್ಟಂಟ್ಸ್ ಮಾಡುವ ಮೂಲಕ ನಟ ಟಾಮ್ ಕ್ರೂಸ್ ಅವರು ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡುತ್ತಾರೆ. ‘ಮಿಷನ್ ಇಂಪಾಸಿಬಲ್ 7’ ಸಿನಿಮಾದಲ್ಲೂ ಅದು ಮುಂದುವರಿದಿದೆ. ಉಸಿರು ಬಿಗಿ ಹಿಡಿದು ನೋಡುವಂತಹ ಆ್ಯಕ್ಷನ್ ದೃಶ್ಯಗಳು ಈ ಸಿನಿಮಾದಲ್ಲಿ ಇವೆ. ಹಾಗಿದ್ದರೂ ಕೂಡ ಭಾರತದಲ್ಲಿ ಒಂದು ವಾರದ ಬಳಿಕ ಈ ಚಿತ್ರಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ. ಮೂಲಗಳ ಪ್ರಕಾರ, ಭಾರತದ ಬಾಕ್ಸ್ ಆಫೀಸ್ನಲ್ಲಿ ಈವರೆಗೂ ಈ ಚಿತ್ರ 76.85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಮಿಷನ್ ಇಂಪಾಸಿಬಲ್ 7 ನೋಡಿದ ನೆಟ್ಟಿಗರು ಏನಂದರು?
ಕ್ರಿಸ್ಟೋಫರ್ ಮ್ಯಾಕ್ವರೀನ್ ಅವರು ‘ಮಿಷನ್ ಇಂಪಾಸಿಬಲ್ ಡೆಡ್ ರೆಕನಿಂಗ್ ಪಾರ್ಟ್ 1’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬರುವ ರೈಲಿನ ಆ್ಯಕ್ಷನ್ ದೃಶ್ಯದ ಕಾನ್ಸೆಪ್ಟ್ ಅನ್ನು ವಿಡಿಯೋ ಗೇಮ್ನಿಂದ ಕಾಪಿ ಮಾಡಲಾಗಿದೆ ಎಂಬ ಆರೋಪ ಕೂಡ ಇದೆ. ‘ಪಠಾಣ್’ ಸಿನಿಮಾದ ದೃಶ್ಯಕ್ಕೂ ಹೋಲಿಕೆ ಇದೆ. ಅದೇನೆ ಇರಲಿ, ಟಾಮ್ ಕ್ರೂಸ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆಯಲಿದೆ ಟಾಮ್ ಕ್ರೂಸ್ ಸಿನಿಮಾ: ಕಲೆಕ್ಷನ್ ನಿರೀಕ್ಷೆ ಎಷ್ಟು?
ಜುಲೈ 21ರಂದು ಕ್ರಿಸ್ಟೋಫರ್ ನೋಲನ್ ನಿರ್ದೇಶನ ಮಾಡಿರುವ ‘ಆಪನ್ಹೈಮರ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ. ಈಗಾಗಲೇ ಅನೇಕ ಶೋಗಳ ಬುಕಿಂಗ್ ಫುಲ್ ಆಗಿದೆ. ಹಾಗಾಗಿ ‘ಆಪನ್ಹೈಮರ್’ ಅಬ್ಬರದ ಎದುರು ‘ಮಿಷನ್ ಇಂಪಾಸಿಬಲ್ ಡೆಡ್ ರೆಕನಿಂಗ್ ಪಾರ್ಟ್ 1’ ಚಿತ್ರದ ಹವಾ ಕಡಿಮೆ ಆಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ, ರಯಾನ್ ಗಾಸ್ಲಿಂಗ್ ನಟನೆಯ ‘ಬಾರ್ಬಿ’ ಚಿತ್ರ ಕೂಡ ಜುಲೈ 21ರಂದು ಬಿಡುಗಡೆ ಆಗಲಿದ್ದು, ಪೈಪೋಟಿ ಹೆಚ್ಚಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.