ಕನ್ನಡದಲ್ಲಿ ನಟಿಸಿದ್ದ ಹೀರೊಯಿನ್​ ಮದುವೆಯಾಗಿದ್ದ ಧನುಷ್​ ಸಹೋದರ; ಅದೂ ಕೊನೆಯಾಗಿದ್ದು ವಿಚ್ಛೇದನದಲ್ಲಿ

ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರಿಗೆ ನಾಲ್ವರು ಮಕ್ಕಳು. ಆ ಪೈಕಿ ಧನುಷ್​ ಹಾಗೂ ಸೆಲ್ವರಾಘವನ್​ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸೆಲ್ವರಾಘವನ್​ ತಮಿಳಿನಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

Important Highlight‌
ಕನ್ನಡದಲ್ಲಿ ನಟಿಸಿದ್ದ ಹೀರೊಯಿನ್​ ಮದುವೆಯಾಗಿದ್ದ ಧನುಷ್​ ಸಹೋದರ; ಅದೂ ಕೊನೆಯಾಗಿದ್ದು ವಿಚ್ಛೇದನದಲ್ಲಿ
ಸೆಲ್ವರಾಘವನ್ ದಂಪತಿ, ಧನುಷ್​ ದಂಪತಿ
Follow us
TV9 Digital Desk
| Updated By: Rajesh Duggumane

Updated on: Jan 18, 2022 | 2:22 PM

ಧನುಷ್​ (Dhanush) ಹಾಗೂ ರಜನಿಕಾಂತ್ (Rajinikanth)​ ಮಗಳು ಐಶ್ವರ್ಯಾ (Aishwarya Rajinikanth) ಅವರ ದಾಂಪತ್ಯ ಜೀವನ ಕೊನೆಯಾಗಿದೆ. ಜನವರಿ 17ರಂದು ದಂಪತಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಮೂಲಕ 18 ವರ್ಷದ ದಾಂಪತ್ಯ ಜೀವನ ಕೊನೆಯಾಗಿದೆ. ಧನುಷ್​ ಕುಟುಂಬಕ್ಕೆ ವಿಚ್ಛೇದನ ಹೊಸದಲ್ಲ. ಅವರ ಸಹೋದರ, ನಿರ್ದೇಶಕ ಸೆಲ್ವರಾಘವನ್ ಕೂಡ ಮದುವೆಯಾದ ಕೆಲವೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡಿದ್ದರು. ಧನುಷ್​ ಮದುವೆ ಆಗಿ ಎರಡು ವರ್ಷದ ಬಳಿಕ ಮದುವೆ ಆಗಿದ್ದ ಸೆಲ್ವರಾಘವನ್ ದಶಕಗಳ ಹಿಂದೆಯೇ ವಿಚ್ಛೇದನ ಪಡೆದಿದ್ದರು. ಕೇವಲ ನಾಲ್ಕು ವರ್ಷಕ್ಕೆ ಇವರ ದಾಂಪತ್ಯ ಕೊನೆಯಾಗಿತ್ತು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರಿಗೆ ನಾಲ್ವರು ಮಕ್ಕಳು. ಆ ಪೈಕಿ ಧನುಷ್​ ಹಾಗೂ ಸೆಲ್ವರಾಘವನ್​ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸೆಲ್ವರಾಘವನ್​ ತಮಿಳಿನಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಧನುಷ್​ ಮದುವೆ ಆಗಿದ್ದು 2004ರಲ್ಲಿ. ರಜನಿಕಾಂತ್​ ಮಗಳು ಐಶ್ವರ್ಯಾ ಜತೆ ದಾಂಪತ್ಯ ಜೀವನಕ್ಕೆ ಧನುಷ್​ ಕಾಲಿಟ್ಟರು. 18 ವರ್ಷಗಳ ಸುದೀರ್ಘ ದಾಂಪತ್ಯ ಈಗ ಕೊನೆಯಾಗಿದೆ. ಇದೇ ರೀತಿ ಸೆಲ್ವರಾಘವನ್​ ದಾಂಪತ್ಯ ಕೂಡ ಮುರಿದುಬಿದ್ದಿತ್ತು.

ಸೆಲ್ವರಾಘವನ್​ 2006ರಲ್ಲಿ ವಿವಾಹವಾಗಿದ್ದರು. ‘ಚಂದು’ ಸೇರಿ ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಸೋನಿಯಾ ಅಗರ್​ವಾಲ್​ ಜತೆ ಸೆಲ್ವರಾಘವನ್​ ಮದುವೆ ಆಗಿದ್ದರು. ಇವರಿಬ್ಬರ ನಡುವೆ ಪ್ರೀತಿ ಹುಟ್ಟೋಕೆ ಕಾರಣವೂ ಇತ್ತು. ಸೆಲ್ವರಾಘವನ್‌ ನಿರ್ದೇಶನದ ‘ಕಾಧಲ್ ಕೊಂಡೆನ್‌’, ‘7ಜಿ ರೈನ್‌ಬೋ ಕಾಲೋನಿ’, ‘ಪುಧುಪೆಟ್ಟೈ’ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್‌ ನಾಯಕಿಯಾಗಿ ಕಾಣಿಸಿಕೊಂಡವರು ಸೋನಿಯಾ ಅಗರ್​​ವಾಲ್‌. ಅವರನ್ನೇ ಪ್ರೀತಿಸಿ ಸೆಲ್ವರಾಘವನ್‌ 2006ರಲ್ಲಿ ಮದುವೆಯಾದರು.

ಮದುವೆಯಾಗಿ ನಾಲ್ಕೇ ವರ್ಷಗಳಲ್ಲಿ ಅಂದರೆ 2010ರಲ್ಲಿ ಸೋನಿಯಾ ಮತ್ತು ಸೆಲ್ವರಾಘವನ್ ವಿಚ್ಛೇದನ ಪಡೆದರು. ಇಬ್ಬರೂ ಪರಸ್ಪರ ಒಪ್ಪಿಗೆ ಪಡೆದು ದೂರವಾದರು. ಹೊಂದಾಣಿಕೆ ಕೊರತೆಯಿಂದ ವಿಚ್ಛೇದನ ಪಡೆದುಕೊಂಡಿದ್ದಾಗಿ ಸೋನಿಯಾ ಅವರು ಹೇಳಿಕೊಂಡಿದ್ದರು. ಈಗ ಧನುಷ್​ ದಾಂಪತ್ಯ ಕೂಡ ವಿಚ್ಛೇನದಲ್ಲಿ ಕೊನೆಯಾಗಿದೆ.

ಇದನ್ನೂ ಓದಿ: ಧನುಷ್​ ಮುಂದಿನ ಚಿತ್ರ ಘೋಷಣೆ; ಟಾಲಿವುಡ್​ಗೆ ಕಾಲಿಡೋಕೆ ಮುಂದಾದ ತಮಿಳಿನ ಸ್ಟಾರ್​ ನಟ

Dhanush: 18 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿದ ಧನುಷ್- ಐಶ್ವರ್ಯಾ; ಕಾರಣವೇನು?

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ
ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ