ಇಡೀ ದೇಶವೇ ಹೆಮ್ಮೆಯಿಂದ ಚಂದ್ರನತ್ತ ನೋಡುತ್ತಿದೆ. ಭಾರತದ ‘ಚಂದ್ರಯಾನ 3’ (Chandrayaan 3) ಯೋಜನೆ ಯಶಸ್ವಿ ಆಗಿದೆ. ಚಂದ್ರನ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್ ಕಾಲಿಟ್ಟಿದೆ. ಈ ಐತಿಹಾಸಿಕ ಕ್ಷಣಕ್ಕೆ ವಿಶ್ವದ ಜನರು ಸಾಕ್ಷಿ ಆಗಿದ್ದಾರೆ. ಎಲ್ಲ ಭಾರತೀಯರ ಪಾಲಿಗೆ ಇದು ಹೆಮ್ಮೆಯ ಕ್ಷಣ. ಇಸ್ರೋ ವಿಜ್ಞಾನಿಗಳ (ISRO Scientist) ಈ ಸಾಧನೆಯನ್ನು ಭಾರತೀಯರು ಸಂಭ್ರಮಿಸುತ್ತಿದ್ದಾರೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ವೇಳೆ ಯಶ್ (Yash), ಹೃತಿಕ್ ರೋಷನ್, ಅಕ್ಷಯ್ ಕುಮಾರ್ ಮುಂತಾದ ಸೆಲೆಬ್ರಿಟಿಗಳು ಕೂಡ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.
ದೇಶಪ್ರೇಮ ವ್ಯಕ್ತಪಡಿಸುವಲ್ಲಿ ಅಕ್ಷಯ್ ಕುಮಾರ್ ಅವರು ಯಾವಾಗಲೂ ಮುಂದಿರುತ್ತಾರೆ. ‘ಕೋಟ್ಯಂತರ ಹೃದಯಗಳು ಇಸ್ರೋಗೆ ಧನ್ಯವಾದ ತಿಳಿಸುತ್ತಿವೆ. ನಾವು ಹೆಮ್ಮೆ ಪಡುವಂತೆ ನೀವು ಮಾಡಿದ್ದೀರಿ. ಭಾರತ ಇತಿಹಾಸ ನಿರ್ಮಿಸಿದ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಕ್ಕೆ ನಾನು ಅದೃಷ್ಟವಂತ. ಭಾರತ ಈಗ ಚಂದ್ರನ ಅಂಗಳದಲ್ಲಿದೆ. ನಾವು ಚಂದ್ರನ ಮೇಲಿದ್ದೇವೆ’ ಎಂದು ಅಕ್ಷಯ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
A billion hearts saying THANK YOU @isro. You’ve made us so proud. Lucky to be watching India make history. India is on the moon, we are over the moon. #Chandrayaan3
— Akshay Kumar (@akshaykumar) August 23, 2023
ಅದೇ ರೀತಿ ಹೃತಿಕ್ ರೋಷನ್ ಕೂಡ ಹಿರಿಹಿರಿ ಹಿಗ್ಗಿದ್ದಾರೆ. ‘ಇಂದು ನನ್ನ ಹೃದಯ ಇನ್ನೂ ಹೆಚ್ಚಿನ ಹೆಮ್ಮೆಯ ಭಾವದಿಂದ ತುಂಬಿ ಬಂದಿದೆ. ಚಂದ್ರಯಾನ 3 ಯೋಜನೆಯ ಹಿಂದಿರುವ ಎಲ್ಲರಿಗೂ ನನ್ನ ಅಭಿನಂದನೆ ಮತ್ತು ಧನ್ಯವಾದಗಳು’ ಎಂದು ಹೃತಿಕ್ ರೋಷನ್ ಅವರು ಟ್ವೀಟ್ ಮಾಡಿದ್ದಾರೆ.
My heart swells with pride a little more today, as I witness my people soar high and give their very best.
Congratulations & all my respect to @isro & the geniuses behind #Chandrayaan3‘s lunar exploration mission. #IndiaOnTheMoon 🇮🇳 https://t.co/pTKgptUflu
— Hrithik Roshan (@iHrithik) August 23, 2023
ಇಸ್ರೋ ಸಾಧನೆಗೆ ನಟ ಯಶ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ‘ಪ್ರಯತ್ನಿಸುವವರಿಗೆ ಯಾವುದೂ ಅಸಾಧ್ಯವಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಇಸ್ರೋಗೆ ಅಭಿನಂದನೆಗಳು. ನೀವು ಇತಿಹಾಸ ನಿರ್ಮಿಸಿದ್ದೀರಿ. ಎಲ್ಲ ಭಾರತೀಯರಿಗೂ ಹೆಮ್ಮೆ ತಂದಿದ್ದೀರಿ. ಮುಂದಿನ ಪೀಳಿಗೆಗೆ ಸ್ಫೂರ್ತಿ ಆಗಿದ್ದೀರಿ’ ಎಂದು ರಾಕಿಂಗ್ ಸ್ಟಾರ್ ಟ್ವೀಟ್ ಮಾಡಿದ್ದಾರೆ.
There is nothing impossible for those who try! 🙌
Congratulations to @isro for the first-ever successful landing on the lunar south pole with Chandrayaan-3. You have made history and put India on the forefront of space exploration, making all Indians proud and inspired… pic.twitter.com/C3m3vWQ3zc— Yash (@TheNameIsYash) August 23, 2023
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:11 pm, Wed, 23 August 23