‘ಜವಾನ್’ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ನಿಂದ ಸಿಕ್ತು ಯುಎ ಪ್ರಮಾಣಪತ್ರ; ಸಿನಿಮಾ ಅವಧಿ ಎಷ್ಟು?
ಸಿನಿಮಾದಲ್ಲಿ ವಿವಾದಾತ್ಮಕ ವಿಚಾರ ಇದ್ದರೆ ಮುಂದೆ ದೊಡ್ಡ ಮಟ್ಟದಲ್ಲಿ ವಿವಾದ ಉಂಟಾಗಬಹುದು. ಸಿನಿಮಾ ಬ್ಯಾನ್ಗೆ ಒತ್ತಾಯ ಬರಬಹುದು. ಈ ಕಾರಣದಿಂದಲೇ ಸೆನ್ಸಾರ್ ಮಂಡಳಿಯವರು ಹೆಚ್ಚು ಎಚ್ಚರಿಕೆಯಿಂದ ಸಿನಿಮಾ ನೋಡುತ್ತಾರೆ. ‘ಜವಾನ್’ ಚಿತ್ರದ ಯಾವುದೇ ದೃಶ್ಯಕ್ಕೂ ಕತ್ತರಿ ಬಿದ್ದಿಲ್ಲ. ಹೀಗಾಗಿ, ಸಿನಿಮಾದಲ್ಲಿ ಯಾವುದೇ ವಿವಾದಾತ್ಮಕ ಅಂಶ ಇಲ್ಲ ಎಂಬುದು ಪಕ್ಕಾ ಆಗಿದೆ.
‘ಜವಾನ್’ ಸಿನಿಮಾ (Jawan Movie) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಸೆಪ್ಟೆಂಬರ್ 7ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದ ಪ್ರಿವ್ಯೂ ವಿಡಿಯೋ ನೋಡಿದ ಅನೇಕರಿಗೆ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದು ಸ್ಪಷ್ಟವಾಗಿದೆ. ಈ ಸಿನಿಮಾ ಭರ್ಜರಿ ಕಮಾಯಿ ಮಾಡುವ ಮುನ್ಸೂಚನೆ ಸಿಕ್ಕಿದೆ. ಈ ಬೆನ್ನಲ್ಲೇ ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ವಿಶೇಷ ಎಂದರೆ ಚಿತ್ರದ ಯಾವುದೇ ದೃಶ್ಯಕ್ಕೆ ಕತ್ತರಿ ಪ್ರಯೋಗ ಆಗಿಲ್ಲ. ಇದು ಶಾರುಖ್ (Shah Rukh Khan) ಅಭಿಮಾನಿಗಳಿಗೆ ಖುಷಿ ನೀಡಿದೆ. ಚಿತ್ರದ ಟ್ರೇಲರ್ಗಾಗಿ ಫ್ಯಾನ್ಸ್ ಕಾದಿದ್ದಾರೆ.
‘ಜವಾನ್’ ಸಿನಿಮಾಗೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಎಲ್ಲರೂ ಸಿನಿಮಾ ವೀಕ್ಷಿಸಬಹುದು. ಆದರೆ, 18 ವರ್ಷ ಒಳಗಿನವರು ಪೋಷಕರ ಮಾರ್ಗದರ್ಶನದಲ್ಲಿ ಸಿನಿಮಾ ನೋಡಬಹುದು. ಇನ್ನು ಸಿನಿಮಾದ ಅವಧಿ 169.14 ನಿಮಿಷ ಇದೆ. ಅಂದರೆ ಸಿನಿಮಾದ ರನ್ಟೈಮ್ ಎರಡು ಗಂಟೆ ನಲವತ್ತೊಂಭತ್ತು ನಿಮಿಷ ಇರಲಿದೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ನಿರೀಕ್ಷಿಸಲಾಗುತ್ತಿದೆ.
ಸಿನಿಮಾದಲ್ಲಿ ವಿವಾದಾತ್ಮಕ ವಿಚಾರ ಇದ್ದರೆ ಮುಂದೆ ದೊಡ್ಡ ಮಟ್ಟದಲ್ಲಿ ವಿವಾದ ಉಂಟಾಗಬಹುದು. ಸಿನಿಮಾ ಬ್ಯಾನ್ಗೆ ಒತ್ತಾಯ ಬರಬಹುದು. ಈ ಕಾರಣದಿಂದಲೇ ಸೆನ್ಸಾರ್ ಮಂಡಳಿಯವರು ಹೆಚ್ಚು ಎಚ್ಚರಿಕೆಯಿಂದ ಸಿನಿಮಾ ನೋಡುತ್ತಾರೆ. ಏನಾದರೂ ವಿವಾದಾತ್ಮಕ ಅಂಶ ಕಂಡರೆ ಕತ್ತರಿ ಪ್ರಯೋಗ ಮಾಡಲು ಸೂಚಿಸುತ್ತಾರೆ. ಆದರೆ, ‘ಜವಾನ್’ ಚಿತ್ರದ ಯಾವುದೇ ದೃಶ್ಯಕ್ಕೂ ಕತ್ತರಿ ಬಿದ್ದಿಲ್ಲ. ಹೀಗಾಗಿ, ಸಿನಿಮಾದಲ್ಲಿ ಯಾವುದೇ ವಿವಾದಾತ್ಮಕ ಅಂಶ ಇಲ್ಲ ಎಂಬುದು ಪಕ್ಕಾ ಆಗಿದೆ.
Woww, the film Jawan is unstoppable 🔥🔥#Jawan Became the 1st Bollywood movie to Collect “200K $” during Advance booking , From Overseas Market Before 15 Days of it’s worldwide Release.
Just can’t wait for pre-booking in India , #ShahRukhKhan …pic.twitter.com/3aecWOcImA
— Sahil Sultan (@AreToKyaHua) August 23, 2023
ಇದನ್ನೂ ಓದಿ: ಹೆಚ್ಚಿತು ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಕ್ರೇಜ್; 21 ದಿನ ಮೊದಲೇ ಬುಕಿಂಗ್ ಓಪನ್
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಕಾರಣದಿಂದ ಶಾರುಖ್ ಖಾನ್ ಅಭಿಮಾನಿಗಳಿಗೆ ‘ಜವಾನ್’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರೋ ಅಟ್ಲೀ ಅವರು ‘ಜವಾನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಭಾರತದ ಕಲಾವಿದರಾದ ನಯನತಾರಾ, ವಿಜಯ್ ಸೇತುಪತಿ ಮೊದಲಾದವರು ನಟಿಸಿದ್ದಾರೆ. ಶಾರುಖ್ ಖಾನ್ ಸೈನಿಕನ ಪಾತ್ರದಲ್ಲಿ ಕಾಣಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Wed, 23 August 23