ಬಾಲಿವುಡ್ನಲ್ಲಿ (Bollywood) ನುಸ್ರತ್ ಬರುಚಾ (Nushrratt Bharucha) ತಮ್ಮ ನಟನೆ ಮೂಲಕ ಛಾಪು ಮೂಡಿಸಿದ್ದಾರೆ. ‘ಸೋನು ಕೆ ಟಿಟ್ಟೂ ಕಿ ಸ್ವೀಟಿ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಅವರು ನಂತರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡರು. ಈಗ ಅವರು ‘ಜನ್ಹಿತ್ ಮೆ ಜಾರಿ’ ಸಿನಿಮಾದಲ್ಲಿ (Janhit Mein Jaari) ಕಾಂಡೋಮ್ ಸೇಲ್ಸ್ ಎಕ್ಸಿಕ್ಯೂಟಿವ್ ಪಾತ್ರ ಮಾಡಿದ್ದಾರೆ. ಕಲಾವಿದರು ಮಡಿವಂತಿಕೆ ಬಿಟ್ಟು ಈ ರೀತಿಯ ಪಾತ್ರಗಳನ್ನು ಒಪ್ಪಿಕೊಂಡಾಗ ಟೀಕೆಗಳು ಎದುರಾಗುತ್ತವೆ. ಸುಸ್ರತ್ ವಿಚಾರದಲ್ಲೂ ಹೀಗೆಯೇ ಆಗಿದೆ. ಈ ಬಗ್ಗೆ ಅವರು ಬೇಸರ ತೋಡಿಕೊಂಡಿದ್ದಾರೆ.
ಕಥಾ ನಾಯಕಿ ಕೆಲಸ ಹುಡುಕಿಕೊಂಡು ನಗರಕ್ಕೆ ಬರುತ್ತಾಳೆ. ಅವಳಿಗೆ ಕಾಂಡೋಮ್ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಸಿಗುತ್ತದೆ. ಪ್ರತಿ ಮೆಡಿಕಲ್ ಸ್ಟೋರ್ಗೆ ಹೋಗಿ ಕಾಂಡೋಮ್ ಮಾರುವ ಕೆಲಸ ಕಥಾ ನಾಯಕಿಯದ್ದು. ‘ಜನ್ಹಿತ್ ಮೆ ಜಾರಿ’ ಚಿತ್ರದಲ್ಲಿ ಇದುವೇ ಹೈಲೈಟ್. ಈ ಪಾತ್ರವನ್ನು ನುಸ್ರತ್ ನಿಭಾಯಿಸಿದ್ದಾರೆ. ಅವರ ಪಾತ್ರಕ್ಕೆ ನೆಗೆಟಿವ್ ಕಮೆಂಟ್ಗಳು ಬರುತ್ತಿವೆ.
ಕೆಲ ದಿನಗಳ ಹಿಂದೆ ನುಸ್ರುತ್ ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದರು. ಜೀನ್ಸ್ ಪ್ಯಾಂಟ್ನ ಹಿಂದಿನ ಪಾಕೆಟ್ನಲ್ಲಿ ಕಾಂಡೋಮ್ ಕಾಣುವ ರೀತಿಯಲ್ಲಿ ಈ ಫೋಟೋ ಇತ್ತು. ‘ಜನ್ಹಿತ್ ಮೆ ಜಾರಿ’ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಲು ಈ ರೀತಿಯ ಪೋಸ್ಟರ್ ಸಿದ್ಧಪಡಿಸಲಾಗಿತ್ತು. ಆದರೆ, ಇದನ್ನು ನುಸ್ರತ್ ಫ್ಯಾನ್ಸ್ ಬೇರೆಯದೇ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಈ ಪೋಸ್ಟ್ಗೆ ಬಂದ ಕೆಟ್ಟ ಕಮೆಂಟ್ಗಳನ್ನು ಪಟ್ಟಿ ಮಾಡಿ ತೋರಿಸಿದ್ದಾರೆ ನುಸ್ರತ್.
ವಿಡಿಯೋ ಒಂದನ್ನು ಹಂಚಿಕೊಂಡಿರುವ ನುಸ್ರತ್, ‘ಎಲ್ಲರೂ ತಮ್ಮ ಪೋಸ್ಟ್ಗೆ ಬಂದ ಬೆಸ್ಟ್ ಕಮೆಂಟ್ ಸೆಲೆಕ್ಟ್ ಮಾಡುತ್ತಾರೆ. ಆದರೆ, ನಾನು ಇಲ್ಲಿ ಅತಿ ಕೆಟ್ಟ ಕಮೆಂಟ್ಗಳನ್ನು ಆಯ್ಕೆ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದೇ ವಿಡಿಯೋದಲ್ಲಿ ಕೆಟ್ಟ ಕಮೆಂಟ್ಗಳ ಪಟ್ಟಿ ಮಾಡಿದ್ದಾರೆ.
#JanhitMeinJaari pic.twitter.com/qVVqQ8feUs
— Nushrratt Bharuccha (@Nushrratt) May 4, 2022
‘ಕಾಂಡೋಮ್ ಜೀನ್ಸ್ಗೆ ಹಾಕಿಕೊಳ್ಳುವುದಲ್ಲ’ ಎಂದು ಓರ್ವ ಅಭಿಮಾನಿ ಕಮೆಂಟ್ ಮಾಡಿದ್ದಾನೆ. ಇನ್ನೂ ಕೆಲವರು ಅವರ ದೇಹದ ಖಾಸಗಿ ಭಾಗದ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ‘ನಿಮಗೆ ಯಾವ ಫ್ಲೇವರ್ ಇಷ್ಟವಾಗುತ್ತದೆ’ ಎಂಬಿತ್ಯಾದಿ ಕಮೆಂಟ್ಗಳು ಕೂಡ ಬಂದಿವೆ.
Ab yeh andar ki baat nahi hai! Yeh suchana #JanhitMeinJaari hai; releasing in cinemas 10th June 2022 ?@Anudsinghdhaka #TinnuAnand @Pparitosh1 @writerraj @basantujai @vinodbhanu #KamleshBhanushali @vishalgurnani5 @vklahoti @SonaliSinghSSS @Chirucam pic.twitter.com/EX9iJL73U1
— Nushrratt Bharuccha (@Nushrratt) May 2, 2022
ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:55 pm, Thu, 5 May 22