Bidisha De Majumdar: ಶಾಕಿಂಗ್ ಘಟನೆ: ಅಪಾರ್ಟ್​ಮೆಂಟ್​ನಲ್ಲಿ ಶವವಾಗಿ ಪತ್ತೆಯಾದ ಯುವ ನಟಿ

| Updated By: Rajesh Duggumane

Updated on: May 26, 2022 | 1:37 PM

ಬಿದಿಶಾ ಡೇ ಅವರು ಫ್ಲಾಟ್​ನಿಂದ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಒಡೆದಾಗ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Bidisha De Majumdar: ಶಾಕಿಂಗ್ ಘಟನೆ: ಅಪಾರ್ಟ್​ಮೆಂಟ್​ನಲ್ಲಿ ಶವವಾಗಿ ಪತ್ತೆಯಾದ ಯುವ ನಟಿ
ಬಿದಿಶಾ
Follow us on

ಬೆಂಗಾಲಿ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ನಟಿ ಪಲ್ಲವಿ ಡೇ ಅವರು (Pallavi De) ಇತ್ತೀಚೆಗೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಇದಾದ ಕೆಲವೇ ಕೆಲವು ದಿನಗಳಲ್ಲಿ ಬೆಂಗಾಲಿ ಯುವ ನಟಿ ಅನುಮಾನಾಸ್ಪದ ರೀತಿಯಲ್ಲಿ ನಿಧನ ಹೊಂದಿದ್ದಾರೆ. ಬಿದಿಶಾ ಡೇ ಮಜುಂದರ್ ಅವರ (Bidisha De Majumdar) ಶವ ಕೋಲ್ಕತ್ತಾ ಅಪಾರ್ಟ್​​ಮೆಂಟ್​ನಲ್ಲಿ ಸಿಕ್ಕಿದೆ. ಅವರು ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಿದಿಶಾ ಇದೇ ಫ್ಲಾಟ್​ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದರು. ಬಿದಿಶಾ ರಿಲೇಶನ್​ಶಿಪ್​ನಲ್ಲಿದ್ದರು. ಬಾಯ್​ಫ್ರೆಂಡ್ ಜತೆ ನಿರಂತರ ಜಗಳ ಆಗುತ್ತಿದ್ದರಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಬಿದಿಶಾ ಡೇ ಅವರು ಫ್ಲಾಟ್​ನಿಂದ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಒಡೆದಾಗ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿದಿಶಾ ಶವವನ್ನು ಸದ್ಯ ಆಸ್ಪೆತ್ರೆಗೆ ಕಳುಹಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಅವರ ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಆತ್ಮಹತ್ಯೆ ಪತ್ರವನ್ನು ಬರೆದಿಟ್ಟು ಬಿದಿಶಾ ಮೃತಪಟ್ಟಿದ್ದಾರೆ. ಆದರೆ, ಕುಟುಂಬದವರು ಬಿದಿಶಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಕೊಲೆ ಎನ್ನುವ ಆರೋಪವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಇದನ್ನು ಆತ್ಮಹತ್ಯೆ ಎಂದೇ ಬರೆಯಲಾಗಿದೆ.

ಇದನ್ನೂ ಓದಿ
Pallavi Dey: ಕಿರುತೆರೆ ನಟಿ ಪಲ್ಲವಿ ಡೇ ನಿಧನ; ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಆಯ್ತು ಮೃತ ದೇಹ
Anekal Balaraj Death: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಇನ್ನಿಲ್ಲ; ಬೆಂಗಳೂರಿನಲ್ಲಿ ಅಪಘಾತದಿಂದ ನಿಧನ
ಪಾರ್ವತಮ್ಮ ರಾಜ್​ಕುಮಾರ್ ಸಹೋದರಿ ಎಸ್​.ಎ. ನಾಗಮ್ಮ ನಿಧನ
18ನೇ ವಯಸ್ಸಿಗೆ ಮದುವೆ, ನಿರಂತರ ಕಿರುಕುಳ; ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಯುವನಟಿಯ ಆತ್ಮಹತ್ಯೆ

ಬಿದಿಶಾ ಮಾಡೆಲ್​ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದವರು. ನಂತರ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. 2021ರಲ್ಲಿ ಕಿರುಚಿತ್ರದ ಮೂಲಕ ಚಿತ್ರರಂಗದ ಸಂಪರ್ಕಕ್ಕೆ ಬಂದರು. ನಂತರ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವ ಬಯಕೆ ಇತ್ತು. ಇನ್ನೂ ಬದುಕಿ ಬಾಳಬೇಕಿದ್ದ ನಟಿ ಈ ರೀತಿ ಮೃತಪಟ್ಟಿರುವುದಕ್ಕೆ ಬೆಂಗಾಲಿ ಕಿರುತೆರೆಯ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಕುಟುಂಬದವರ ಬಗ್ಗೆ ಸಂತಾಪ ಸೂಚಿಸಲಾಗುತ್ತಿದೆ.

ಇದನ್ನೂ ಓದಿ: ಕಿರುತೆರೆ ನಟಿ ಪಲ್ಲವಿ ಡೇ ನಿಧನ; ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಆಯ್ತು ಮೃತ ದೇಹ

ಬಿದಿಶಾ ನಿಧನದ ಬಗ್ಗೆ ಮಾತನಾಡಿರುವ ಬೆಂಗಾಲಿ ನಟ ಸುಮನ್​, ‘ಇದು ಆಘಾತಕಾರಿ ಸುದ್ದಿ. ನಿಜಕ್ಕೂ ದುಃಖವಾಗಿದೆ. ನಾವು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ನಮ್ಮ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಮಾತನಾಡುವ ಸಮಯ ಬಂದಿದೆ. ನಾನು ನನ್ನ ಜೀವನದಲ್ಲಿ ಬಹಳಷ್ಟು ನೋವನ್ನು ಕಂಡಿದ್ದೇನೆ, ಕಷ್ಟಪಟ್ಟಿದ್ದೇನೆ. ಹಾಗಾಗಿ ಯುವಕರನ್ನು ಕಂಡಾಗಲೆಲ್ಲಾ ತಾಳ್ಮೆಯಿಂದ ಇರಲು ವಿನಂತಿಸುತ್ತೇನೆ. ಸಮಸ್ಯೆ ಎದುರಾದ ಸಂದರ್ಭದಲ್ಲಿ ನಾವು ಅದನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು. ನನ್ನ ಜೀವನದಲ್ಲಿ ನಾನು ಯಾವಾಗಲೂ ಅನುಸರಿಸುತ್ತೇನೆ’ ಎಂದಿದ್ದಾರೆ.

ಪಲ್ಲವಿ ಡೇ ಸಾವು:

ದಕ್ಷಿಣ ಕೊಲ್ಕತ್ತಾದ ಬಾಡಿಗೆ ಮನೆಯಲ್ಲಿ ಪಲ್ಲವಿ ಡೇ ಅವರು ವಾಸವಾಗಿದ್ದರು. ಮೇ 14ರ ರಾತ್ರಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಪ್ರಿಯಕರ ಶಾಗ್ನಿಕ್​ ಚರ್ಕವರ್ತಿ ಜೊತೆಗೆ ಪಲ್ಲವಿ ಡೇ ವಾಸವಾಗಿದ್ದರು. ಹಾಗಾಗಿ ಅವರ ಮೇಲೆ ಈಗ ಅನುಮಾನ ಮೂಡುವಂತಾಗಿದೆ. ಪಲ್ಲವಿ ಡೇ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ ಎಂದು ಕೆಲವರು ಶಂಕಿಸಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪಲ್ಲವಿ ಡೇ ಸಾವಿಗೆ ಕಾರಣ ಏನು ಎಂಬುದು ತಿಳಿದುಬರಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.