RailTel Recruitment 2023: ರೈಲ್​ಟೆಲ್​ನ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನ

|

Updated on: Mar 09, 2023 | 3:11 PM

RailTel Recruitment 2023: ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 28 ವರ್ಷಗಳನ್ನು ದಾಟಿರಬಾರದು.

RailTel Recruitment 2023: ರೈಲ್​ಟೆಲ್​ನ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನ
RailTel Recruitment 2023
Follow us on

RailTel Recruitment 2023: ರೈಲ್​ಟೆಲ್​ ಕಾರ್ಪೊರೇಷನ್ ಆಫ್​ ಇಂಡಿಯಾ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಕನ್ಸಲ್ಟೆಂಟ್ ಇಂಜಿನಿಯರ್ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಸಂಸ್ಥೆಯ ಹೆಸರು : ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ರೈಲ್‌ಟೆಲ್)
  • ಹುದ್ದೆಗಳ ಸಂಖ್ಯೆ: 8
  • ಉದ್ಯೋಗ ಸ್ಥಳ: ಚೆನ್ನೈ, ವಿಜಯವಾಡ, ಬೆಂಗಳೂರು, ಎರ್ನಾಕುಲಂ
  • ಹುದ್ದೆಯ ಹೆಸರು: ಕನ್ಸಲ್ಟೆಂಟ್ ಇಂಜಿನಿಯರ್

ಶೈಕ್ಷಣಿಕ ಅರ್ಹತೆ:

ಇದನ್ನೂ ಓದಿ
FCI Recruitment 2023: ಭಾರತೀಯ ಆಹಾರ ನಿಗಮದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ವೇತನ 1.80 ಲಕ್ಷ ರೂ.
DC Office Belagavi Recruitment 2023: ಬೆಳಗಾವಿ ಜಿಲ್ಲೆಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
DC Office Recruitment 2023: ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗಾವಕಾಶ: ವಿದ್ಯಾರ್ಹತೆ ಬೇಕಿಲ್ಲ, ಕನ್ನಡ ಗೊತ್ತಿದ್ದರೆ ಸಾಕು..!
Canara Bank Recruitment 2023: ಕೆನರಾ ಬ್ಯಾಂಕ್ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ

ರೈಲ್‌ಟೆಲ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಎಲೆಕ್ಟ್ರಾನಿಕ್ಸ್ ಮತ್ತು ಟೆಲಿ ಕಮ್ಯುನಿಕೇಶನ್ ಎಂಜಿನಿಯರಿಂಗ್/ಕಂಪ್ಯೂಟರ್ ಸೈನ್ಸ್/ಐಟಿ/ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಅಥವಾ ಬಿಟೆಕ್ ಪೂರ್ಣಗೊಳಿಸಿರಬೇಕು. ಅಥವಾ ವಿಶ್ವವಿದ್ಯಾಲಯಗಳಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಎಸ್‌ಸಿ ಮಾಡಿರಬೇಕು.

ವಯೋಮಿತಿ:

ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 28 ವರ್ಷಗಳನ್ನು ದಾಟಿರಬಾರದು. ಇನ್ನು OBC (NCL) ಅಭ್ಯರ್ಥಿಗಳಿಗೆ 3 ವರ್ಷಗಳ ಹಾಗೂ SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ವೇತನ:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವಾಗಿ ರೂ.30000 ರಿಂದ 120000/- ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಮಾರ್ಚ್ 28, 2023

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಂಚೆಯ ಮೂಲಕ ಅರ್ಜಿ ಕಳುಹಿಸಬೇಕು.

ಇದನ್ನೂ ಓದಿ: Karnataka High Court Recruitment 2023: ಕರ್ನಾಟಕ ಹೈಕೋರ್ಟ್​ನಲ್ಲಿನ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಕಳುಹಿಸಬೇಕಾದ ವಿಳಾಸ:

Assistant General Manager/Admin, RailTel Corporation of India Limited, Southern Region, H.No. 1-10-39 to 44, 6A, 6th Floor, Gumidelli Towers, Opp. Shoppers Stop, Begumpet, Hyderabad-500016

ಅರ್ಜಿಯನ್ನು ಡೌನ್​ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.