ESIC Recruitment 2023: ನೌಕರರ ರಾಜ್ಯ ವಿಮಾ ನಿಗಮದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ESIC Karnataka Recruitment 2023: ನೌಕರರ ರಾಜ್ಯ ವಿಮಾ ನಿಗಮದ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 67 ವರ್ಷಗಳನ್ನು ಮೀರಿರಬಾರದು.
ESIC Karnataka Recruitment 2023: ನೌಕರರ ರಾಜ್ಯ ವಿಮಾ ನಿಗಮದಲ್ಲಿನ ವೈದ್ಯಕೀಯ ಬೋಧನಾ ವಿಭಾಗದ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 14 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಸಂಸ್ಥೆಯ ಹೆಸರು : ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ ( ESIC-ಕರ್ನಾಟಕ )
- ಹುದ್ದೆಗಳ ಸಂಖ್ಯೆ: 14
- ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
- ಹುದ್ದೆಯ ಹೆಸರು: ಮೆಡಿಕಲ್ ಟೀಚಿಂಗ್ ಫ್ಯಾಕಲ್ಟಿ
ಹುದ್ದೆಗಳ ವಿಭಾಗ:
- ಪ್ರೊಫೆಸರ್- 2 ಹುದ್ದೆಗಳು
- ಅಸೋಸಿಯೇಟ್ ಪ್ರೊಫೆಸರ್- 7 ಹುದ್ದೆಗಳು
- ಸಹಾಯಕ ಪ್ರಾಧ್ಯಾಪಕ- 5 ಹುದ್ದೆಗಳು
ವಯೋಮಿತಿ:
ನೌಕರರ ರಾಜ್ಯ ವಿಮಾ ನಿಗಮದ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 67 ವರ್ಷಗಳನ್ನು ಮೀರಿರಬಾರದು.
ಮಾಸಿಕ ವೇತನ:
- ಪ್ರೊಫೆಸರ್- ರೂ.233919/-
- ಅಸೋಸಿಯೇಟ್ ಪ್ರೊಫೆಸರ್- ರೂ.155551/-
- ಸಹಾಯಕ ಪ್ರಾಧ್ಯಾಪಕ- ರೂ.133640/-
ಸಂದರ್ಶನ ನಡೆಯುವ ದಿನಾಂಕಗಳು:
- ಪ್ರೊಫೆಸರ್ ಹುದ್ದೆಗಳಿಗೆ- 23-ಆಗಸ್ಟ್-2023
- ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ- 23-ಆಗಸ್ಟ್-2023
- ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ-24-ಆಗಸ್ಟ್-2023
ಸಂದರ್ಶನ ನಡೆಯುವ ಸ್ಥಳದ ವಿಳಾಸ:
New Academic Block, ESIC MC & PGIMSR, Rajajinagar, Bangalore.
ಇದನ್ನೂ ಓದಿ: ನಿಮ್ಹಾನ್ಸ್ ನೇಮಕಾತಿ: ಪದವೀಧರರಿಗೆ ಇಲ್ಲಿದೆ ಸುವರ್ಣಾವಕಾಶ
ಈ ಹುದ್ದೆಗಳ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್ಸೈಟ್: esic.nic.in