DC Office Belagavi Recruitment 2023: ಬೆಳಗಾವಿ ಜಿಲ್ಲೆಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
DC Office Belagavi Recruitment 2023: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳ ಒಳಗಿರಬೇಕು. ಹಾಗೆಯೇ ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿಡಿ ಸಡಿಲಿಕೆ ನೀಡಲಾಗುತ್ತದೆ.
DC Office Belagavi Recruitment 2023: ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 105 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಒಟ್ಟು ಹುದ್ದೆಗಳ ಸಂಖ್ಯೆ: 105
- ಉದ್ಯೋಗ ಸ್ಥಳ: ಬೆಳಗಾವಿ-ಕರ್ನಾಟಕ
- ಹುದ್ದೆಯ ಹೆಸರು: ಪೌರಕಾರ್ಮಿಕ
ಎಲ್ಲೆಲ್ಲಿ ಉದ್ಯೋಗ?
ಅಥಣಿ ಪುರಸಭೆ- 32 ಹುದ್ದೆಗಳು ಸಂಕೇಶ್ವರ ಪುರಸಭೆ- 6 ಹುದ್ದೆಗಳು ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್- 6 ಹುದ್ದೆಗಳು ಐನಾಪುರ ಪಟ್ಟಣ ಪಂಚಾಯಿತಿ- 17 ಹುದ್ದೆಗಳು ಪೀರನವಾಡಿ ಪಟ್ಟಣ ಪಂಚಾಯಿತಿ- 29 ಹುದ್ದೆಗಳು ಅರಭಾವಿ ಪಟ್ಟಣ ಪಂಚಾಯಿತಿ- 15 ಹುದ್ದೆಗಳು
ವಯೋಮಿತಿ:
ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳ ಒಳಗಿರಬೇಕು. ಹಾಗೆಯೇ ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿಡಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: HMT Recruitment 2023: HMT ನೇಮಕಾತಿ: ಬೆಂಗಳೂರಿನಲ್ಲಿದೆ ಉದ್ಯೋಗಾವಕಾಶ
ಪ್ರಮುಖ ದಿನಾಂಕಗಳು:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಮಾರ್ಚ್ 15, 2023
ಅರ್ಜಿ ಕಳುಹಿಸಬೇಕಾದ ವಿಳಾಸಗಳು:
- ಅಥಣಿ ಪುರಸಭೆ: ಮುಖ್ಯಾಧಿಕಾರಿಗಳು, ಪುರಸಭೆ, ಅಥಣಿ
- ಸಂಕೇಶ್ವರ ಪುರಸಭೆ: ಮುಖ್ಯಾಧಿಕಾರಿಗಳು, ಪುರಸಭೆ, ಸಂಕೇಶ್ವರ
- ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯತ್, -ಕಿತ್ತೂರು
- ಐನಾಪುರ ಪಟ್ಟಣ ಪಂಚಾಯಿತಿ: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಐನಾಪುರ
- ಪೀರನವಾಡಿ ಪಟ್ಟಣ ಪಂಚಾಯಿತಿ: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಪೀರನವಾಡಿ
- ಅರಭಾವಿ ಪಟ್ಟಣ ಪಂಚಾಯಿತಿ: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಅರಭಾವಿ
ಅಧಿಸೂಚನೆಯ ಲಿಂಕ್ಗಳು:
ಅಧಿಕೃತ ಅಧಿಸೂಚನೆ – ಅಥಣಿ ಪುರಸಭೆ: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಅಧಿಸೂಚನೆ – ಸಂಕೇಶ್ವರ ಪುರಸಭೆ: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಅಧಿಸೂಚನೆ – ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಅಧಿಸೂಚನೆ – ಐನಾಪುರ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಅಧಿಸೂಚನೆ – ಪೀರನವಾಡಿ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಅಧಿಸೂಚನೆ – ಅರಭಾವಿ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ