Kurukshetra : 2000ರಲ್ಲಿ ಬಿಡುಗಡೆಯಾದ ಕುರುಕ್ಷೇತ್ರ ಸಿನೆಮಾಕ್ಕೆ ಬಣ್ ಠಣ್ ಛಲೀ ಬೋಲೋ ಹಾಡನ್ನು ಸುಖವಿಂದರ್ ಸಿಂಗ್ ಮತ್ತು ಸುನಿಧಿ ಚೌಹಾನ್ (Sukhwindar Singh Sunidhi Chouhan) ಹಾಡಿದ್ದರು. ಈ ಹಾಡೀಗ ಮತ್ತೆ ಟ್ರೆಂಡಿಂಗ್ನಲ್ಲಿದೆ. ಪ್ರಶಾಂತ ಮಹೇಶ್ವರಿ ಎನ್ನುವವರು ಈ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ಇವರ ನೃತ್ಯವನ್ನು ಶ್ಲಾಘಿಸುತ್ತಿದ್ದಾರೆ. ಜೋಡಿಯ ಉಡುಪು ವಿನ್ಯಾಸ, ಬಣ್ಣ, ಪ್ರಸಾಧನ ಮತ್ತು ಹೆಜ್ಜೆಗಳು ತುಂಬಾ ಆಕರ್ಷಕವಾಗಿವೆ ಎನ್ನುತ್ತಿದ್ದಾರೆ. ಮೇ.24ರಂದು ಈ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. 4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದು, 20,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ‘ಕೋಕೋ ಲೀಫಿ ಸ್ಟ್ರಾ’ ಬೇಡವಾದ ತೆಂಗಿನ ಎಲೆಗಳಿಂದ ರೂಪುಗೊಳ್ಳುವ ಪರಿಸರಸ್ನೇಹಿ ಸ್ಟ್ರಾ
ಈ ಜೋಡಿ ನಿಜಕ್ಕೂ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ, ಇವರ ನೃತ್ಯದ ಮಟ್ಟುಗಳೂ ವಿಶೇಷವಾಗಿವೆ ಎಂದಿದ್ದಾರೆ ಒಬ್ಬರು. ಅದ್ಭುತವಾದ ಪ್ರದರ್ಶನ ಎಂದು ಮತ್ತೊಬ್ಬರು ಹೇಳಿದ್ದಾರೆ. ನನಗೂ ನಿಮ್ಮ ಬಳಿ ಈಗ ಡ್ಯಾನ್ಸ್ ಕಲಿಯಬೇಕೆನ್ನಿಸುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು.
ಪ್ರವೀಣ ಶಾಹ್ ನಿರ್ಮಾಣದ ಈ ಚಿತ್ರಕ್ಕೆ ಮಹೇಶ ಮಾಂಜ್ರೇಕರ್ ನಿರ್ದೇಶನವಿದೆ. ಸಂಜಯ್ ದತ್, ಮಹಿಮಾ ಚೌಧರಿ, ಓಮ್ ಪುರಿ, ರಾಖೀ ಸಾವಂತ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಅಮರ್ ಹಲ್ದೀಪುರ್ ಮತ್ತು ಹಿಮೇಶ ರೇಷಮಿಯಾ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ : Viral Video: ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದಂತೆ ಸಾಹಸ ಪ್ರದರ್ಶನಕ್ಕಿಳಿದ ಮಗುವಿನ ವಿಡಿಯೋ ವೈರಲ್
ಇಷ್ಕ್ ಭೀ ಕ್ಯಾ ಚೀಝ್ ಹೈ, ಚಲ್ ಶಾದೀ ಕರಲೇತೇ, ಆಪ್ ಕಾ ಆನಾ ದಿಲ್. ಬಣ್ಥನ್, ಜನಮ್ ತೇರೇ ಲಿಯೇ ಹಾಡುಗಳನ್ನು ಈ ಚಿತ್ರವು ಹೊಂದಿದೆ. ಇನ್ನು ಬಾಕ್ಸ್ ಆಫೀಸ್- ರೂ. 16.48 ಕೋಟಿ. ಇಷ್ಟು ವರ್ಷದ ಮೇಲೆ ಈ ಹಾಡು ಇದೀಗ ಟ್ರೆಂಡಿಂಗ್ನಲ್ಲಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:32 am, Fri, 25 August 23