ಅಗರ್ತಲಾ: ಮಾಜಿ ರಾಜಮನೆತನದ ಪ್ರದ್ಯೋತ್ ದೆಬ್ಬರ್ಮಾ (Pradyot Debbarma) ನೇತೃತ್ವದ ಹೊಸ ಪಕ್ಷವು ತನ್ನ ಬೆಂಬಲವನ್ನು ನೀಡಿದರೆ ಗ್ರೇಟರ್ ಟಿಪ್ರಾಲ್ಯಾಂಡ್ ಹೊರತುಪಡಿಸಿ ಟಿಪ್ರಾ ಮೋಥಾದ (Tipra Motha)ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸಲು ಸಿದ್ಧ ಎಂದು ಬಿಜೆಪಿ (BJP) ಗುರುವಾರ ಹೇಳಿದೆ. ಪಿಟಿಐ ಜೊತೆ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಸುಬ್ರತಾ ಚಕ್ರವರ್ತಿ, ರಾಜ್ಯದಲ್ಲಿ ಮುಂದಿನ ಸರ್ಕಾರ ರಚಿಸಲು ತಮ್ಮ ಪಕ್ಷ ಸಿದ್ಧತೆ ನಡೆಸುತ್ತಿದೆ ಎಂದಿದ್ದಾರೆ.
“ನಾವು ಮೊದಲಿನಿಂದಲೂ ಹೇಳುತ್ತಾ ಬಂದಂತೆ ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ರಚಿಸುತ್ತಿದ್ದೇವೆ. ಇಬ್ಬರು ಕೇಂದ್ರ ನಾಯಕರು – ಫಣೀಂದ್ರನಾಥ್ ಶರ್ಮಾ ಮತ್ತು ಸಂಬಿತ್ ಪಾತ್ರ – ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಇಲ್ಲಿದ್ದಾರೆ. ಇಂದು ಹೆಚ್ಚಿನ ಕೇಂದ್ರ ನಾಯಕರು ಆಗಮಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ದೆಬ್ಬರ್ಮಾ ನೇತೃತ್ವದ ಪಕ್ಷದ ಬೆಂಬಲವನ್ನು ಪಡೆಯುವ ಸಾಧ್ಯತೆಯ ಕುರಿತು ಮಾತನಾಡಿದ ಅವರು “ಗ್ರೇಟರ್ ಟಿಪ್ರಾಲ್ಯಾಂಡ್ ಹೊರತುಪಡಿಸಿ, ಅವರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಬಿಜೆಪಿ ಸಿದ್ಧವಾಗಿದೆ” ಎಂದಿದ್ದಾರೆ. 60 ಸದಸ್ಯ ಬಲದ ಸದನದಲ್ಲಿ ಬಿಜೆಪಿ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದು, ಅದರ ಪಾಲುದಾರ ಐಪಿಎಫ್‌ಟಿ ಒಂದು ಸ್ಥಾನದಲ್ಲಿ ಮುಂದಿದೆ.
ಐಪಿಎಫ್‌ಟಿಯ ಬುಡಕಟ್ಟು ಬೆಂಬಲವನ್ನು ಪಡೆದುಕೊಂಡಂತೆ ತೋರುತ್ತಿದ್ದ ಟಿಪ್ರಾ ಮೋಥಾ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರತಿಪಕ್ಷಗಳಾದ ಎಡ-ಕಾಂಗ್ರೆಸ್ ಮೈತ್ರಿಕೂಟ 15 ಸ್ಥಾನಗಳಲ್ಲಿ ಮುಂದಿದೆ. ಇತರರ ಪೈಕಿ, ತ್ರಿಪುರಾದ ಸ್ಥಳೀಯ ಜನಸಂಖ್ಯೆಗಾಗಿ ಟಿಪ್ರಾ ಮೋಥಾ ಪ್ರತ್ಯೇಕ ‘ಗ್ರೇಟರ್ ಟಿಪ್ರಾಲ್ಯಾಂಡ್’ ರಾಜ್ಯ ಬೇಕೆಂದು ಒತ್ತಾಯಿಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Thu, 2 March 23