ಬೆಂಗಳೂರು, ಆಗಸ್ಟ್ 5: ಇಂಜಿನಿಯರಿಂಗ್ ಕೋರ್ಸ್ಗೆ (Engineering Course) ಸಂಬಂಧಿಸಿದಂತೆ ಅಂತಿಮ ಹಂಚಿಕೆ ಪಟ್ಟಿಯಿಂದ ಕೈಬಿಡಲಾದ ಹಿನ್ನೆಲೆ ಇಂದು ಸಂಜೆ 5 ರಿಂದ ಆಪ್ಷನ್ ಎಂಟ್ರಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ, ಆಪ್ಷನ್ ಎಂಟ್ರಿಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ಗಳಿಗೆ ಅವಕಾಶ ಇರಲಿದೆ ಎಂದರು.
ಉನ್ನತ ಶಿಕ್ಷಣ ಇಲಾಖೆಯು 9,000 ಸೀಟುಗಳನ್ನು ಮತ್ತೆ ಸೇರಿಸಿದ್ದು, ಇಷ್ಟು ಸೀಟು ಹಂಚಿಕೆಗೆ ಲಭ್ಯವಿದೆ. ಇದರ ಆಪ್ಷನ್ ಎಂಟ್ರಿಗೆ ಆಗಸ್ಟ್ 9 ರವರೆಗೆ ಅವಕಾಶ ಇರಲಿದೆ. ಕೆಲವು ದಾಖಲೆಗಳನ್ನು ಒದಗಿಸಿಲ್ಲ ಎನ್ನುವ ಕಾರಣಕ್ಕೆ ಸೀಟು ಹಂಚಿಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ಬಳಿಕ ಉನ್ನತ ಶಿಕ್ಷಣ ಇಲಾಖೆ ಶುಕ್ರವಾರ ಷರತ್ತು ವಿಧಿಸಿ ಸೀಟು ಹಂಚಿಕೆಗೆ ಒಪ್ಪಿಗೆ ಸೂಚಿಸಿದೆ ಎಂದರು.
ಇದನ್ನೂ ಓದಿ: ಡೀಮ್ಡ್ ವಿವಿಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳ ಶುಲ್ಕ ಶೇ.7ರಷ್ಟು ಹೆಚ್ಚಳ
ನಿಗದಿತ ಅವಧಿಯೊಳಗೆ ಕಾಲೇಜುಗಳಿಗೆ ಅಗತ್ಯ ಇರುವ ದಾಖಲೆಗಳನ್ನು ಒದಗಿಸಬೇಕು. ಎಲ್ಲ ಕೋರ್ಸ್ಗಳಿಗೆ ಆಪ್ಷನ್ ಎಂಟ್ರಿ ಮಾಡುವ ಪ್ರಕ್ರಿಯೆ ಇಂದು ಸಂಜೆ ಆರಂಭವಾಗಲಿದೆ. ಎಲ್ಲ ಕೋರ್ಸ್ಗಳಿಗೂ ಏಕಕಾಲದಲ್ಲಿ ಆಪ್ಷನ್ ಎಂಟ್ರಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ಸೀಕ್ರೆಟ್ ಕೀ ಆನ್ಲೈನ್ ಮೂಲಕ UGCET-23 ಪರಿಶೀಲನೆ ಕಡ್ಡಾಯವಾಗಿ ಮಾಡಬೇಕು ಎಂದರು.
ಕೋರ್ಸ್ ಸ್ಲಿಪ್ ಪಡೆದಿರುವ ಅಭ್ಯರ್ಥಿಗಳು, ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. UG NEET-23 ಕ್ಕೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಲ್ಲಿ Secret Key ಯನ್ನು ವೈದ್ಯಕೀಯ ಕೋರ್ಸ್ಗಳ ಆಪ್ಷನ್ ಎಂಟ್ರಿಗೆ ಬಳಸಬೇಕು. www.kea.kar.nic.in ವೆಬ್ಸೈಟ್ನಲ್ಲಿ KEA ಆಪ್ಷನ್ ಎಂಟ್ರಿ ಅರ್ಜಿ ಸಲ್ಲಿಸಬಹುದು ಎಂದು ರಮ್ಯಾ ಮಾಹಿತಿ ನೀಡಿದ್ದಾರೆ.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ