ಪೊಲೀಸರ ಭಯದಿಂದ 1.5 ವರ್ಷದಿಂದ ಕಾರಿನಲ್ಲೇ ರಾತ್ರಿ ಕಳೆಯುತ್ತಿದ್ದ ರೌಡಿ ಕೆಂಚನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಅರೆಸ್ಟ್​ ಮಾಡಿದರು!

| Updated By: ಸಾಧು ಶ್ರೀನಾಥ್​

Updated on: Aug 24, 2023 | 9:15 AM

ಒಂದೂವರೆ ವರ್ಷದಿಂದ ಎಸ್ಕೇಪ್ ಆಗಿದ್ದವನು, ಇತ್ತೀಚೆಗೆ ದಿಢೀರನೆ ಬಂದು ಮತ್ತೆ ಕಿಡ್ನಾಪ್ ದಂಧೆಗೆ ಇಳಿದುಬಿಟ್ಟಿದ್ದ. ಕಳೆದ ತಿಂಗಳು ಹರಿ ಪ್ರಸಾದ್ ಎಂಬಾತನ ಕಿಡ್ನಾಪ್ ಮಾಡಿ ಹಣ, ಚಿನ್ನ ಸುಲಿಗೆ ಮಾಡಿ ಎಸ್ಕೇಪ್ ಆಗಿದ್ದ. ಪೊಲೀಸರಿಗೆ ಸಿಕ್ಕರೇ ಜೈಲು ಫಿಕ್ಸ್ ಅಂತ ಸಿಕ್ಕ ಸಿಕ್ಕ ಕಡೆ ಫುಲ್ ಟ್ರಿಪ್ ಹೊಡೆಯುತ್ತಿದ್ದ.

ಪೊಲೀಸರ ಭಯದಿಂದ 1.5 ವರ್ಷದಿಂದ ಕಾರಿನಲ್ಲೇ ರಾತ್ರಿ ಕಳೆಯುತ್ತಿದ್ದ ರೌಡಿ ಕೆಂಚನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಅರೆಸ್ಟ್​ ಮಾಡಿದರು!
ಪೊಲೀಸರ ಭಯದಿಂದ ಕಾರಿನಲ್ಲೇ ರಾತ್ರಿ ಕಳೆಯುತ್ತಿದ್ದ ರೌಡಿ ಕೆಂಚ
Follow us on

ಬೆಂಗಳೂರು, ಆಗಸ್ಟ್​ 24: ಆತ ಟೀ ಕುಡಿಯೋಕೆ ಹೋದ್ರೆ ಅಂಗಡಿಯವನು ಫ್ರೀಯಾಗಿ ಟೀ ಕೊಡಬೇಕು.. ಸಿಗರೇಟ್ ಕೇಳಿದ್ರೆ ಹಣ ಕೇಳದೆ ಫ್ರೀಯಾಗಿ ಸಿಗರೇಟು ಕೊಡಬೇಕು.. ಇನ್ನು ಟೀ ಕುಡಿಯುವಾಗ ಯಾರೇ ಎದುರಿಗೆ ಇದ್ದರೂ ಬಾಸ್ ಅಂತ ಕರೀಬೇಕು… ಹೀಗೆ ಇಡೀ ಯಲಹಂಕ ಏರಿಯಾದಲ್ಲಿ ಹವಾ ಇಡಲು ಶುರುಮಾಡಿದ್ದ ಮನೋಜ್ ಅಲಿಯಾಸ್ ಕೆಂಚ (rowdy Kencha) ಅರೆಸ್ಟ್ (Arrest) ಆಗಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ. ಯಾವಾಗ ಜನ ಹೆದರೋಕೆ ಶುರು ಮಾಡಿದ್ರೋ ಸುಲಿಗೆ, ದರೋಡೆ, ಕಿಡ್ನಾಪ್ ಮಾಡಿ ಹಣ ಮಾಡಲು ಮುಂದಾಗಿದ್ದ ಇದೇ ರೌಡಿ ಮನೋಜ‌ (Yalahanka New Town police).

ಯಾವಾಗ ಈತನ ರೌಡಿಸಂ ಜಾಸ್ತಿಯಾಯ್ತೋ ಕೊನೆಗೆ ಪೊಲೀಸರಿಗೆ ದೂರುಗಳ ಸುರಿಮಳೆಯಾಗಿದೆ. ಇದುವರೆಗೂ 28 ದೂರುಗಳು ಈ ಮನೋಜ್ @ ಕೆಂಚನ ಮೇಲೆ ಬಂದಿದ್ದವು. ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಈತನ ಮೇಲೆ ದೂರು ದಾಖಲಾಗಿದೆ. ತನ್ನ ಮೂಲ ಹೆಸರಿಗೆ ಅಲಿಯಾಸ್ ಹೊತ್ತಿದ್ದ ಇದೇ ಕೆಂಚ ನಗರದಲ್ಲಿ ಸಿಕ್ಕ ಸಿಕ್ಕ ಕಡೆಗಳಲ್ಲಿ ದರೋಡೆ ಸುಲಿಗೆಗೆ ಮುಂದಾಗಿಬಿಟ್ಟಿದ್ದ.

ಈ ಮಧ್ಯೆ, ಒಂದೂವರೆ ವರ್ಷದಿಂದ ಎಸ್ಕೇಪ್ ಆಗಿದ್ದವನು, ಇತ್ತೀಚೆಗೆ ದಿಢೀರನೆ ಬಂದು ಮತ್ತೆ ಕಿಡ್ನಾಪ್ ದಂಧೆಗೆ ಇಳಿದುಬಿಟ್ಟಿದ್ದ. ಕಳೆದ ತಿಂಗಳು ಹರಿ ಪ್ರಸಾದ್ ಎಂಬಾತನ ಕಿಡ್ನಾಪ್ ಮಾಡಿದ್ದ. ಹೋಟೆಲ್ ಬಳಿ ಊಟ ಮಾಡಿ ನಿಂತಿದ್ದಾಗ ಹರಿ ಪ್ರಸಾದ್​​ನನ್ನು ಕಿಡ್ನಾಪ್ ಮಾಡಿ ಸುಲಿಗೆ ಮಾಡಿದ್ದ ಇದೇ ಅಲಿಯಾಸ್​ ಕೆಂಚ. ಹಣ, ಚಿನ್ನ ಸುಲಿಗೆ ಮಾಡಿ ಎಸ್ಕೇಪ್ ಆಗಿದ್ದ. ಪೊಲೀಸರಿಗೆ ಸಿಕ್ಕರೇ ಜೈಲು ಫಿಕ್ಸ್ ಅಂತ ಸಿಕ್ಕ ಸಿಕ್ಕ ಕಡೆ ಫುಲ್ ಟ್ರಿಪ್ ಹೊಡೆಯುತ್ತಿದ್ದ.

Also Read: ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಎರಡೂ ಕಾಲುಗಳನ್ನು ಕಳೆದುಕೊಂಡ ಯುವಕ

ಡೇ ನಲ್ಲಿ ಸಿಕ್ಕ ಸಿಕ್ಕ ಸ್ಥಳಗಳನ್ನು ಸುತ್ತಾಡ್ತಾ ಇದ್ದವ, ರಾತ್ರಿ ಆದ್ರೆ ಕಾರಿನಲ್ಲೇ ಮಲಗಿಬಿಡುತ್ತಿದ್ದ. ಒಂದೂವರೆ ವರ್ಷದಿಂದ ಕಾರಿನಲ್ಲೇ ರಾತ್ರಿ ಕಳೆದಿರೋ ರೌಡಿ ಕೆಂಚ ಲಾಡ್ಜ್ ನಲ್ಲಿ ರೂಂ ಮಾಡಿದ್ರೆ ಪೊಲೀಸರಿಗೆ ಸಿಕ್ಕಿಬೀಳ್ತೀನಿ ಅಂತ ಕಾರಿನಲ್ಲೇ ಮಲಗುತ್ತಿದ್ದ.

ಕೊನೆಗೂ ಯಲಹಂಕ ನ್ಯೂ ಟೌನ್ ಪೊಲೀಸರು ಕೆಂಚನನ್ನು ಎತ್ತಿಹಾಕಿಕೊಂಡುಬಂದಿದ್ದು, ವಿಚಾರಣೆ ಮಾಡ್ತಾ ಇದಾರೆ. ಹಿರಿಯ ಅಧಿಕಾರಿಗಳು ಸದ್ಯಕ್ಕೆ ಎಲ್ಲಾ ಕೇಸ್ ಗಳಲ್ಲಿ ಮಾಹಿತಿ ಕಲೆಹಾಕ್ತಾ ಇದಾರೆ. ಎಲ್ಲಾ ಕೇಸ್ ಗಳ ಮಾಹಿತಿ ಬಂದ‌ ಬಳಿಕ‌ ಗೂಂಡಾ ಆಕ್ಟ್ ಹಾಕಲು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ