ಮುಂಬೈ: ವಾಣಿಜ್ಯ ನಗರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಳೆಯ ವಾರ್ಡ್ ಬಾಯ್ ಆತ. ವಯಸ್ಸು ಇನ್ನೂ 30 ದಾಟಿಲ್ಲ. ಅವನಿಗಿರುವ ರೋಗ ಎಂಥದ್ದು ಅಂದ್ರೆ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಯ ಮೇಲೆ ಕಾಮಮೃಗದಂತೆ ಬೀಳುವುದು.
ಮೊನ್ನೆಯೂ ಹಾಗೆಯೇ ಆಗಿದೆ. ಯುವ ಟ್ರೈನಿ ವೈದ್ಯೆಯೊಬ್ಬರು ಆಸ್ಪತ್ರೆಯಲ್ಲಿ ರೌಂಡ್ಸ್ನಲ್ಲಿದ್ದರು. ಈ ಕಾಮುಕ ವಾರ್ಡ್ ಬಾಯ್ ಅದೆಲ್ಲಿದ್ದನೋ ಆಕೆಯ ಮೇಲೆ ಬಿದ್ದಿದ್ದಾನೆ. ಕಾಮ ಚೇಷ್ಟೆ ಆರಂಭಿಸಿದ್ದಾನೆ. ತಕ್ಷಣ ಎಚ್ಚೆತ್ತ ಆ ವೈದ್ಯೆ ಅದು ಹೇಗೋ ಅವನಿಂದ ತಪ್ಪಿಸಿಕೊಂಡಿದ್ದಾರೆ. ಮುಂದೆ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪೊಲೀಸರು ಆರೋಪಿಯನ್ನು ನೋಡಿದವರೆ.. ಇವನಿಗೆ ಪಾಸ್ಟ್ ಹಿಸ್ಟರಿಯೂ ಇದೆ. ಹೀಗೆ ಅನೇಕ ಬಾರಿ ಮಹಿಳೆಯರ ಮೇಲೆ ಇಂತಹ ಕುಕೃತ್ಯಗಳನ್ನು ಎಸಗಿದ್ದಾನೆ. ಮುಂದೆ ನಾವು ಇವನನ್ನು ವಿಚಾರಿಸಿಕೊಳ್ಳುತ್ತೇವೆ, ಬಿಡಿ ಎಂದಿದ್ದಾರೆ. ಜೊತೆಗೆ ಅವನನ್ನು ಅರೆಸ್ಟ್ ಮಾಡಿ, ಇದೀಗ ಪೊಲೀಸ್ ಟ್ರೀಟ್ಮೆಂಟ್ ಕೊಡ್ತಿದ್ದಾರೆ.
Published On - 11:10 am, Mon, 29 June 20