ಕೊಡಗು: ವಿದ್ಯುತ್ ಬಿಲ್‌ನಲ್ಲಿ ವ್ಯತ್ಯಾಸ, ಬಿಲ್ ಕಲೆಕ್ಟರ್ಗೆ ಚಾಕು ಇರಿತ
ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ ನಂತರ ಹಲವೆಡೆ ವಿದ್ಯುತ್ ದರದಲ್ಲಿ ಭಾರೀ ವ್ಯತ್ಯಾಸಗಳು ಕಂಡುಬರುತ್ತಿವೆ. ಕೆಲವು ಗ್ರಾಹಕರಿಗೆ ಸಾವಿರಾರು ರೂಪಾಯಿ ಬಿಲ್ ಬಂದಿದ್ದು, ಲಕ್ಷಾಂತರ ರೂಪಾಯಿ ಬಿಲ್ ನೀಡಿದ್ದೂ ಇದೆ. ಇದೇ ರೀತಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಕೊಡಗಿನಲ್ಲಿ ಬಿಲ್ ಕಲೆಕ್ಟರ್ಗೆ ಚಾಕು ಇರಿಯಲಾಗಿದೆ.
ಕೊಡಗು: ವಿದ್ಯುತ್ ಬಿಲ್‌ನಲ್ಲಿ ವ್ಯತ್ಯಾಸ ಬಂದ ಹಿನ್ನೆಲೆ ಮಾತಿನ ಚಕಮಕಿ ನಡೆದು ಬಿಲ್ ಕಲೆಕ್ಟರ್ಗೆ ಚಾಕುವಿನಿಂದ ಇರಿದ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರು ಬಾಣೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ ನಂತರ ಹಲವೆಡೆ ವಿದ್ಯುತ್ ದರದಲ್ಲಿ ಭಾರೀ ವ್ಯತ್ಯಾಸಗಳು ಕಂಡುಬರುತ್ತಿವೆ. ಎಷ್ಟರ ಮಟ್ಟಿಗೆ ಬಿಲ್‌ನಲ್ಲಿ ವ್ಯತ್ಯಾಸಗಳು ಬರುತ್ತಿವೆ ಎಂದರೆ ಗ್ರಾಹಕರು ಕೂಡ ದಿಗ್ಭ್ರಮೆಗೊಳ್ಳುತ್ತಿದ್ದಾರೆ. ಕೆಲವರಿಗೆ ನೂರಾರು ರೂಪಾಯಿ, ಇನ್ನು ಕೆಲವರಿಗೆ ಸಾವಿರಾರು ರೂಪಾಯಿ ವ್ಯತ್ಯಾಸಗಳು ಕಂಡುಬಂದಿದ್ದು, ಬಿಲ್ ಕಲೆಕ್ಟರ್ ಲಕ್ಷಾಂತರ ರೂಪಾಯಿ ಬಿಲ್ ನೀಡಿದ್ದೂ ಇದೆ. ಇದೀಗ ಜಂಬೂರು ಬಾಣೆಯಲ್ಲಿ ಬಿಲ್‌ನಲ್ಲಿ ವ್ಯತ್ಯಾಸ ಬಂದಿದೆ ಎಂದು ಗ್ರಾಹಕ ಬಿಲ್ ಕಲೆಕ್ಟರ್ ಜೊತೆ ಮಾತಿಗೆ ಇಳಿದಿದ್ದಾನೆ. ಇದು ತಾರಕಕ್ಕೇರಿ ಬಿಲ್ ಕಲೆಕ್ಟರ್ಗೆ ಚಾಕುವಿನಿಂದ ಇರಿಯಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಬಿಲ್ ಕಲೆಕ್ಟರ್ ಪ್ರಶಾಂತ್ (30) ಎಂಬವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡ ಮಾದಾಪುರ ಠಾಣಾ ಪೊಲೀಸರು ಆರೋಪಿ ರತೀಶ್ (35) ಎಂಬಾತನನ್ನು ಬಂಧಿಸಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ