ರಾಯಚೂರು: ಹುಚ್ಚನಂತೆ ನಟಿಸಿ ಮನೆ ಮುಂದೆ ನಿಂತಿದ್ದ ಬೈಕ್ ಕಳ್ಳತನಕ್ಕೆ ಯತ್ನಿಸಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಪ್ಪ ಬಂಧಿತ ಆರೋಪಿ. ಈತ ಬೈಕ್ಗಳನ್ನು ಕದ್ದು ಹಣ ಮಾಡುತ್ತಿದ್ದ. ರಾಯಚೂರಿನ ನೇತಾಜಿನಗರ ಠಾಣೆ ಪೊಲೀಸರು ದಾಳಿ ನಡೆಸಿ ಬಂಧಿತನಿಂದ 3.40 ಲಕ್ಷ ರೂಪಾಯಿ ಮೌಲ್ಯದ 15 ಬೈಕ್ ಜಪ್ತಿ ಮಾಡಿದ್ದಾರೆ. ರಾಯಚೂರು ನಗರದ ಮಾಣಿಕ್ ಪ್ರಭು ಲೇಔಟ್ನ ವಿದ್ಯಾನಿಧಿ ಕಾಲೇಜು ಬಳಿ ಹುಚ್ಚನಂತೆ ನಟಿಸಿ ಬೈಕ್ ಕಳ್ಳತನ ಮಾಡಲು ಯತ್ನಿಸಿದ್ದಾಗ ಪೊಲೀಸರು ತಾಯಪ್ಪನನ್ನು ವಶಕ್ಕೆ ಪಡೆದಿದ್ದಾರೆ. ನಂತರ ದಾಳಿ ನಡೆಸಿ […]
Follow us on
ರಾಯಚೂರು: ಹುಚ್ಚನಂತೆ ನಟಿಸಿ ಮನೆ ಮುಂದೆ ನಿಂತಿದ್ದ ಬೈಕ್ ಕಳ್ಳತನಕ್ಕೆ ಯತ್ನಿಸಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಪ್ಪ ಬಂಧಿತ ಆರೋಪಿ. ಈತ ಬೈಕ್ಗಳನ್ನು ಕದ್ದು ಹಣ ಮಾಡುತ್ತಿದ್ದ.
ರಾಯಚೂರಿನ ನೇತಾಜಿನಗರ ಠಾಣೆ ಪೊಲೀಸರು ದಾಳಿ ನಡೆಸಿ ಬಂಧಿತನಿಂದ 3.40 ಲಕ್ಷ ರೂಪಾಯಿ ಮೌಲ್ಯದ 15 ಬೈಕ್ ಜಪ್ತಿ ಮಾಡಿದ್ದಾರೆ. ರಾಯಚೂರು ನಗರದ ಮಾಣಿಕ್ ಪ್ರಭು ಲೇಔಟ್ನ ವಿದ್ಯಾನಿಧಿ ಕಾಲೇಜು ಬಳಿ ಹುಚ್ಚನಂತೆ ನಟಿಸಿ ಬೈಕ್ ಕಳ್ಳತನ ಮಾಡಲು ಯತ್ನಿಸಿದ್ದಾಗ ಪೊಲೀಸರು ತಾಯಪ್ಪನನ್ನು ವಶಕ್ಕೆ ಪಡೆದಿದ್ದಾರೆ. ನಂತರ ದಾಳಿ ನಡೆಸಿ ಆತನ ಕದ್ದ ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ.