ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲೇಡಿಸ್ ರೆಸ್ಟ್ ರೂಂ ಲಗ್ಗೆ ಇಟ್ಟು ವಿಡಿಯೋ ಮಾಡಲು ಯತ್ನಿಸಿದ ಆರೋಪಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ಬುದ್ಧಕಾಂತ್ ದೇಬನಾಥ್(30) ಬಂಧಿತ ಆರೋಪಿ.
ಜನವರಿ 26ರ ರಾತ್ರಿ ಗರಡಮಾಲ್ ಬಳಿಯ ಖಾಸಗಿ ರೆಸ್ಟೋರೆಂಟ್ನಲ್ಲಿ ಊಟದ ನಡುವೆ ರೆಸ್ಟ್ ರೂಂಗೆ ಯುವತಿಯೊಬ್ಬರು ರಳಿದ್ದರು. ಈ ವೇಳೆ ಆಕೆಯ ಹಿಂದೆಯೇ ಫಾಲೋ ಮಾಡಿದ್ದ ಆರೋಪಿ, ಬಾತ್ ರೂಂನ ಮೇಲ್ಭಾಗದಲ್ಲಿ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆಂದು ಆರೋಪಿಸಲಾಗಿದೆ. ಇದನ್ನು ಕಂಡ ಯುವತಿ ರೆಸ್ಟೋರೆಂಟ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಆರೋಪಿಯು ಕಳೆದ 6 ತಿಂಗಳಿಂದ ರೆಸ್ಟೋರೆಂಟ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ. ಆ ದಿನ ಮಹಿಳಾ ಸಿಬ್ಬಂದಿ ಇಲ್ಲದ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ನಲ್ಲಿ ಆರೋಪಿಯೇ ಕೆಲಸ ಮಾಡುತ್ತಿದ್ದ. ಹಾಗಾಗಿ ಆತನೇ ಕೃತ್ಯ ಎಸಗಿದ್ದ ಎಂದು ತರ್ಕಿಸಲಾಗಿತ್ತು. ಜೊತೆಗೆ ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿದ್ದ ವೇಳೆ ಟೆಕ್ಕಿಯೊಬ್ಬರು ಆರೋಪಿಯ ಚಲನವಲನವನ್ನುಗಮನಿಸಿದ್ದರು. ಈ ಹಿನ್ನೆಲೆಯಲ್ಲಿ, ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Published On - 9:30 am, Thu, 30 January 20