ನೆಲಮಂಗಲ: ಸ್ವಂತ ಭಾವನಿಂದಲೇ ನಾದಿನಿಯ ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಜರುಗಿದೆ. ಕಳೆದ 15ದಿನಗಳ ಹಿಂದೆ ಶಿರಾ ತಾಲೂಕಿನ ಬಿಜ್ಜನಬೆಳ್ಳ ಮೂಲದ ದೀಪಾ(27) ಕೊಲೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಗುಂಡೇನಹಳ್ಳಿ ಕೆರೆಯ ಬಳಿ ಪೋದೆಯಲ್ಲಿ ಇಂದು ಮೃತದೇಹ ಪತ್ತೆಯಾಗಿದೆ.
ಬೆಂಗಳೂರಿನ ಅಂದ್ರಹಳ್ಳಿಯಿಂದ ಜೂನ್ 10ರಂದು ತನ್ನ ಬೈಕ್ ಜೊತೆ ದೀಪಾ ನಿಗೂಢವಾಗಿ ಕಾಣೆಯಾಗಿದ್ದರು. ದೀಪಾಗೆ ಜೂನ್ 14, 15ರಂದು ಮದುವೆ ನಿಗದಿಯಾಗಿತ್ತು. ಮೃತ ದೀಪಾ ಅಕ್ಕನ ಗಂಡ ಗಿರೀಶ್(30) ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಸದ್ಯ ಮೃತದೇಹವನ್ನ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, CPIಶಿವಣ್ಣ ನೇತೃತ್ವದಲ್ಲಿ ತನಿಖಾ ಕಾರ್ಯ ಆರಂಭವಾಗಿದೆ. ಕೊಲೆ ಆರೋಪಿ ಗಿರೀಶ್ ಪತ್ತೆಯಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Published On - 1:23 pm, Fri, 26 June 20