ಅಕ್ರಮವಾಗಿ ಅಂಬರ್ಗ್ರೀಸ್ ಮಾರುತ್ತಿದ್ದ ಇಬ್ಬರು ಸ್ಮಗ್ಲರ್ಗಳ ಬಂಧನ: ಕೋಟ್ಯಂತರ ರೂ ಮೌಲ್ಯದ ತಿಮಿಂಗಲ ವಾಂತಿ ಜಪ್ತಿ
Chamarajanagar News: ಅಕ್ರಮವಾಗಿ ಅಂಬರ್ಗ್ರೀಸ್ ಮಾರುತ್ತಿದ್ದ ಇಬ್ಬರು ಸ್ಮಗ್ಲರ್ಗಳನ್ನು ಪೊಲೀಸರು ಬಂಧಿಸುವುದರೊಂದಿಗೆ ಕೋಟ್ಯಂತರ ರೂ. ಮೌಲ್ಯದ ಅಂಬರ್ಗ್ರೀಸ್ ಜಪ್ತಿ ಮಾಡಿದ್ದಾರೆ. ತಮಿಳುನಾಡಿನ ಕೊಯಮತ್ತೂರಿಗೆ ಅಕ್ರಮವಾಗಿ ಅಂಬರ್ಗ್ರೀಸ್ ಸಾಗಿಸಲಾಗುತ್ತಿತ್ತು. ಸದ್ಯ ಕೊಳ್ಳೇಗಾಲ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಕೇಸ್ ದಾಖಲಾಗಿದೆ.
ಚಾಮರಾಜನಗರ, ಆಗಸ್ಟ್ 12: ಕೋಟ್ಯಂತರ ರೂ. ಮೌಲ್ಯದ ಅಕ್ರಮವಾಗಿ ಅಂಬರ್ಗ್ರೀಸ್ (ambergris) ಮಾರುತ್ತಿದ್ದ ಇಬ್ಬರು ಸ್ಮಗ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಮೂಲದ ಆನಂದ ದೇವಾಡಿಗ, ಅಪ್ಪಣ್ಣ ನಾಯಕ ಬಂಧಿತರು. 3 ಕೆಜಿ ಅಂಬರ್ಗ್ರೀಸ್ ಅನ್ನು ತಮಿಳುನಾಡಿನ ಕೊಯಮತ್ತೂರಿಗೆ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದರು. ಸದ್ಯ ಬಂಧಿತರಿಂದ 3 ಕೆಜಿ ಅಂಬರ್ಗ್ರೀಸ್, 1 ಕಾರು, 2 ಮೊಬೈಲ್, 7 ಸಾವಿರ ಹಣ ವಶಕ್ಕೆ ಪಡೆಯಲಾಗಿದೆ. ಕೊಳ್ಳೇಗಾಲ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಕೇಸ್ ದಾಖಲಾಗಿದೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು
ಬೆಂಗಳೂರು: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವಂತಹ ಘಟನೆ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುರುವಾರ ರಾತ್ರಿ ಕಿರಣ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ದೂರಿನನ್ವಯ ಹಲಸೂರು ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: ಚಿಕ್ಕಮಗಳೂರು: ಸರ್ಕಾರಿ ಬಸ್ ಡಿಕ್ಕಿ: ಕಾರಿನಲ್ಲಿ ತೆರಳುತ್ತಿದ್ದ ತಾಯಿ, ಮಗ ದುರ್ಮರಣ
ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕಿರಣ್ ಮೃತಪಟ್ಟಿದ್ದಾನೆ. ಬಾರ್ನಲ್ಲಿ ನಡೆದ ಗಲಾಟೆಯಿಂದ ಕಿರಣ್ ಕೊಲೆ ಎಂಬ ಬಗ್ಗೆ ಮಾಹಿತಿ ಇದ್ದು, ಆರೋಪಿಗಳಿಗಾಗಿ ಹಲಸೂರು ಠಾಣೆ ಪೊಲೀಸರಿಂದ ಹುಡುಕಾಟ ಆರಂಭಿಸಲಾಗಿದೆ.
ಲಿವಿಂಗ್ ಟುಗೆದರ್ನಲ್ಲಿ ವ್ಯಕ್ತಿ ಕುಡಿದ ಮತ್ತಿನಲ್ಲಿ ನೇಣಿಗೆ ಶರಣು
ನೆಲಮಂಗಲ: ಲಿವಿಂಗ್ ಟುಗೆದರ್ನಲ್ಲಿದ್ದ ವ್ಯಕ್ತಿ ಕುಡಿದ ಮತ್ತಿನಲ್ಲಿ ನೇಣಿಗೆ ಶರಣಾಗಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗ್ರಾಮದ ಬೈರೆಗೌಡನಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ಚಂದ್ರಪ್ಪ ಲೇಔಟ್ ನಿವಾಸಿ ರಾಜು(30) ಮೃತ ವ್ಯಕ್ತಿ. ಪತಿಯನ್ನ ತೊರೆದಿದ್ದ ನಾಗಶೆಟ್ಟಿಹಳ್ಳಿಯ ಮಮತ ಜೊತೆ ಸಂಬಂಧ ಹೊಂದಿದ್ದರು. ಕಳೆದ 6 ತಿಂಗಳ ಹಿಂದೆ ಬೈರೆಗೌಡನಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದಿದ್ದರು.
ಇದನ್ನೂ ಓದಿ: ದೇಗುಲದಲ್ಲಿ JDS ಮುಖಂಡ ಅಪ್ಪುಗೌಡ ಕೊಲೆಗೆ ಯತ್ನ, ಸಿನಿಮಾ ಸ್ಟೈಲ್ನಲ್ಲಿ ಆರೋಪಿಗಳ ಬೆನ್ನಟ್ಟಿ ವಶಕ್ಕೆ ಪಡೆದ ಪೊಲೀಸ್
ರಾತ್ರಿ ಮದ್ಯದ ನಶೆಯಲ್ಲಿ ಸಣ್ಣಪುಟ್ಟ ಗಲಾಟೆ ನಡೆದಿತ್ತು. ಹಾಗಾಗಿ ಮಮತ ಮನೆಯಿಂದ ಆಚೆ ಬಂದಿದ್ದರು. ಸ್ವಲ್ಪ ಸಮಯದ ಬಳಿಕ ಮನೆಗೆ ತೆರಳಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಗೆ ನೆಲಮಂಗಲ ತಾಲ್ಲೂಕು ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೈಕ್ ಕಳ್ಳನ ಬಂಧನ
ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕಿನ ದಾಬಸ್ಪೇಟೆ ಪೊಲೀಸರಿಂದ ಬೈಕ್ ಕಳ್ಳನನ್ನು ಬಂಧಿಸಲಾಗಿದೆ. ಮಾದೇನಹಳ್ಳಿ ರುದ್ರೇಶ್(37) ಬಂಧಿತ ವ್ಯಕ್ತಿ. ಸದ್ಯ ಆರೋಪಿಯಿಂದ 9 ಲಕ್ಷ ರೂ. ಮೌಲ್ಯದ 12 ಬೈಕ್ಗಳು ಜಪ್ತಿ ಮಾಡಲಾಗಿದೆ. ಆರೋಪಿ ವಿಚಾರಣೆ ವೇಳೆ ದಾಬಸ್ಪೇಟೆ, ನೆಲಮಂಗಲ ಗ್ರಾಮಾಂತರ, ತುಮಕೂರು ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:42 pm, Sat, 12 August 23