ಮಗನ ಬರ್ತಡೇ ಸಂಭ್ರಮದಲ್ಲಿದ್ದ ತಂದೆಯ ಎದೆಗೆ ಚೂರಿ ಇರಿದ ಹಂತಕರು, ಉದ್ಯಮಿ ಕೊಲೆ ಪ್ರಕರಣಕ್ಕೆ ಬಿಗ್ ಟಿಸ್ಟ್

| Updated By: Kiran Hanumant Madar

Updated on: Jul 20, 2023 | 2:50 PM

ಕಳೆದ ರಾತ್ರಿ ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿಯ ಕೃಷ್ಣಾ ಕಾಲೋನಿಯಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣಕ್ಕೆ ಹೊಸ ಟಿಸ್ಟ್ ಸಿಕ್ಕಿದ್ದು, ಉದ್ಯಮಿಯನ್ನ ರಾಜಕೀಯ ದ್ವೇಷದಿಂದ ಆತನ ಮಗನ ಹುಟ್ಟಿದ ದಿನವೇ ಕೊಲೆ ಮಾಡಲಾಗಿದೆ.

ಮಗನ ಬರ್ತಡೇ ಸಂಭ್ರಮದಲ್ಲಿದ್ದ ತಂದೆಯ ಎದೆಗೆ ಚೂರಿ ಇರಿದ ಹಂತಕರು, ಉದ್ಯಮಿ ಕೊಲೆ ಪ್ರಕರಣಕ್ಕೆ ಬಿಗ್ ಟಿಸ್ಟ್
ಮೃತ ವ್ಯಕ್ತಿ
Follow us on

ಬಳ್ಳಾರಿ, ಜು.20: ಕಳೆದ ರಾತ್ರಿ ಬಳ್ಳಾರಿ(Ballari) ಹೊರವಲಯದ ಗುಗ್ಗರಹಟ್ಟಿಯ ಕೃಷ್ಣಾ ಕಾಲೋನಿಯಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ(Murder) ಪ್ರಕರಣಕ್ಕೆ ಬಿಗ್​ ಟಿಸ್ಟ್ ಸಿಕ್ಕಿದ್ದು, ರಾಜಕೀಯ ವೈಷಮ್ಯದಿಂದ ವ್ಯಕ್ತಿಯ ಹತ್ಯೆ ಮಾಡಲಾಗಿರುವುದು ಬೆಳಕಿಗೆ ಬಂದಿದೆ. ಮೃತ ವ್ಯಕ್ತಿ ರಿಯಲ್ ಎಸ್ಟೇಟ್ ಉದ್ಯಮದ ಜೊತೆಗೆ ರಾಜಕೀಯದಲ್ಲೂ ತೊಡಗಿದ್ದ. ಹೌದು ಗಾಲಿ ಜನಾರ್ಧನರೆಡ್ಡಿ(Janardhana Reddy)ಯವರ ನೂತನ ಕೆಆರ್​ಪಿಪಿ ಪಕ್ಷದ ಕಾರ್ಯಕರ್ತನಾಗಿದ್ದ. ನಿನ್ನೆ ಬೈಕ್​ನಲ್ಲಿ ಆಗಮಿಸಿದ್ದ ನಾಲ್ವರು, ಚಾಕು ಮಚ್ಚುಗಳಿಂದ ಹತ್ಯೆ ಮಾಡಿ ಎಸ್ಕೇಪ್​ ಆಗಿದ್ದರು.

ಉದ್ಯಮಿಯನ್ನ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿದ ಆರೋಪ

ಇನ್ನು ಮೃತ ಮೆಹಬೂಬ್ ಬಾಷಾ ಕಳೆದ ಚುನಾವಣೆಯಲ್ಲಿ ಕೆಆರ್​ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ಪರವಾಗಿ ಪ್ರಚಾರ ಮಾಡಿದ್ದ. ಇನ್ನು ಇದೀಗ ಮೆಹಬೂಬ್ ಬಾಷಾರನ್ನ ಕಾಂಗ್ರೆಸ್ ಕಾರ್ಯಕರ್ತರಾದ ಕಾಂಗ್ರೆಸ್ ಮುಖಂಡ ಕೋಳಿ ಅನ್ವರ್, ಅಲ್ತಾಪ್, ಸಿರಾಜ್​ ಸೇರಿ ಹತ್ಯೆ ಮಾಡಿದ್ದಾರೆಂದು ಅರೋಪ ಕೇಳಿಬಂದಿದೆ. ಇನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಬಳ್ಳಾರಿ ಗ್ರಾಮೀಣ ಪೊಲೀಸ ಠಾಣೆ ವ್ಯಾಪಿಯಲ್ಲಿ ನಡೆದಿದೆ.

ಇದನ್ನೂ ಓದಿ:ಭೂ ಉದ್ಯಮಿ ಕೊಲೆ ಪ್ರಕರಣ: ಮಗನಿಂದಲೇ ಅಪ್ಪನ ಕಿಡ್ನಾಪ್​ & ಮರ್ಡರ್​

ಮಗನ ಬರ್ತಡೇ ಸಂಭ್ರಮದಲ್ಲಿದ್ದ ತಂದೆಯ ಎದೆಗೆ ಚೂರಿ ಇರಿದ ಹಂತಕರು

ಹೌದು 6 ವರ್ಷದ ಪುತ್ರ ಸಾನಿಯಾ ನಿಜಾಮ್ ಬರ್ತಡೇ ಸಂಭ್ರಮದಲ್ಲಿದ್ದ ಮೃತ ಉದ್ಯಮಿ ಕೇಕ್ ತಂದಿದ್ದ. ಇನ್ನೇನು ಕೇಕ್​ ಕತ್ತರಿಸಬೇಕೆನ್ನುವ ವೇಳೆಗೆ ಮನೆ ಬಾಗಿಲ ಬಳಿಯಿದ್ದ ಹಂತಕರನ್ನ ಮಾತನಾಡಿಸಲು ಹೋಗಿದ್ದಾರೆ. ಈ ವೇಳೆ ಎದೆಗೆ ಸೇರಿ ದೇಹದ ವಿವಿಧ ಭಾಗಗಳಿಗೆ ಚಾಕು ಇರಿದು ಹತ್ಯೆ ಮಾಡಿದ್ದಾರೆ.

ಮೆಹಬೂಬ್ ಬಾಷಾ ಕೊಲೆ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ ಶಾಸಕ ಜನಾರ್ದನರೆಡ್ಡಿ

ಇನ್ನು ನಮ್ಮ ಪಕ್ಷದ ಕಾರ್ಯಕರ್ತ ಮೆಹಬೂಬ್ ಬಾಷಾ ಎಂಬುವವರನ್ನ ರಾಜಕೀಯ ವೈಷಮ್ಯದಿಂದ ಕೊಲೆ ಮಾಡಿದ್ದು, ಸೂಕ್ತ ತನಿಖೆ ನಡೆಸುವಂತೆ ಸದನದಲ್ಲಿ ರೆಡ್ಡಿ ಪ್ರಸ್ತಾಪ ಮಾಡಿದ್ದಾರೆ. ‘ನಮ್ಮ ಪಕ್ಷದ ನಿಷ್ಟವಂತಾ ಕಾರ್ಯಕರ್ತ, ಅವನನ್ನ ಕಾಂಗ್ರೆಸ್ ಕಾರ್ಯಕರ್ತರು ಕೊಲೆ ಮಾಡಿದ್ದಾರೆ. ಈಗಾಗಲೇ ಹಂತಕರನ್ನ ಬಂಧಿಸಿದ್ದಾರೆ ಎನ್ನುವ ಮಾಹಿತಿ ಬಂದಿದ್ದು, ರಾಜಕೀಯ ದ್ವೇಷದಿಂದ ಕೊಲೆ ಮಾಡಲಾಗಿದೆ. 20 ವರ್ಷಗಳ ನಂತರ ಮತ್ತೆ ಬಳ್ಳಾರಿಯಲ್ಲಿ ಈ ರೀತಿ ಕೊಲೆಯಾಗಿದೆ. ಹಂತಕರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದರು.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Thu, 20 July 23