4400 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಟ್ವಿಟ್ಟರ್ (Twitter) ಖರೀದಿ ವ್ಯವಹಾರಕ್ಕೆ ತಾತ್ಕಾಲಿಕವಾಗಿ ತಡೆ ಬಿದ್ದಿದೆ. ಇದನ್ನು ಸ್ವತಃ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಇದು ಅವರೇ ಅ್ಈಟ್ ಮಾಡಿರುವಂತೆ ತಾತ್ಕಾಲಿಕವಾದ ತಡೆ. ಟ್ವಿಟ್ಟರ್ ಇಂಕ್ನಿಂದ ಇನ್ನೊಂದಿಷ್ಟು ಮಾಹಿತಿ ಬಾಕಿ ಇದೆ ಹಾಗೂ ನಕಲಿ ಖಾತೆಗಳ ಬಗ್ಗೆ ಕೂಡ ವಿವರ ನೀಡಬೇಕಾಗಿದೆ. ಆ ಹಿನ್ನೆಲೆಯಿಂದ ವ್ಯವಹಾರಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ತಮ್ಮ ಟ್ವೀಟ್ನಲ್ಲಿ ಮಸ್ಕ್, ಟ್ವಿಟ್ಟರ್ ವ್ಯವಹಾರಕ್ಕೆ ತಾತ್ಕಾಲಿಕವಾಗಿ ತಡೆ ಹಾಕಲಾಗಿದೆ. ಸ್ಪಾಮ್/ನಕಲಿ ಖಾತೆಗಳು ಶೇ 5ಕ್ಕಿಂತ ಕಡಿಮೆ ಇರುವುದಕ್ಕೆ ಸಂಬಂಧಿಸಿದ ಲೆಕ್ಕಾಚಾರಕ್ಕೆ ಬಾಕಿ ಇರುವ ಮಾಹಿತಿ ಕೈ ಸೇರಬೇಕಿದೆ ಎಂದು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಫೈಲಿಂಗ್ನಲ್ಲಿ, ಮೊದಲ ತ್ರೈಮಾಸಿಕದ ಲೆಕ್ಕಾಚಾರದ ಪ್ರಕಾರ ನಿತ್ಯ ಹಣ ಗಳಿಸಬಹುದಾದ ಸಕ್ರಿಯ ಬಳಕೆದಾರರ ಪೈಕಿ ಶೇ 5ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪಾಮ್ ಖಾತೆಗಳು ಎಂದು ಟ್ವಿಟ್ಟರ್ ಹೇಳಿತ್ತು.
ಮಸ್ಕ್ ಜತೆಗೆ ವ್ಯವಹಾರ ಅಂತಿಮ ಆಗುವ ತನಕ ಹಲವು ಅಪಾಯಗಳನ್ನು ಎದುರಿಸಿರುವುದಾಗಿ ಟ್ವಿಟ್ಟರ್ ತನ್ನ ಫೈಲಿಂಗ್ನಲ್ಲಿ ತಿಳಿಸಿದೆ. ಟ್ವಿಟ್ಟರ್ ಮೇಲೆ ಜಾಹೀರಾತುದಾರರು ಖರ್ಚು ಮಾಡುತ್ತಾರೆಯೇ, ಭವಿಷ್ಯದ ಯೋಜನೆ ಹಾಗೂ ಕಾರ್ಯತಂತ್ರ ಇಂಥ ವಿಚಾರಗಳಲ್ಲಿ ಚಿಂತೆ ಇದ್ದುದಾಗಿ ಹೇಳಿಕೊಂಡಿದೆ. ಇನ್ನು ಉದ್ಯೋಗಿಗಳಿಗೆ ಟ್ವಿಟ್ಟರ್ ಸಿಇಒ ಪರಾಗ್ ಕಳಿಸಿರುವ ಸುತ್ತೋಲೆಯಲ್ಲಿ, ಕಂಪೆನಿಯ ಇಬ್ಬರು ಹಿರಿಯ ನಾಯಕತ್ವ ಸ್ಥಾನದಲ್ಲಿದ್ದವರನ್ನು ಕೆಲಸದಿಂದ ತೆಗೆದಿರುವುದಾಗಿ ಹೇಳಿದ್ದಾರೆ. ಅವರು ಗ್ರಾಹಕ ಮತ್ತು ಆದಾಯವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು ಎಂದಿದ್ದಾರೆ. ತಾನು ಖರೀದಿ ಮಾಡುವುದಾಗಿ ಮಸ್ಕ್ ಘೋಷಣೆ ಮಾಡಿದ ನಂತರ ಟ್ವಿಟ್ಟರ್ನಲ್ಲಿ ಕಾಣಿಸಿಕೊಂಡ ಅತಿ ದೊಡ್ಡ ತಲ್ಲಣ ಇದು.
ಟ್ವಿಟ್ಟರ್ನಿಂದ 2023ರ ಕೊನೆಯ ಹೊತ್ತಿಗೆ 750 ಕೋಟಿ ಯುಎಸ್ಟಿ ವಾರ್ಷಿಕ ಆದಾಯ ಮತ್ತು ಪ್ರತಿ ನಿತ್ಯ 31.5 ಕೋಟಿ ಬಳಕೆದಾರರನ್ನು ಪಡೆಯುವ ಗುರಿ ಇತ್ತು. ಆದರೆ ಈಚಿನ ಗಳಿಕೆ ವರದಿಯಲ್ಲಿ ಆ ಗುರಿಯನ್ನು ಹಿಂಪಡೆಯಲಾಗಿದೆ. ಇನ್ನು ಅಗರ್ವಾರ್ ಮಾತನಾಡಿ, ಟ್ವಿಟ್ಟರ್ನಿಂದ ಬಹುತೇಕ ನೇಮಕಾತಿ ನಿಲ್ಲಿಸಲಾಗುವುದು ಮತ್ತು ಈಗಿನ ಉದ್ಯೋಗಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಈ ಪೈಕಿ ಯಾವುದನ್ನು ಹಿಂಪಡೆಯಬಹುದು ಎಂದು ಚಿಂತನೆ ನಡೆಸಲಾಗುವುದು ಎಂದಿದ್ದಾರೆ.
ಅಂದಹಾಗೆ, ಟ್ವಿಟ್ಟರ್ ಖರೀದಿ ವ್ಯವಹಾರದಿಂದ ಎಲಾನ್ ಮಸ್ಕ್ ಹಿಂದಕ್ಕೆ ಸರಿದರೆ ರದ್ದತಿ ಶುಲ್ಕವಾಗಿ ಟ್ವಿಟ್ಟರ್ ಕಂಪೆನಿಗೆ 100 ಕೋಟಿ ಅಮೆರಿಕನ್ ಡಾಲರ್ ಕಟ್ಟಿ ಕೊಡಬೇಕಾಗುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Donald Trump: ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್: ಎಲಾನ್ ಮಸ್ಕ್ ಘೋಷಣೆ
Published On - 4:18 pm, Fri, 13 May 22