Post Office FD Scheme: ಪೋಸ್ಟ್ ಆಫೀಸ್​ನಲ್ಲಿರುವ ಈ ಯೋಜನೆಗಳ ಬಗ್ಗೆ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ ಮಾಹಿತಿ

|

Updated on: Mar 19, 2023 | 8:15 PM

ಅಂಚೆ ಇಲಾಖೆ ಠೇವಣಿ ಯೋಜನೆ: ನೀವು ಪೋಸ್ಟ್ ಆಫೀಸ್​ನ (Post Office) ಕೆಲವು ಯೋಜನೆಗಳನ್ನು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ಅನ್ನು ಮರೆತೇ ಬಿಡುತ್ತೀರಿ. ಅಂಥಹ ಅತ್ಯುತ್ತಮ ಸ್ಕೀಮ್ ಪೋಸ್ಟ್ ಆಫೀಸ್​ನಲ್ಲಿದೆ.

Post Office FD Scheme: ಪೋಸ್ಟ್ ಆಫೀಸ್​ನಲ್ಲಿರುವ ಈ ಯೋಜನೆಗಳ ಬಗ್ಗೆ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ ಮಾಹಿತಿ
Post Office
Follow us on

ಸ್ಟಾಕ್ ಮಾರ್ಕೆಟ್ (Stock Market) ಯಾವಾಗಲು ಏರಿಳಿತ ಕಾಣುತ್ತಲೇ ಇರುತ್ತದೆ. ಹೀಗಾಗಿ ಅನೇಕರು ಮಾರ್ಕೆಟ್​ನಲ್ಲಿ ಹಣ ಹೂಡಿಕೆ ಮಾಡಲು ಮುಂದಾಗುವುದಿಲ್ಲ. ಆದರೆ, ನೀವು ಪೋಸ್ಟ್ ಆಫೀಸ್​ನ (Post Office) ಕೆಲವು ಯೋಜನೆಗಳನ್ನು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ಅನ್ನು ಮರೆತೇ ಬಿಡುತ್ತೀರಿ. ಅಂಥಹ ಅತ್ಯುತ್ತಮ ಸ್ಕೀಮ್ ಪೋಸ್ಟ್ ಆಫೀಸ್​ನಲ್ಲಿದೆ. ಸಣ್ಣ ಮೊತ್ತದಿಂದ ಪ್ರಾರಂಭಿಸಿ ಅಧಿಕ ಹಣ ಮರಳಿ ಪಡೆಯುವಂತಹ ಅನೇಕ ಪ್ಲಾನ್​ಗಳು ಇದರಲ್ಲಿದೆ. ಇಲ್ಲಿ ಪೋಸ್ಟ್​ ಆಫೀಸ್​ನ ಮೂರು ಮುಖ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆ (RD), ಪೋಸ್ಟ್ ಆಫೀಸ್ ಸಮಯದ ಠೇವಣಿ ಖಾತೆ (POTD) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC).

ಮರುಕಳಿಸುವ ಠೇವಣಿ ಯೋಜನೆ:

ಮರುಕಳಿಸುವ ಠೇವಣಿ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿಲ್ಲದಿರುವುದರಿಂದ, ಇದು ಅಪಾಯಮುಕ್ತವಾಗಿದೆ. ಹೀಗಾಗಿ ಯಾರು ಬೇಕಾದರು ಧೈರ್ಯದಿಂದ ಈ ಯೋಜನೆಯನ್ನು ಆರಿಸಿಕೊಳ್ಳಬಹುದು. ಈ ಯೋಜನೆಗೆ ನಿಯಮಿತ ಮಧ್ಯಂತರದಲ್ಲಿ ಖಾತೆಗೆ ನಿಶ್ಚಿತ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ, ಇದಕ್ಕಾಗಿ ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಗ್ರಹಿಸಲಾಗುತ್ತದೆ. ತಮ್ಮ ಹೂಡಿಕೆಯ ಮೇಲಿನ ಭದ್ರತೆ ಇಷ್ಟಪಡುವ ಮತ್ತು ಸ್ಥಿರವಾದ ಹಣವನ್ನು ಬಡ್ಡಿಯಾಗಿ ಗಳಿಸಲು ಬಯಸುವ ಹೂಡಿಕೆದಾರರಿಗೆ, ಪೋಸ್ಟ್ ಆಫೀಸ್ ಆರ್‌ಡಿ ಸೂಕ್ತ ಹೂಡಿಕೆಯಾಗಿದೆ. ಇದಲ್ಲದೆ, ಈ ಯೋಜನೆಯು ಜನರಿಗೆ ನಿಗದಿತ ಮೊತ್ತ ಗಳಿಸಲು ಮತ್ತು ಕಾಲಾನಂತರದಲ್ಲಿ ಉತ್ಪಾದಿಸಲು ಮತ್ತು ಸ್ಥಿರ ಆದಾಯ ಗಳಿಸಲು ಸಹ ಪ್ರಯೋಜನಕಾರಿಯಾಗಿದೆ. ಇದರ ಮೇಲೆ ಸದ್ಯ 5.8% ಬಡ್ಡಿದರವನ್ನು ನೀಡಲಾಗುತ್ತದೆ. ಇದು ಜನರ ಉನ್ನತ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ.

PPF Account: ಪಿಪಿಎಫ್​ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸುವುದು ಹೇಗೆ?

ಇದನ್ನೂ ಓದಿ
ಅಬ್ಬಬ್ಬಾ..! ಈ ಬ್ಯಾಂಕ್​ನ ಎಫ್​ಡಿಗಳಿಗೆ ಸಿಗುತ್ತದೆ ಬರೋಬ್ಬರಿ ಶೇ. 9.50 ರವರೆಗೆ ಬಡ್ಡಿ; ಇದರ ಮುಂದೆ ಯಾವ ಸ್ಕೀಮೂ ಡಮ್ಮಿ
Economic Crisis: ಫೋರೆಕ್ಸ್ ರಿಸರ್ವ್ ಮತ್ತೆ ಕುಸಿತ; ವಿನಾಶದತ್ತ ಆರ್ಥಿಕತೆ- ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ
Aditya Vision: ಮೂರೇ ವರ್ಷದಲ್ಲಿ 1ಲಕ್ಷ ರೂ 83 ಲಕ್ಷ ಆಯ್ತು; ಕೋಟ್ಯಾಧಿಪತಿಗಳಾದರು ಆದಿತ್ಯ ವಿಶನ್ ಷೇರುದಾರರು
Unlimited 5G: 4ಜಿ ಬೆಲೆಗೆ ಏರ್​ಟೆಲ್ ಅನ್​ಲಿಮಿಟೆಡ್ 5ಜಿ; ಭರ್ಜರಿ ಆಫರ್ ಪಡೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಪೋಸ್ಟ್ ಆಫೀಸ್ ಸಮಯದ ಠೇವಣಿ ಖಾತೆ:

ಹೆಸರೇ ಸೂಚಿಸುವಂತೆ ಇದು ಸಮಯದ ಠೇವಣಿ ಖಾತೆ. ಈ ಯೋಜನೆ ಅಡಿಯಲ್ಲಿ ನೀವು ಒಂದು, ಎರಡು, ಮೂರು ಅಥವಾ ಐದು ವರ್ಷಕ್ಕೆಂದು ಹಣವನ್ನು ಠೇವಣಿ ಮಾಡಬಹುದು. ಒಂದು, ಎರಡು ಮತ್ತು ಮೂರು ವರ್ಷಕ್ಕೆ ಎಂದಾದರೆ ಇದರಲ್ಲಿ 5.5% ಬಡ್ಡಿ ದರವನ್ನು ನೀಡಲಾಗುತ್ತಿದೆ. ನೀವು ಉತ್ತಮ ರಿಟರ್ನ್ ಅನ್ನು ಎದುರು ನೋಡುತ್ತಿದ್ದರೆ ಹಣವನ್ನು ಐದು ವರ್ಷಕ್ಕೆ ಡೆಪಾಸಿಟ್ ಮಾಡಬೇಕು. ಹೀಗಾದಲ್ಲಿ 6.7% ಬಡ್ಡಿ ದರ ಸಿಗುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ:

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಐದು ವರ್ಷದ್ದಾಗಿದೆ. 6.8% ಬಡ್ಡಿದರಲ್ಲಿ ನಿಮಗೆ ರಿಟರ್ನ್ ಸಿಗುತ್ತದೆ. ಇದರಲ್ಲಿ ಎಷ್ಟು ಬೇಕಾದರೂ ಹಣವನ್ನು ನೀವು ಹೂಡಿಕೆ ಮಾಡಬಹುದು. ಆದರೆ, ಈ ಯೋಜನೆ ಅಡಿಯಲ್ಲಿ ನಿಮಗೆ ಹಣವನ್ನು ಮಧ್ಯದಲ್ಲಿ ಅಗತ್ಯವಿದ್ದರೆ ತೆಗೆಯಲು ಸಾಧ್ಯವಿಲ್ಲ. ಪೂರ್ಣ ಐದು ವರ್ಷ ಆದ ನಂತರವ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ