ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ಗಳಲ್ಲಿ ಅಮೃತ್ ಕಳಶ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ (SBI Amrit Kalash Special FD Scheme) ಬಹಳ ಮಂದಿಯ ಗಮನ ಸೆಳೆದಿದೆ. 2023ರ ಏಪ್ರಿಲ್ 12ರಂದು ಎಸ್ಬಿಐ ಈ ಪ್ಲಾನ್ ಅನ್ನು ಘೋಷಿಸಿತ್ತು. ಮಾರ್ಚ್ವರೆಗೂ ಈ ಸ್ಕೀಮ್ ಪಡೆಯಲು ಕೊನೆಯ ದಿನವಾಗಿತ್ತು. ಆ ಬಳಿಕ ಸತತವಾಗಿ ಇದರ ಗಡುವನ್ನು ವಿಸ್ತರಿಸುತ್ತಲೇ ಬರಲಾಗಿದೆ. ಇದೀಗ ಆಗಸ್ಟ್ 15ರವರೆಗೂ ಎಸ್ಬಿಐನ ಅಮೃತ್ ಕಳಶ್ ಎಫ್ಡಿ ಸ್ಕೀಮ್ ಪಡೆಯುವ ಅವಕಾಶ ಇದೆ. ಎಸ್ಬಿಐನ ಎನ್ಆರ್ಐ ಗ್ರಾಹಕರಿಗೂ ಕೂಡ ಈ ಸ್ಕೀಮ್ ಲಭ್ಯ ಇರುತ್ತದೆ.
ಅಮೃತ್ ಕಳಶ್ ಸ್ಕೀಮ್ ಎಸ್ಬಿಐನ ಒಂದು ಫಿಕ್ಸೆಡ್ ಡೆಪಾಸಿಟ್ ಪ್ಲಾನ್. ಅದರ ಹಲವು ಅವಧಿ ಠೇವಣಿಗಳಲ್ಲಿ ಇದೂ ಒಂದು. ಇದರ ವಿಶೇಷತೆ ಎಂದರೆ ಇದರ ಡೆಪಾಸಿಟ್ ಅವಧಿ 400 ದಿನವೆಂದು ನಿಗದಿಯಾಗಿದೆ. ಅಂತೆಯೇ ಇದು ವಿಶೇಷ ಅವಧಿ ಠೇವಣಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 400 ದಿನಗಳ ಅಮೃತ್ ಕಳಶ್ ಎಫ್ಡಿ ಸ್ಕೀಮ್ನಲ್ಲಿ ಗರಿಷ್ಠ ಬಡ್ಡಿ ಕೊಡುತ್ತದೆ. ಮಾಮೂಲಿಯ ಗ್ರಾಹಕರಿಗೆ ಶೇ. 7.1ರಷ್ಟು ವಾರ್ಷಿಕ ಬಡ್ಡಿ ಇರುತ್ತದೆ. ಹಿರಿಯ ನಾಗರಿಕರಿಗೆ ಅರ್ಧಪ್ರತಿಶತದಷ್ಟು ಹೆಚ್ಚು ಬಡ್ಡಿಸಿಗುತ್ತದೆ. ಅಂದರೆ ಸೀನಿಯರ್ ಸಿಟಿಜನ್ಸ್ಗೆ ಸಿಗುವ ಬಡ್ಡಿ ಶೇ. 7.6ರಷ್ಟಿರುತ್ತದೆ.
ಇದನ್ನೂ ಓದಿ: ಬಲಿಷ್ಠ ಬ್ಯಾಂಕ್; ಲಾಭದ ಓಟದಲ್ಲಿ ರಿಲಾಯನ್ಸ್ ಸಾಮ್ರಾಜ್ಯವನ್ನೇ ಹಿಂದಿಕ್ಕಿದ ಎಸ್ಬಿಐ; ಎರಡು ದಶಕಗಳಲ್ಲಿ ಇದು ಎರಡನೇ ಸಲ
ಎಸ್ಬಿಐನ 400 ದಿನಗಳ ಅಮೃತ್ ಕಳಶ್ ಸ್ಕೀಮ್ನಲ್ಲಿ ಗ್ರಾಹಕರಿಗೆ ಸಿಗುವ ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಇನ್ನು, ಬಡ್ಡಿ ಹಣವನ್ನು ಠೇವಣಿಯಲ್ಲೇ ಮುಂದುವರಿಸುವ ಬದಲು ಗ್ರಾಹಕ ಖಾತೆಗೆ ವರ್ಗಾಯಿಸಲಾಗುತ್ತದೆ. ಮಾಸಿಕವಾಗಿಯಾದರೂ ಬಡ್ಡಿಹಣ ಪಡೆಯಬಹುದು. ಅಥವಾ ಮೂರು ತಿಂಗಳಿಗೊಮ್ಮೆಯೋ ಅಥವಾ ಅರ್ಧ ವರ್ಷಕ್ಕೆ ಒಮ್ಮೆಯೋ ಬಡ್ಡಿಹಣವನ್ನು ಪಡೆಯುವ ಅವಕಾಶ ಗ್ರಾಹಕರಿಗೆ ಇರುತ್ತದೆ. ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತವಾದರೂ ಆ ಹಣವನ್ನು ಐಟಿ ರಿಟರ್ನ್ ಸಲ್ಲಿಸುವ ವೇಳೆ ಡಿಡಕ್ಷನ್ ಕ್ಲೈಮ್ ಮಾಡಬಹುದು.
ಇದನ್ನೂ ಓದಿ: ದಿನಕ್ಕೆ 87 ರೂ ಹೂಡಿಕೆ ಮಾಡಿ, 11 ಲಕ್ಷ ರೂ ಪಡೆಯಿರಿ; ಇದು ಆಧಾರ್ ಶಿಲಾ ಎಲ್ಐಸಿ ಪ್ಲಾನ್ ಗಮ್ಮತ್ತು
ಅಮೃತ್ ಕಳಶ್ ಎಫ್ಡಿ ಸ್ಕೀಮ್ನಲ್ಲಿ ನೀವು ಠೇವಣಿ ಇಡುವ ಹಣ 2 ಕೋಟಿ ರೂ ಒಳಗೆ ಇರಬೇಕು. ಈ ಠೇವಣಿ ಮೇಲೆ ನೀವು ಸಾಲ ಕೂಡ ಪಡೆಯಬಹುದು. ಈ ಸ್ಕೀಮ್ನಲ್ಲಿ ಎಫ್ಡಿ ತೆರೆಯಲು ಆಗಸ್ಟ್ 15ರವರೆಗೂ ಕಾಲಾವಕಾಶ ಇದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗೆ ಹೋಗಿ ನೀವು ಅಮೃತ್ ಕಳಶ್ ಎಫ್ಡಿ ತೆರೆಯಬಹುದು. ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಎಸ್ಬಿಐ ಯೋನೋ ಆ್ಯಪ್ನಲ್ಲೂ ಈ ಎಫ್ಡಿ ತೆರೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Wed, 9 August 23