₹ 500 ಕೋಟಿಗೂ ಹೆಚ್ಚು ಗಳಿಸಿದ ಭಾರತೀಯ ಚಿತ್ರಗಳು
Box Office: 500 ಕೋಟಿ ರೂಗಳಿಗೂ ಹೆಚ್ಚು ಮೊತ್ತ ಬಾಚಿಕೊಂಡ ಭಾರತದ ಚಿತ್ರಗಳಿವು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫರ್ ಮಾಡಿರುವ ಸ್ಪೆಷಲ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಆದ ಅಮೃತ್ ಕಳಶ್ ಯೋಜನೆಯ (SBI Amrit Kalash FD Scheme) ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಎಸ್ಬಿಐ ಅಮೃತ್ ಕಳಶ್ ಎಫ್ಡಿ ಸ್ಕೀಮ್ ಅನ್ನು ಪಡೆಯಲು ಡಿಸೆಂಬರ್ 31ರವರೆಗೂ ಅವಕಾಶ ಕೊಡಲಾಗಿದೆ. ಎಸ್ಬಿಐನ ಎಫ್ಡಿ ಪ್ಲಾನ್ಗಳಲ್ಲಿ ಗರಿಷ್ಠ ಬಡ್ಡಿ ಕೊಡುತ್ತದೆ ಅಮೃತ್ ಕಳಶ್ ಸ್ಕೀಮ್. 2023ರ ಫೆಬ್ರುವರಿ 15ರಂದು ಆರಂಭವಾದ ಎಸ್ಬಿಐನ ಈ ವಿಶೇಷ ನಿಶ್ಚಿತ ಠೇವಣಿ ಯೋಜನೆಯ ಡೆಡ್ಲೈನ್ ಹಲವು ಬಾರಿ ವಿಸ್ತರಣೆ ಆಗಿರುವುದು ವಿಶೇಷ. ಈ ಸ್ಕೀಮ್ನಲ್ಲಿ ಗರಿಷ್ಠ ಶೇ. 7.6ರಷ್ಟು ಬಡ್ಡಿ ಸಿಗುತ್ತದೆ.
ಈ ವಿಶೇಷ ನಿಶ್ಚಿತ ಠೇವಣಿ ಯೋಜನೆ 400 ದಿನಗಳ ಅವಧಿಯದ್ದಾಗಿದೆ. ಸಾಮಾನ್ಯ ಎಸ್ಬಿಐ ಗ್ರಾಹಕರ ಈ ಠೇವಣಿಗಳಿಗೆ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಾದರೆ ಶೇ. 7.6ರಷ್ಟು ಬಡ್ಡಿ ಸಿಗುತ್ತದೆ. 2023ರ ಏಪ್ರಿಲ್ 12ರಿಂದ ಈ ಸ್ಕೀಮ್ ಜಾರಿಯಲ್ಲಿದೆ. ಈಗ ಡಿಸೆಂಬರ್ 31ರವರೆಗೂ ಈ ಸ್ಕೀಮ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಎಸ್ಬಿಐ ಗ್ರಾಹಕರು ಹೊಸದಾಗಿ ಈ ಸ್ಕೀಮ್ನಲ್ಲಿ ಎಫ್ಡಿ ಇಡಬಹುದು. ಅಥವಾ ಈಗಾಗಲೇ ಬೇರೆ ಅವಧಿಗೆ ಠೇವಣಿ ಇಟ್ಟಿದ್ದು ಅದರ ರಿನಿವಲ್ ಮಾಡಬೇಕಾದಾಗ ಅಮೃತ್ ಕಳಶ್ ಸ್ಕೀಮ್ ಪಡೆಯಬಹುದು.
ಇದನ್ನೂ ಓದಿ: RBI UDGAM Portal: ಬ್ಯಾಂಕುಗಳಲ್ಲಿ ನಿಮ್ಮ ಅನ್ಕ್ಲೈಮ್ಡ್ ಡೆಪಾಸಿಟ್ ಹುಡುಕಲು ಆರ್ಬಿಐನಿಂದ ಉಡ್ಗಮ್; ಈ ಪೋರ್ಟಲ್ ಬಳಕೆ ಹೇಗೆ?
ಕುತೂಹಲವೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ ವಿವಿಧ ಅವಧಿ ಠೇವಣಿಗಳ ಪೈಕಿ ಅಮೃತ್ ಕಳಶ್ನಲ್ಲಿ ಗರಿಷ್ಠ ಬಡ್ಡಿ ಸಿಗುತ್ತದೆ. ಇದು ಬಿಟ್ಟರೆ ಹಿರಿಯ ನಾಗರಿಕರಿಗೆ ಎಸ್ಬಿಐ ನೀಡುವ ಗರಿಷ್ಠ ಬಡ್ಡಿ ದರ ಶೇ 7.5 ಮಾತ್ರ.
ಸಾಮಾನ್ಯ ಗ್ರಾಹಕರ 2ರಿಂದ 3 ವರ್ಷದ ಅವಧಿಯ ಠೇವಣಿಗೆ ಎಸ್ಬಿಐ ಶೇ. 7ರಷ್ಟು ಬಡ್ಡಿ ನೀಡಿದರೆ, ಹಿರಿಯ ನಾಗರಿಕರಿಗೆ ಶೇ. 7.5ರಷ್ಟು ಇಂಟರೆಸ್ಟ್ ರೇಟ್ ಆಫರ್ ಮಾಡುತ್ತದೆ. ಆದರೆ, 400 ದಿನ, ಅಂದರೆ ಒಂದು ವರ್ಷದ ಮೇಲೆ 35 ದಿನದ ಅವಧಿ ಠೇವಣಿಗೆ 10 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ದೊರೆಯುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ