ಆರ್ಥಿಕ ಹಿಂಜರಿತವಾದರೆ ಷೇರುಮಾರುಕಟ್ಟೆಗೆ ಏನಾಗುತ್ತೆ? ಷೇರುಪೇಟೆ ಕುಸಿದರೂ ನಿಮ್ಮ ಹೂಡಿಕೆ ಹಣ ಭದ್ರವಾಗಿಸುವುದು ಹೇಗೆ?

Why Indian Share Market Undeterred by Recession: ಜಾಗತಿಕವಾಗಿ ಆರ್ಥಿಕತೆ ನಿರೀಕ್ಷಿದಷ್ಟು ಮಟ್ಟಕ್ಕೆ ಬೆಳೆಯುವುದಿಲ್ಲ ಎಂದು ಹಲವು ರೇಟಿಂಗ್ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಈ ಆರ್ಥಿಕ ಹಿಂಜರಿತದ ಪರಿಣಾಮ ಷೇರುಮಾರುಕಟ್ಟೆಯ ಮೇಲೆ ಹೇಗೆ ಆಗುತ್ತದೆ ಎಂಬುದು ಸಂದಿಗ್ಧದ ಪ್ರಶ್ನೆ. ಆರ್ಥಿಕ ಹಿಂಜರಿತದ ನಡುವೆಯೂ ಲಾಭ ತರುವ ಷೇರುಗಳ ಪೋರ್ಟ್​ಫೋಲಿಯೋ ಸೃಷ್ಟಿಸುವುದು ನಿಜಕ್ಕೂ ಕಷ್ಟಕರ ಕೆಲಸ.

Important Highlight‌
ಆರ್ಥಿಕ ಹಿಂಜರಿತವಾದರೆ ಷೇರುಮಾರುಕಟ್ಟೆಗೆ ಏನಾಗುತ್ತೆ? ಷೇರುಪೇಟೆ ಕುಸಿದರೂ ನಿಮ್ಮ ಹೂಡಿಕೆ ಹಣ ಭದ್ರವಾಗಿಸುವುದು ಹೇಗೆ?
ಷೇರುಮಾರುಕಟ್ಟೆ
Follow us
TV9 Digital Desk
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Aug 09, 2023 | 4:44 PM

ಡಬ್ಲ್ಯುಟಿಒದಿಂದ ವರ್ಲ್ಡ್ ಬ್ಯಾಂಕ್​ವರೆಗೆ ಹಲವಾರು ಸಂಸ್ಥೆಗಳು ಆರ್ಥಿಕ ಹಿಂಜರಿತದ (World Economic Recession) ಭವಿಷ್ಯ ನುಡಿದಿವೆ. ಐಎಂಎಫ್ ಪ್ರಕಾರ, ಆರ್ಥಿಕ ಹಿಂಜರಿತದ ಪರಿಣಾಮ ಸುಮಾರು 4 ಟ್ರಿಲಿಯನ್ ಡಾಲರ್​ಗಳಿಗೆ ಸಮಾನಾಗಿರಲಿದೆ. ಈಗಿರುವ ಪ್ರಶ್ನೆಗಳೆಂದರೆ ಈ ಆರ್ಥಿಕ ಹಿಂಜರಿತದ ಪರಿಣಾಮ ಭಾರತದ ಮೇಲೆ ಹೇಗಿರಲಿದೆ? ಹಿಂಜರಿತದ ಸಮಯದಲ್ಲಿ ಷೇರು ಮಾರುಕಟ್ಟೆ ಹೇಗೆ ಸಾಧನೆ ಮಾಡಲಿದೆ ಎಂಬಿತ್ಯಾದಿಯವು. ಹಾಗೆಯೇ, ಯಾವ ವಲಯ ಮತ್ತು ಯಾವ ಷೇರುಗಳು ಈ ಹಿಂಜರಿತದಿಂದ ಕನಿಷ್ಠ ಪರಿಣಾಮಕ್ಕೊಳಗಾಗಲಿವೆ ಎಂಬುದೂ ಇನ್ನೊಂದು ಮುಖ್ಯ ಪ್ರಶ್ನೆ.

ಮಾರುಕಟ್ಟೆ ತಜ್ಞರ ಪ್ರಕಾರ, ಭಾರತದ ಅರ್ಥವ್ಯವಸ್ಥೆ ಜಾಗತಿಕ ಆರ್ಥಿಕತೆಯಿಂದ ಸಂಪೂರ್ಣವಾಗಿ ಹೊರತಾಗಿರುವುದಿಲ್ಲ. ಮಾರುಕಟ್ಟೆಗಳು ಆರ್ಥಿಕ ಪರಿಣಾಮವನ್ನು ಸಂಪೂರ್ಣವಾಗಿಯೇ ಅಲ್ಲಗಳೆದೂ ಇಲ್ಲ. ಒಂದು ವೇಳೆ ಇದರಲ್ಲಿ ಡಿಸ್ಕೌಂಟ್ ದೊರೆತರೆ ಮಾರುಕಟ್ಟೆಗಳು ಸ್ವಲ್ಪ ಕರೆಕ್ಷನ್ ಕಾಣಬಹುದಾಗಿದೆ. ಆದಾಗ್ಯೂ, ಅವರ ಪ್ರಕಾರ, ದೀರ್ಘಕಾಲದಲ್ಲಿ ಭಾರತೀಯ ಮಾರುಕಟ್ಟೆ ಉತ್ತಮ ಸಾಧನೆ ಮಾಡಲಿದೆ. ಏಕೆಂದರೆ ಭಾರತ, ವಿಶ್ವದ ಇತರ ರಾಷ್ಟ್ರಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ.

ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆಯ ತಜ್ಞ ವಿ.ಕೆ. ವಿಜಯಕುಮಾರ್, “ಮಾರುಕಟ್ಟೆ ಈಗಾಗಲೇ ಅಲ್ಪಕಾಲದ ಹಿಂಜರಿತವನ್ನು ಡಿಸ್ಕೌಂಟ್ ಮಾಡಿದ್ದು, ದೀರ್ಘಕಾಲಕ್ಕೆ ಅದನ್ನು ಮಾಡಿಲ್ಲ. ಒಂದು ವೇಳೆ ಅದು ಅಲ್ಪಕಾಲ ಮತ್ತು ಸೌಮ್ಯವಾಗಿದ್ದರೆ ಮಾರುಕಟ್ಟೆ ಈ ಮಟ್ಟದಲ್ಲೇ ದೃಢಗೊಳ್ಳಲಿದೆ. ಆದಾಗ್ಯೂ, ಆರ್ಥಿಕ ಹಿಂಜರಿತ ತೀವ್ರವಾಗಿದ್ದಲ್ಲಿ ಅದರ ಪರಿಣಾಮ ಭಾರತೀಯ ಮಾರುಕಟ್ಟೆಗಳ ಮೇಲೆ ಇರಲಿದೆ” ಎಂದು ಹೇಳುತ್ತಾರೆ.

ಇದನ್ನೂ ಓದಿ: Explainer: ಜಗತ್ತು ಹಣದುಬ್ಬರದಿಂದ ತತ್ತರಿಸಿದರೆ ಚೀನಾಗೆ ಹಣದುಬ್ಬರಕುಸಿತದ ತಲೆನೋವು; ಏನಿದು ಡೀಫ್ಲೇಶನ್? ಆರ್ಥಿಕತೆಯ ಮೇಲೇನು ಪರಿಣಾಮ?

ಇದರ ಪರಿಣಾಮ ಜಾಗತಿಕ ಮಾರುಕಟ್ಟೆಗಿಂತ ಕಡಿಮೆ ಇರಲಿದೆ. ಒಂದು ವೇಳೆ ಜಾಗತಿಕ ಮಾರುಕಟ್ಟೆಯಲ್ಲಿ ಶೇಕಡಾ 10ರಷ್ಟು ಇಳಿಕೆ ಇದ್ದರೆ, ಭಾರತೀಯ ಮಾರುಕಟ್ಟೆ, ಶೇಕಡಾ 4 ರಿಂದ 5ರಷ್ಟು ಇಳಿಕೆಗೆ ಒಳಪಡುವ ಸಾಧ್ಯತೆ ಇದೆ.

ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಭಾರತದ ಮೇಲೆ ಯಾಕೆ ಆಗುವುದಿಲ್ಲ?

ಈಗಿರುವ ಪ್ರಶ್ನೆಯೆಂದರೆ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಭಾರತದ ಮೇಲೆ ಕಡಿಮೆ ಇರಲಿದೆ ಎಂದು ತಜ್ಞರು ಏಕೆ ಭಾವಿಸುತ್ತಾರೆ ಎಂಬುದು? ಇದಕ್ಕೆ ಕಾರಣ ಭಾರತೀಯ ಕಂಪನಿಗಳು ಹತೋಟಿ ತಪ್ಪಿಲ್ಲದಿರುವುದು. ಬ್ಯಾಂಕುಗಳು ಉತ್ತಮ ಸ್ಥಿತಿಯಲ್ಲಿದ್ದು, ಕೆಪೆಕ್ಸ್, ಅಥವಾ ಬಂಡವಾಳ ವೆಚ್ಚದ ವೃತ್ತವು ಅರ್ಥವ್ಯವಸ್ಥೆಯಲ್ಲಿ ಪುನಶ್ಚೇತನಗೊಳ್ಳುತ್ತಿದೆ.

ರಿಟೇಲ್ ಅಥವಾ ಕಾರ್ಪೋರೇಟ್ ಸೆಕ್ಟರ್​ನಲ್ಲಿ ಕ್ರೆಡಿಟ್ ಬೆಳವಣಿಗೆ ಸುಧಾರಿಸುತ್ತಿದೆ. ಆದ್ದರಿಂದ ಅರ್ಥವ್ಯವಸ್ಥೆ ಉತ್ತಮ ಸಾಧನೆ ಮಾಡಲಿದೆ. ಆಯ್ದ ಖಾಸಗಿ ಮತ್ತು ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಬಹುದು ಎಂದು ವಿಜಯಕುಮಾರ್ ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Ancestral Property: ಪಿತ್ರಾರ್ಜಿತವಾಗಿ ಪಡೆಯುವ ಆಸ್ತಿಗೆ ತೆರಿಗೆ ಕಟ್ಟಬೇಕಾ? ಮಾರಿದಾಗ ಎಷ್ಟು ಟ್ಯಾಕ್ಸ್ ಪಾವತಿಸಬೇಕು?

ಮಾರುಕಟ್ಟೆ ತಜ್ಞ ಅಂಬರೀಷ್ ಬಾಳಿಗ ಅವರ ಪ್ರಕಾರ, ದೇಶೀಯ ಬೇಡಿಕೆ ಮೇಲೆ ಅವಲಂಬಿತವಾಗಿರುವ ವಲಯಗಳು ಉತ್ತಮ ಸಾಧನೆ ಮಾಡಲಿವೆ. ಇದರಲ್ಲಿ ಆಟೋ ಮತ್ತು ಎಫ್ಎಂ ಸಿಜಿ ಸೇರಿವೆ. ರಫ್ತು ವಲಯದ ಕಮಾಡಿಟಿ ಆಧಾರಿತ ಮತ್ತು ಐಟಿ ಸ್ಟಾಕುಗಳಿಂದ ದೂರವಿರಬೇಕೆಂಬುದು ಅವರ ಸಲಹೆ.

ಷೇರ್ ಇಂಡಿಯಾದ ಸಂಶೋಧನಾ ಮುಖ್ಯಸ್ಥ ಡಾ. ರವಿ ಸಿಂಗ್, ‘ಆರ್ಥಿಕ ಹಿಂಜರಿತದ ವಾತಾವರಣದಲ್ಲಿ ಐಟಿ, ಫಾರ್ಮಾ ಮತ್ತು ವಿದ್ಯುತ್ ವಲಯದ ಕಂಪನಿಗಳು ಉತ್ತಮ ಸಾಧನೆ ಮಾಡಲಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಟಿಸಿಎಸ್, ಇನ್ಫೋಸಿಸ್, ಅದಾನಿ ಪವರ್ ಮತ್ತು ಸಿಪ್ಲಾ ಸ್ಟಾಕನ್ನು ಅವರು ಶಿಫಾರಸ್ಸು ಮಾಡುತ್ತಾರೆ.

ನೀವು ಸಹ ಆರ್ಥಿಕ ಹಿಂಜರಿತದ ನಡುವೆ ಉತ್ತಮ ಸಾಧನೆ ಮಾಡುವ ಸ್ಟಾಕುಗಳಲ್ಲಿ ಹೂಡಿಕೆ ಮಾಡಬೇಕಿದ್ದರೆ ಈ ತಜ್ಞರ ಸಲಹೆ ಸ್ವೀಕರಿಸಿ.

(ಕೃಪೆ: ಮನಿ9)

ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು